ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ನಗರದ ಶ್ರೀ ಎಸ್.ಎಸ್.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಎಚ್.ಎಸ್. ಪಾಟೀಲ ಪದವಿ ಪೂರ್ವ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಹ್ಯಾಂಡ್‌ಬಾಲ್ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿಜಯಪುರದ ವಿ.ಬಿ. ದರಬಾರ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. ವಿಶೇಷವಾಗಿ, ಕಾಲೇಜಿನ ವಿದ್ಯಾರ್ಥಿಗಳು ಸತತವಾಗಿ ಮೂರು ಬಾರಿ ರಾಜ್ಯಮಟ್ಟದ ಹ್ಯಾಂಡ್‌ಬಾಲ್ ಸ್ಪರ್ಧೆಗೆ ಆಯ್ಕೆಯಾಗಿರುವುದು ಸಂಸ್ಥೆಯ ಕ್ರೀಡಾ ಕ್ಷೇತ್ರದ ಸಾಧನೆಗೆ ಮತ್ತೊಂದು ಗರಿಮೆ ತಂದಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಾಲೇಜಿನ ಕ್ರೀಡಾ ವಿಭಾಗದ ಮಾರ್ಗದರ್ಶಕರಾದ ಎಸ್.ಬಿ. ಮಂಗ್ಯಾಳ, ಸಿದ್ದಾರ್ಥರೆಡ್ಡಿ, ಎಂ.ಎಸ್. ರಾಯಗೊಂಡ, ಶರಣು ಬಿರಾದಾರ, ಸಾಬಣ್ಣ ಮೇಟಿ, ಕುಮಾರಿ ಆರ್.ಬಿ. ಪಾಟೀಲ, ವಿ.ಎಸ್. ಬೀರಾದಾರ, ಎಂ.ಬಿ. ವಾಲಿಕಾರ, ಎಸ್.ಎಂ. ಖಿಂಡಿಮನಿ, ಎಸ್.ಎ. ಬಸವಂತಪುರ, ಶ್ರೀಮತಿ ಸಿ.ಬಿ. ಪಾಟೀಲ, ಶ್ರೀಮತಿ ಎಸ್.ಜಿ. ಪಾಟೀಲ, ಪಿ.ಬಿ. ಚವಡಕರ ಹಾಗೂ ಅನಿಲ ಚಟ್ಟರಕಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.

