Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅ.೭ರಿಂದ ರೈತರಿಗೆ ಸಾವಯವ ಕೃಷಿ ಉಚಿತ ತರಬೇತಿ

ಹಿರಿಯರ ಜೀವನಾನುಭವ ಸದೃಢ ಸಮಾಜ ನಿರ್ಮಾಣಕ್ಕೆ ಅಗತ್ಯ

ಆಲಮಟ್ಟಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಆಗ್ರಹ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಬೆವರಿನ ಅನ್ನದ ಮಹತ್ವ
ವಿಶೇಷ ಲೇಖನ

ಬೆವರಿನ ಅನ್ನದ ಮಹತ್ವ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನಾವೆಲ್ಲರೂ ಮೈಮುರಿದು ಕೆಲಸವನ್ನು ಮಾಡಿಯೇ ಹೊಟ್ಟೆ ತುಂಬಾ ಉಣ್ಣುವಂತ ವ್ಯವಸ್ಥೆಗೆ ಒಳಪಟ್ಟಲ್ಲಿ ತಿಂದುಂಡು ಸೋಮಾರಿಗಳಂತೆ ಅಲೆದಾಡುವುದು ತಪ್ಪುತ್ತದೆ.

– ಸಂತೋಷ್ ರಾವ್ ಪೆರ್ಮುಡ
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ – ದ.ಕ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಜಪಾನ್ ದೇಶದ ಝೆನ್ ಬೌದ್ಧ ತತ್ವಜ್ಞಾನದಲ್ಲಿ ಒಂದು ಕಥೆಯಿದೆ. ಬೌದ್ಧ ಝೆನ್‌ಗಳ ಆಶ್ರಮದಲ್ಲಿ ಗುರುಗಳಾದ ಯಾಕೋ ಜೋ ಎಂಬಾತ ವಾಸವಿರುತ್ತಾನೆ. ಆತನಿಗೆ ಬಹುದೊಡ್ಡ ಆಪ್ತ ಶಿಷ್ಯರ ಬಳಗವಿರುತ್ತದೆ. ಯಾಕೋ ಜೋಗೆ ೮೦-೯೦ ವರ್ಷ ವಯಸ್ಸಾಗಿ ಮುದಿಯಾಗಿ ಕೆಲಸ ಮಾಡಲು ಸಾಧ್ಯವೇ ಇಲ್ಲದಂತಹ ದೈಹಿಕ ಶಕ್ತಿಹೀನತೆ ಸ್ಥಿತಿಗೆ ತಲುಪುತ್ತಾನೆ. ಆದರೂ ತಾನು ಮೂರು ಹೊತ್ತು ಮಾಡುವ ಊಟಕ್ಕಾಗಿ ಕನಿಷ್ಟ ಕೆಲಸವನ್ನಾದರೂ ಮಾಡಬೇಕೆಂಬ ಉದ್ದೇಶದಿಂದ ಆತನಿದ್ದ ಮನೆಯ ಅಂಗಳವೆಲ್ಲ ಅಲೆದಾಡುತ್ತಾ ಸಣ್ಣದಾದ ಕತ್ತಿ ಮತ್ತು ಗುದ್ದಲಿಗಳಿಂದ ಅಂಗಳವನ್ನು ಸ್ವಚ್ಛಗೊಳಿಸುವ ಕೆಲಸಗಳನ್ನು ಮಾಡುತ್ತಿರುತ್ತಾನೆ. ವಯಸ್ಸಾದ ತಮ್ಮ ಗುರುಗಳು ಕಷ್ಟಪಟ್ಟು ಕೆಲಸ ಮಾಡುವುದನ್ನು ಗಮನಿಸಿದ ಶಿಷ್ಯಂದಿರು ಮರುಕಪಡುತ್ತಾರೆ.
ಹಲವು ದಿನಗಳ ಕಾಲ ಗುರುಗಳ ಈ ಕಾರ್ಯವೈಖರಿಯನ್ನು ಗಮನಿಸಿದ ಶಿಷ್ಯಂದಿರು ಗುರುವಿನ ನಿರಂತರ ಕೆಲಸದ ಹಿಂದಿನ ಮರ್ಮವನ್ನು ಅರಿಯುವ ಪ್ರಯತ್ನವನ್ನು ಮಾಡುತ್ತಾರೆ. ಕೊನೆಗೂ ಉತ್ತರ ದೊರಕದೇ ಇದ್ದಾಗ ಗುರುವಿನ ದೈನಂದಿನ ಕೆಲಸದ ಗುದ್ದಲಿ ಮತ್ತು ಸಣ್ಣ ಕತ್ತಿಯನ್ನು ಅಡಗಿಸಿಡುವ ನಿರ್ಧಾರವನ್ನು ಮಾಡಿ ಅವುಗಳನ್ನು ಗುರುಗಳಿಗೆ ಕಾಣಿಸದಂತೆ ಎತ್ತಿಡುತ್ತಾರೆ. ಎಂದಿನಂತೆ ಗುರುಗಳು ಬೆಳಗ್ಗೆ ಎದ್ದಾಗ ಅವರ ಗುದ್ದಲಿ, ಬುಟ್ಟಿ ಮತ್ತು ಸಣ್ಣ ಕತ್ತಿ ಕಾಣಿಸುವುದಿಲ್ಲ. ತನ್ನ ನಿತ್ಯದ ಕೆಲಸದ ಸಾಮಗ್ರಿಗಳು ಕಾಣಿಸದೇ ಇರುವುದನ್ನು ಗಮನಿಸಿದ ಗುರುಗಳು ಎಲ್ಲೆಡೆ ತೀವ್ರ ಹುಡುಕಾಟವನ್ನು ನಡೆಸುತ್ತಾರೆ. ಆದರೂ ತನ್ನ ಕೆಲಸದ ಪರಿಕರಗಳು ಸಿಗದಿದ್ದಾಗ ಬೇಸರದಿಂದ ತನ್ನ ಆಶ್ರಮಕ್ಕೆ ಬಂದು ಮುಸುಕು ಹಾಕಿ ಮಲಗುತ್ತಾರೆ. ಊಟದ ಸಮಯವಾದಾಗ ಆಶ್ರಮದ ಶಿಷ್ಯಂದಿರು ಗುರುಗಳನ್ನು ಊಟಕ್ಕೆ ಕರೆಯುತ್ತಾರೆ. ಆದರೆ ಗುರುಗಳು ನನಗೆ ಹಸಿವಿಲ್ಲ, ನಾನು ಊಟ ಮಾಡುವುದಿಲ್ಲವೆಂದು ಹೇಳಿ ಮತ್ತೆ ನಿದ್ದೆ ಮಾಡುತ್ತಾರೆ. ಇವತ್ತೊಂದು ದಿನವಷ್ಟೇ ಗುರುಗಳು ಊಟ ಮಾಡಿಲ್ಲ, ಪರವಾಗಿಲ್ಲ ನಾಳೆ ಮಾಡಬಹುದು ಮತ್ತು ಎಲ್ಲವೂ ಸರಿಹೋಗುತ್ತದೆ ಎಂಬ ಆಶಾಭಾವದೊಂದಿಗೆ ಶಿಷ್ಯಂದಿರು ಸುಮ್ಮನಾಗುತ್ತಾರೆ. ಹೀಗೆ ಒಂದು ದಿನ ಕಳೆದು ಹೋಗುತ್ತದೆ.
ಎರಡನೇ ದಿನವೂ ಗುರುಗಳು ಮುಸುಕು ಹಾಕಿ ನಿದ್ದೆ ಮಾಡುತ್ತಿರುತ್ತಾರೆ. ಊಟದ ಸಮಯದಲ್ಲಿ ಎಬ್ಬಿಸಿದಾಗ ಮತ್ತೆ ಅದೇ ರೀತಿ ನನಗೆ ಹಸಿವಿಲ್ಲ ಎಂಬ ಉತ್ತರವನ್ನು ಹೇಳುತ್ತಾರೆ. ಇದೇ ರೀತಿ ನಿರಂತರವಾಗಿ ಮೂರು ದಿನಗಳು ಕಳೆದು ಹೋಗುತ್ತವೆ. ನಾಲ್ಕನೇ ದಿನ ಶಿಷ್ಯಂದಿರು ಭಯಭೀತರಾಗಿ ಗುರುಗಳಿಗೆ ಏನು ಸಮಸ್ಯೆಯಾಗಿದೆ ಎಂದು ಭಾವಿಸಿ ಏಕೆ ತಾವು ಊಟ ಮಾಡುತ್ತಿಲ್ಲವೆಂದು ಪ್ರಶ್ನೆಯನ್ನು ಹಾಕುತ್ತಾರೆ. ಆಗ ಗುರುಗಳು ಬೇಸರದಿಂದ ನಾನು ನಿತ್ಯ ಕೆಲಸ ಮಾಡುವ ಕೆಲಸದ ಪರಿಕರಗಳು ಕಾಣುತ್ತಿಲ್ಲ ಅದಕ್ಕಾಗಿ ನಾನು ಊಟವನ್ನು ಮಾಡದೆ ನಿದ್ದೆ ಮಾಡುತ್ತಿದ್ದೇನೆ ಎನ್ನುತ್ತಾರೆ. ಶಿಷ್ಯಂದಿರು ತಾವು ಅಡಗಿಸಿಟ್ಟ ಗುರುಗಳ ನಿತ್ಯ ಕೆಲಸದ ಪರಿಕರಗಳನ್ನು ಮರಳಿ ನೀಡುತ್ತಾರೆ. ಇದರಿಂದ ಖುಷಿಯಾದ ಗುರುಗಳು ಮತ್ತೆ ನಿತ್ಯ ತನ್ನ ಆಶ್ರಮದ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸುವ ಮೈಮುರಿದು ಕೆಲಸ ಮಾಡುತ್ತಾ ಊಟವನ್ನು ಮಾಡುತ್ತಾರೆ. ಅಂದರೆ ಯಾಕೋ ಜೋ ‘ತಾನು ಮೈಮುರಿದು ಕೆಲಸವನ್ನು ಮಾಡದ ಹೊರತಾಗಿ ನನಗೆ ಉಣ್ಣುವ ಹಕ್ಕಿಲ್ಲ’ ಎಂಬ ತತ್ವದೊಂದಿಗೆ ಶ್ರಮ ಜೀವಿಯಾಗಿ ಬೆವರಿನ ಅನ್ನದ ಪರಿಕಲ್ಪನೆಯಡಿಯಲ್ಲಿ ಜೀವನ ಸಾಗಿಸುತ್ತಾರೆ. ಓo ತಿoಡಿಞ, ಟಿo ಜಿooಜ ಎಂಬ ಮಾತಿನಂತೆ ನಾವೆಲ್ಲರೂ ಮೈಮುರಿದು ಕೆಲಸವನ್ನು ಮಾಡಿಯೇ ಹೊಟ್ಟೆ ತುಂಬಾ ಉಣ್ಣುವಂತ ವ್ಯವಸ್ಥೆಗೆ ಒಳಪಟ್ಟಲ್ಲಿ ತಿಂದುಂಡು ಸೋಮಾರಿಗಳಂತೆ ಅಲೆದಾಡುವುದು ತಪ್ಪುತ್ತದೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅ.೭ರಿಂದ ರೈತರಿಗೆ ಸಾವಯವ ಕೃಷಿ ಉಚಿತ ತರಬೇತಿ

