ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಿಮ್ಮ ಕಾರ್ಯ ಚಟುವಟಿಕೆಯಿಂದ ಮುಂಬರುವ ದಿನಮಾನಗಳಲ್ಲಿ ಮಹಿಳಾ ವಿವಿ ಎತ್ತರೋತ್ತರವಾಗಿ ಬೆಳೆಯಲಿ. ನಿಮ್ಮ ಕಲಾವಧಿಯಲ್ಲಿ ವಿವಿಯು ಸರ್ವಾಂಗೀಣ ಅಭಿವೃದ್ಧಿಯಾಗಲಿ ಎಂದು ಯಂಕಂಚಿ ಕುಂಟೋಜಿ ಹಿರೇಮಠದ ಪೀಠಾಧಿಪತಿ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಇತ್ತೀಚಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಗೆ ೬ನೆಯ ನೂತನ ಕುಲಪತಿಯಾಗಿ ನೇಮಕಗೊಂಡ ಪ್ರೊ.ವಿಜಯಾ ಕೋರಿಶೆಟ್ಟಿ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ನಮ್ಮ ಜಿಲ್ಲೆಯ ಹೆಣ್ಣು ಮಗಳಿಗೆ ಈ ಅವಕಾಶ ದೊರತದ್ದು ಸಂತಸ ತಂದಿದೆ ಎಂದರು.
ಈ ವೇಳೆ ಸನ್ಮಾನವನ್ನು ಸ್ವೀಕರಿಸಿದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಹರ ಗುರು ಚರಮೂರ್ತಿಗಳ ಆಶೀವಾದದಿಂದ ವಿಶ್ವವಿದ್ಯಾಲಯವು ಸಮಗ್ರ ಅಭಿವೃದ್ಧಿ ಹೊಂದಲಿ ಎನ್ನುವುದೇ ನನ್ನ ಮಹದಾಸೆಯಾಗಿದೆ. ಸದಾ ಕಾಲ ತಮ್ಮ ಆಶೀರ್ವಾದ, ಮಾರ್ಗದರ್ಶನ ನಮ್ಮ ಮೇಲಿರಲಿ ಎಂದರು.
ಈ ವೇಳೆ ತನಸಹಳ್ಳಿ ಶ್ರೀಮಠದ ಚರಂತೇಶ್ವರ ಶಿವಾಚಾರ್ಯರು, ಮಹಿಳಾ ವಿವಿಯ ಡಾ.ರಾಜಕುಮಾರ ಮಾಲಿಪಾಟೀಲ, ವಿಜಯಕುಮಾರ ಸೇರಿದಂತೆ ಇತರರು ಇದ್ದರು.

