ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಶರಣಮಾಸದ 16 ನೆಯ ದಿವಸದ ಉಪನ್ಯಾಸ ಮಾಲಿಕೆಯಲ್ಲಿ ಪ್ರೊ. ಪೊಲೀಸ್ ಪಾಟೀಲ ಅವರು ಜಾನಪದ ಸಾಹಿತ್ಯದಲ್ಲಿ ಶರಣರ ನೆನಹು ಎನ್ನುವ ವಿಷಯದ ಬಗೆಗೆ ಅತ್ಯಂತ ಸಮರ್ಪಕವಾಗಿ ನಮ್ಮೊಡನೆ ಹಂಚಿಕೊಂಡರು.
ಜಾನಪದಿಗರ ತ್ರಿಪದಿಗಳಲ್ಲಿ, ಹಾಡುಗಳಲ್ಲಿ,ತೊಂಬತ್ತರಷ್ಟು ಪಾಲು ಬಸವಣ್ಣನವರನ್ನು ನೆನೆಯುವುದನ್ನು ನಾವು ಕಾಣುತ್ತೇವೆ. ಹಂತಿ ಹೊಡೆಯುವಾಗ, ರಾಶಿ ಮಾಡುವಾಗ ಬೀಸುವಾಗ, ಕುಟ್ಟುವಾಗ ಹಾಡುವ ಪದಗಳ
ಸ್ವಾರಸ್ಯ, ಅದರ ತಿರುಳು, ಮಹತ್ವವನ್ನು ಹೇಳುತ್ತಾ ಹಂತಿಯ ಅನಸ್ವರ ತೆಗೆದರೆ ಹತ್ತಿ ಆಗುತ್ತದೆ. ಹತ್ತಿ ಎಂದರೆ ಗಿರಿಯನ್ನು ಹತ್ತುವುದು, ಪ್ರಪಂಚವೆಂಬ ಕಣದಲ್ಲಿ ತನ್ನ ತಾನು ಅರಿಯುವುದು, ಪ್ರಪಂಚ, ಪಾರಮಾರ್ಥ ಮತ್ತು ಪರಾರ್ಥ ಎಂಬ ಮೂರು ಹುರಿಯನ್ನು ಹೊಸೆದು ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎನ್ನುವುದನ್ನು ಜಾನಪದಿಗರು ಹೇಳುವುದನ್ನು ಅತ್ಯಂತ ಸರಳ ರೀತಿಯಲ್ಲಿ ಹೇಳಿದರು
ಜಾನಪದಿಗರು ಎರಡು ನೆಲೆಯಲ್ಲಿ ಬಸವಣ್ಣನವರನ್ನು ಕಂಡುಕೊಂಡರು. ಹೆಗಲಿಗೆ ಹೆಗಲು ಕೊಟ್ಟು, ಕೃಷಿಗೆ ಆಧಾರಿತವಾದ ಎತ್ತು ಬಸವಣ್ಣ ಮತ್ತು ಅವರ ಬದುಕನ್ನು ಎತ್ತಿ ಕೊಟ್ಟ, ಆನುಭಾವಿಕ ನೆಲೆಯಲ್ಲಿ ಉದ್ದರಿಸಿದ, ದೇವರನ್ನಾಗಿ ಆರಾಧಿಸುವ ಬಸವಣ್ಣನವರನ್ನು ಎಂದು ಹೇಳುತ್ತಾ, ಮಧ್ಯ ಮಧ್ಯ ಅತ್ಯಂತ ಸೊಗಸಾಗಿ ತಾವೇ ರಚಿಸಿದ ಹಂತಿ ಪದಗಳನ್ನು ಮತ್ತು ಜಾನಪದ ಹಾಡುಗಳನ್ನು ಹಾಡುತ್ತಾ ನಿಜವಾದ ಅರ್ಥದಲ್ಲಿ ಶರಣರ ನೆನಹು ಗಳನ್ನು ಕಟ್ಟಿಕೊಟ್ಟರು
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು,
ಶರಣರ ನೆನೆದರೆ ಸರಗೀಯ ಇಟ್ಟಂಗ
ಅರಳಿ ಮಲ್ಲಿಗೆ ಮುಡಿದಂಗ
ಕಲ್ಯಾಣದ ಶರಣರ ನೆನೆಯೊ ಎಲೆ ಮನವೇ।।
ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳ
ಮೊಗ್ಗು ಮಲ್ಲಿಗೆ ಅರಳ್ಯಾವ
ಯಾಲಕ್ಕಿ ಗೊನೆ ಬಾಗಿ ಹಾಲು ಸುರಿದಾವ.
