ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಸಿಂದಗಿ ರಸ್ತೆಯಲ್ಲಿನ ಮೋಹನ ಬುದ್ನಿ ಎಂಬುವವರಿಗೆ ಸೇರಿದ ಜಮೀನಿನ ಭಾವಿಯಲ್ಲಿ ಅನಾಮಧೇಯ ಪುರುಷನ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿ ಅಂದಾಜು ೨೫ ರಿಂದ ೩೦ ವರ್ಷದವನಾಗಿದ್ದು, ಕರಿ ಕೂದಲು, ೫.೫ ಎತ್ತರ ಹೊಂದಿ ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಮೃತನ ಮೈಮೇಲೆ ಕೆಂಪು ಬಣ್ಣದ ಬನಿಯನ್, ಚಾಕಲೆಟ್ ಬಣ್ಣದ ನೈಟ್ ಪ್ಯಾಂಟ್, ಚಾಕಲೇಟ್ ಬಣ್ಣದ ಅಂಡರ್‌ವೇರ್, ಕೊರಳಲ್ಲಿ ಕರಿದಾರವಿರುತ್ತದೆ.
ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ದೇವರಹಿಪ್ಪರಗಿ ಪೊಲೀಸ್ ಠಾಣೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