ಹಿರಿಯರ ಜೀವನಾನುಭವ ಸದೃಢ ಸಮಾಜ ನಿರ್ಮಾಣಕ್ಕೆ ಅಗತ್ಯ

ಆಲಮಟ್ಟಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಆಗ್ರಹ

ಕಬ್ಬಿನ ಗದ್ದೆಯ ಮರೆಯಲ್ಲಿ ಗಾಂಜಾ ಬೆಳೆ! ಆರೋಪಿ ಬಂಧನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅ.೭ರಿಂದ ರೈತರಿಗೆ ಸಾವಯವ ಕೃಷಿ ಉಚಿತ ತರಬೇತಿ
    In (ರಾಜ್ಯ ) ಜಿಲ್ಲೆ
  • ಹಿರಿಯರ ಜೀವನಾನುಭವ ಸದೃಢ ಸಮಾಜ ನಿರ್ಮಾಣಕ್ಕೆ ಅಗತ್ಯ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಕಬ್ಬಿನ ಗದ್ದೆಯ ಮರೆಯಲ್ಲಿ ಗಾಂಜಾ ಬೆಳೆ! ಆರೋಪಿ ಬಂಧನ
    In (ರಾಜ್ಯ ) ಜಿಲ್ಲೆ
  • ಸಾಮಾಜಿಕ ಭದ್ರತಾ ಪಿಂಚಣಿ ಪುನರಾರಂಭಕ್ಕೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಸೌಹಾರ್ದ ಸಮಾಜ ನಿರ್ಮಾಣಕ್ಕೆ ಗಾಂಧಿ ಮಾರ್ಗವೇ ದಾರಿದೀಪ
    In ವಿಶೇಷ ಲೇಖನ
  • ಹ್ಯಾಂಡ್‌ಬಾಲ್‌: ಸತತ 3ನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಬೆವರಿನ ಅನ್ನದ ಮಹತ್ವ
    In ವಿಶೇಷ ಲೇಖನ
  • ವಠಾರ – ವಿಸ್ತಾರ – ವಿಹಾರ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 01,2026
    In ದಿನಪತ್ರಿಕೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.