ವಿಜಯಪುರ: ನಗರ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ರೂ.೨ ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಾ.ನಂ.೨ರ ಅಫಜಲಪೂರ ಟಕ್ಕೆ ಹನುಮಾನ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ (ಹೆಚ್ಚುವರಿ) ರೂ.೧೦ ಲಕ್ಷ, ವಾ.ನಂ.೫ರ ಆದರ್ಶ ನಗರದ ಬಸವಣ್ಣ ದೇವಸ್ಥಾನ ಹತ್ತಿರ ಒಳಾಂಗಣ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ (ಹೆಚ್ಚುವರಿ) ರೂ.೧೦ ಲಕ್ಷ, ವಾ.ನ.೬ರ ಕೆ.ಎಚ್.ಬಿ ಕಾಲೊನಿಯ ಸಾಯಿ ಬಾಬಾ ದೇವಸ್ಥಾನ ಹತ್ತಿರ ಒಳಾಂಗಣ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ (ಹೆಚ್ಚುವರಿ) ರೂ.೧೦ ಲಕ್ಷ, ವಾ.ನಂ.೬ರ ಕೆ.ಸಿ ನಗರದ ಹನುಮಾನ ದೇವಸ್ಥಾನ ಹತ್ತಿರ ಒಳಾಂಗಣ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ (ಹೆಚ್ಚುವರಿ) ರೂ.೫ ಲಕ್ಷ, ವಾ.ನಂ.೬ರ ಕಲಾಲ ಗಲ್ಲಿ ಸೂರ್ಯವಂಶ ಕ್ಷತ್ರೀಯ ಕಲಾಲ ಖಾಟಿಕ ಸಮಾಜ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ (ಹೆಚ್ಚುವರಿ) ರೂ.೧೦ ಲಕ್ಷ, ವಾ.ನಂ.೧೪ ಶಹಾಪೇಠ ಗಲ್ಲಿಯ ಮಹಾದೇವ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.೧೦ ಲಕ್ಷ.
ವಾ.ನಂ.೧೭ರ ರಂಭಾಪೂರ ರಾಮಲಿಂಗೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.೧೦ ಲಕ್ಷ, ವಾ.ನಂ.೨೬ ದಿವಟಗೇರಿ ಗಲ್ಲಿಯ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ (ಹೆಚ್ಚುವರಿ) ರೂ.೫ ಲಕ್ಷ, ವಾ.ನಂ.೩೫ರ ಕೆ.ಎಸ್.ಆರ್.ಟಿ.ಸಿ ವರದ ಹನುಮಾನ ದೇವಸ್ಥಾನದ ಹತ್ತಿರ ಒಳಾಂಗಣ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ರೂ.೫ ಲಕ್ಷ, ವಾ.ನಂ.೩೫ರ ಭೋಥರಾ ಕಾಲೋನಿಯ ಮಾರುತಿ ವೀಕಾಸ ಸೇವಾ ಸಂಘದ ಹತ್ತಿರ ಒಳಾಂಗಣ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ (ಹೆಚ್ಚುವರಿ) ರೂ.೧೦ ಲಕ್ಷ, ನವರಸಪೂರ ಎನ್.ಜಿ.ಓ ಕಾಲೊನಿಯ ಜೈ ಹನುಮಾನ ಮಂದಿರ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ (ಹೆಚ್ಚುವರಿ) ರೂ.೭ ಲಕ್ಷ ಅನುದಾನ ಮಂಜೂರಿಸಲಾಗಿದೆ.
ವಾ.ನಂ.೪ರ ಭೂತನಾಳ ತಾಂಡಾ ದುರ್ಗಾದೇವಿ ದೇವಸ್ಥಾನ ಹತ್ತಿರ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ರೂ.೧೫ ಲಕ್ಷ, ವಾ.ನಂ.೧೧ರ ಅಟಲ್ ಬಿಹಾರಿ ವಾಪೇಯಿ ಮಾರ್ಗ ರಜಪೂತ ಗಲ್ಲಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ (ಹೆಚ್ಚುವರಿ) ರೂ.೧೦ ಲಕ್ಷ, ತೊರವಿ ಎಲ್.ಟಿ ನಂ.೧ರ ಕಾಳಿಕಾ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.೭ ಲಕ್ಷ, ತೊರವಿ ಎಲ್.ಟಿ-೧ ಯಲ್ಲಮ್ಮದೇವಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.೬ ಲಕ್ಷ, ತೊರವಿ ಎಲ್.ಟಿ-೩ರ ಮರಗಮ್ಮ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.೫ ಲಕ್ಷ.
ವಾ. ನಂ.೧೪ರ ಸುಣಗಾರ ಗಲ್ಲಿಯ ಹುಲಿ ಬೆನ್ನವ್ವ ಗುಡಿ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ (ಹೆಚ್ಚುವರಿ) ರೂ.೫ ಲಕ್ಷ, ಸರ್ಕಾರಿ ಜಿಲ್ಲಾ ಆಸ್ಪತ್ರೆಯ ರೋಗಿಗಳ ನೋಂದಣಿ ಕೊಠಡಿ ನಿರ್ಮಾಣಕ್ಕೆ (ಹೆಚ್ಚುವರಿ) ರೂ.೨೦ ಲಕ್ಷ, ವಾ.ನಂ.೪ರ ವಾಲಿಕಾರ ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ.೫೨ರ ಕೊಠಡಿ ನಿರ್ಮಾಣಕ್ಕೆ ರೂ.೧೦ ಲಕ್ಷ, ವಾ.ನಂ.೨೪ರ ಕಮಾನಖಾನ್ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.೧೮ರ ಕೊಠಡಿ ನಿರ್ಮಾಣಕ್ಕೆ ರೂ.೧೦ ಲಕ್ಷ ಹಾಗೂ ವಿಕಲಚೇತನರಿಗೆ (ಅಂಗವಿಕಲ) ತ್ರೀಚಕ್ರ ವಾಹನ ಕಲ್ಪಿಸುವುಕ್ಕೆ ರೂ.೨೦ ಲಕ್ಷ ಅನುದಾನ ಕಾಯ್ದಿರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳಿಗೆ ರೂ.೨ ಕೋಟಿ ಮಂಜೂರು :ಶಾಸಕ ಯತ್ನಾಳ
Related Posts
Add A Comment