ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೈತರಿಗೆ ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಗಳ ಕುರಿತು ತಾಂತ್ರಿಕ ಮತ್ತು ಪ್ರಾಯೋಗಿಕ ಜ್ಞಾನ ಒದಗಿಸುವ ಉದ್ದೇಶದಿಂದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಅ.೭ರಿಂದ ೯ರವರೆಗೆ ಮೂರು ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ.
ತರಬೇತಿಯಲ್ಲಿ ಮಣ್ಣಿನ ಆರೋಗ್ಯ, ಪೋಷಕಾಂಶ ನಿರ್ವಹಣೆ, ಮಿಶ್ರಬೆಳೆ, ಅಂತರಬೆಳೆ, ಬೀಜಾಮೃತ, ಜೀವಾಮೃತ, ಪಂಚಗವ್ಯ, ಕಾಂಪೋಸ್ಟ್, ಜೈವಿಕ ಗೊಬ್ಬರ, ಸಮಗ್ರ ಕೀಟ ನಿರ್ವಹಣೆ ಹಾಗೂ ನೈಸರ್ಗಿಕ ಸಸ್ಯ ಸಂರಕ್ಷಣಾ ವಿಧಾನಗಳ ಕುರಿತು ಮಾಹಿತಿ ನೀಡಲಾಗುವುದು. ಜತೆಗೆ ಪ್ರಾಯೋಗಿಕ ತರಬೇತಿ, ಕ್ಷೇತ್ರ ಭೇಟಿ, ಕೊಯ್ಲೋತ್ತರ ನಿರ್ವಹಣೆ, ಗ್ರೇಡಿಂಗ್, ಪ್ಯಾಕೇಜಿಂಗ್, ಬ್ರ‍್ಯಾಂಡಿಂಗ್ ಹಾಗೂ ನೇರ ಮಾರಾಟ ಕುರಿತು ತಿಳಿಸಲಾಗುವುದು.
ಗರಿಷ್ಠ ೫೦ ರೈತರಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಅ.೫ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಭಾಗವಹಿಸುವ ರೈತರಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುವುದು. ಮೂರು ದಿನಗಳ ತರಬೇತಿಗೆ ಸಂಪೂರ್ಣ ಹಾಜರಾದವರಿಗೆ ಪ್ರಮಾಣಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಕೃಷಿ ಅಧಿಕಾರಿಗಳಾದ ಎಂ.ಆರ್. ಮೈದರಗಿ: ೮೨೭೭೯೩೦೬೧೫, ಫಾತೀಮಾ ಬಾನು ಸುತಾರ್: ೮೨೭೭೯೩೦೬೧೯, ಗೀತಾ ಭಜಂತ್ರಿ: ೯೯೮೬೦೫೪೭೫೦ ಹಾಗೂ ೦೮೩೫೨-೨೯೫೨೭೮ ಸಂಪರ್ಕಿಸಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
