ಉದಯರಶ್ಮಿ ದಿನಪತ್ರಿಕೆ
ಕೊಲ್ದಾರ: ಪಟ್ಟಣದ ಶ್ರೀ ದ್ಯಾಮವ್ವ ದೇವಿ ಸೇವಾ ಸಮಿತಿ ಹಾಗೂ ಸ್ಥಳೀಯ ಕಲಾವಿದರ ಬಳಗದ ಸಹಯೋಗದಲ್ಲಿ ಶ್ರಾವಣ ಮಾಸದ ಪರ್ಯಂತ ಕೈಗೊಂಡ ಹರ ಭಜನೆ ಮುಕ್ತಾಯ ಸಮಾರಂಭದ ಪ್ರಯುಕ್ತ 18ನೇ ವರ್ಷದ ಭಜನಾ ತಂಡಗಳ ಸ್ಪರ್ಧಾ ಕಾರ್ಯಕ್ರಮವನ್ನು ಆ.26ರಂದು ಬೆಳಗ್ಗೆ 9.25ಕ್ಕೆ ನಡೆಯಲಿದೆ ಎಂದು ದ್ಯಾಮವ್ವ ದೇವಿ ಸೇವಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ ಹಾಗೂ ಕಾರ್ಯದರ್ಶಿ ಈರಯ್ಯ ಮಠಪತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ 53ನೇ ವರ್ಷದ ಭಜನಾ ಮುಕ್ತಾಯ ಸಮಾರಂಭ ನಿಮಿತ್ತ ಭಜನಾ ಸ್ಪರ್ಧೆ ನಡೆಯಲಿದೆ. ಆಸಕ್ತ ಭಜನಾ ತಂಡಗಳು ಭಾಗವಹಿಸಬಹುದು. ಸ್ಪರ್ಧೆ ವಿಜೇತ ತಂಡಗಳಿಗೆ ಪ್ರಥಮ 21001, ದ್ವಿತೀಯ 15001, ತೃತೀಯ 11100, ಚತುರ್ಥ 7501 ಹಾಗೂ 5ನೇಯ 5001 ರೂಪಾಯಿಗಳ ಬಹುಮಾನವನ್ನು ಪಟ್ಟಣದ ಪ್ರಗತಿಪರ ರೈತರು ಕೊಡಮಾಡಿದ್ದು ಅವುಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿ ತಂಡಕ್ಕೆ ಒಂದು ಸಾವಿರ ರೂಪಾಯಿಗಳನ್ನು ಕೊಡಲಾಗುತ್ತದೆ. ಆಸಕ್ತರು ಕಲಾವಿದ ಭೀಮಪ್ಪ ಬೀಳಗಿ ಮೊ: 9902453741 ಹಾಗೂ ಮಲ್ಲಪ್ಪ ಗಣಿ ಮೊ: 9916608449ಗೆ ಸಂಪರ್ಕಿಸಬಹುದು.