ಬಸವಣ್ಣ ಬಂದರೆ ಸಾಕು ಉರಿಯುವ ಬಿಸಿಲು ಕೂಡ ತಂಪಾದ ಬೆಳದಿಂಗಳ ನೀಡಿದಂತಾಗುತ್ತದೆ. ಮೊಗ್ಗು ಕೂಡ ಅರಳಿ ಹೂವಾಗುತ್ತದೆ. ಎನ್ನುತ್ತಾ ನಮ್ಮೆಲ್ಲ ಕಷ್ಟಗಳು ಕೂಡ ದೂರವಾಗುತ್ತವೆ ಅನ್ನುತ್ತಾರೆ ಶರಣರು.
ಮಲ್ಲಿಗೆ ಇರುವಾಗ ಮುಳ್ಯಾಕ ಮುಡಿಯುವೆ
ಕಲ್ಯಾಣದಲ್ಲಿ ಬಸವಣ್ಣ ಇರುವಾಗ
ಕಲ್ಲಿಗೆ ಕೈಯಾಕ ಮುಗಿಯುವೆ।।
ಕಲ್ಯಾಣದಲ್ಲಿ ಸಾಕ್ಷಾತ್ ಬಸವಣ್ಣನೇ ಇರುವಾಗ ಕಲ್ಲಿಗೆ ಏಕೆ ಕೈ ಮುಗಿವೆ? ಎನ್ನುವರು ಶರಣರು
ಶರಣರ ವ್ಯಕ್ತಿತ್ವ ಮಹಾನುಭಾವತ್ವ, ತತ್ವ-ಸಿದ್ಧಾಂತ ಹಾಗೂ ಜೀವನಪದ್ಧತಿಯನ್ನು ಕಂಡವರಿಂದ ಕೇಳಿರಬಹುದಾದ ಜನಪದ ಅಜ್ಞಾತ ಕವಿಗಳು ತಮ್ಮದೇ ಆದ ಹಾಡುಗಳ ಪ್ರಕಾರಗಳಲ್ಲಿ,ಕಥೆಗಳಲ್ಲಿ, ಲಾವಣಿಗಳಲ್ಲಿ, ಕಂಡ ಕಾವ್ಯಗಳಲ್ಲಿ, ವಿಶೇಷವಾಗಿ ತ್ರಿಪದಿಯಂಥ ಹಂತಿ ಹಾಡುಗಳಲ್ಲಿ ಹಿಡಿದಿರಿಸಿಕೊಂಡಿದ್ದಾರೆ.
ಶ್ರಮ ಸಂಸ್ಕೃತಿಯ ಶರಣರ ಬದುಕು, ಕಾಯಕ-ದಾಸೋಹ ಪದ್ಧತಿ, ಪ್ರಾಮಾಣಿಕ ಜೀವನ, ಧಾರ್ಮಿಕ ಸಾಮಾಜಿಕ ಸಂಬಂಧಗಳು,ಅವರ ಮಾನವೀಯ ಗುಣಗಳು ದುಡಿಯುವ ವರ್ಗದ ಜೀವನವನ್ನು ಜನಪದರು ತಮ್ಮ ಹಾಡಿನಲ್ಲಿ ಕಟ್ಟಿದ್ದಾರೆ ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ಡಾ. ಸುಗುಣ ಮಲ್ಲೇಶ ಅವರ ವಚನ ಪ್ರಾರ್ಥನೆ, ಡಾ. ಸರಸ್ವತಿ ಪಾಟೀಲ ಅವರ ಸ್ವಾಗತ, ಡಾ. ವೀರಾಕ್ಷಿ ವಿವೇಕಿ ಅವರ ಶರಣು ಸಮರ್ಪಣೆ, ಶರಣೆ ವಿಜಯಮಹಾಂತಮ್ಮ ಅವರ ವಚನ ಮಂಗಳ ಮತ್ತು ಶರಣೆ ಜಯಶ್ರೀ ಆಲೂರ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.

ವಿಶೇಷ ದತ್ತಿ ಉಪನ್ಯಾಸ – 314
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶ್ರೀ ಶಿವಾನಂದ ಕಲಕೇರಿ ಆಯುಕ್ತರು, ಆದಾಯ ತೆರಿಗೆ ಇಲಾಖೆ ಬೆಂಗಳೂರು ಇವರ ತಂದೆ ಲಿಂ. ಹಣಮಂತರಾಯ ಕಲಕೇರಿ ಮತ್ತು ಲಿಂ.ಗಿರಿಜಾದೇವಿ ಕಲಕೇರಿ ಅವರ ಸ್ಮರಣಾರ್ಥ ವಿಶೇಷ ದತ್ತಿ ಉಪನ್ಯಾಸ – 314


