ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅನಾಮಧೇಯ ಅಂದಾಜು ೪೦ ರಿಂದ ೪೫ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮಧೇಯ ವ್ಯಕ್ತಿಯ ವಾರಸುದಾರರ ಪತ್ತೆಗೆ ಠಾಣಾಧಿಕಾರಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪತ್ತೆಯಾದ ವ್ಯಕ್ತಿಯು ೫.೧ ಪೂಟ್ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಕಪ್ಪು ತಲೆಗೂದಲು, ಬಿಳಿ ಹಾಗೂ ಕೆಂಪು ಪಟ್ಟಿ ಬಣ್ಣದ ಫುಲ್ ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಸಾರ್ವಜನಕರು ವಿಜಯಪುರ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ ೦೮೩೫೨-೨೫೦೮೪೪ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ೦೮೩೫೨-೨೫೦೯೨೩ಗೆ ಸಂಪರ್ಕಿಸಬಹುದಾಗಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
