Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಭಗತ್ ಸಿಂಗ್ ರ ರಾಷ್ಟ್ರಪ್ರೇಮ ಯುವಕರಲ್ಲಿ ಮೊಳಗಲಿ :ಜುನಗೊಂಡ

ಮಾ.೨೫ರಂದು ಒಳ ಮಿಸಲಾತಿ ಹಕ್ಕೋತ್ತಾಯ ವಿರೋಧಿಸಿ ಬೆಂಗಳೂರ ಚಲೋ

ಅಣಬೆ ಬೆಳೆದು ಹಣ ಗಳಿಸಲು ಅರಣ್ಯ ಇಲಾಖೆಯಿಂದ ಕಾರ್ಯಗಾರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಾಧನೆಗೆ ಪ್ರೇರಣೆ ನೀಡುವ ಸನ್ಮಾನ :ಅಲ್ಲಮಪ್ರಭು ಕರಜಗಿ
(ರಾಜ್ಯ ) ಜಿಲ್ಲೆ

ಸಾಧನೆಗೆ ಪ್ರೇರಣೆ ನೀಡುವ ಸನ್ಮಾನ :ಅಲ್ಲಮಪ್ರಭು ಕರಜಗಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಚಡಚಣ: ಅಭಿನಂದನೆ, ಸನ್ಮಾನ, ಸತ್ಕಾರಗಳು ವ್ಯಕ್ತಿಗೆ ಪ್ರೋತ್ಸಾಹಿಸುವುದರ ಜತೆಗೆ ಸಾಧನೆ ಮಾಡಲು ಸಮಾಜಮುಖಿಯಾಗಲು ಪ್ರೇರಣೆ ನೀಡುತ್ತದೆ ಎಂದು ಪಟ್ಟಣದ ಹಿರಿಯ ಪತ್ರಕರ್ತ ಅಲ್ಲಮಪ್ರಭು ಕರಜಗಿ ಹೇಳಿದರು.
ಚಡಚಣ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ಹಲವಾರು ಅಡೆತಡೆಗಳನ್ನು ದಾಟಿಕೊಂಡು ಬಂದು ಸಾಧನೆ ಮಾಡಿದವರಿಗೆ ಯಾರೋ ಈ ರೀತಿ ಸನ್ಮಾನ ಮಾಡಿದಾಗ ಇನ್ನೂ ಒಂದಷ್ಟು ಒಳ್ಳೆಯ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ ಮತ್ತು ಪ್ರಶಸ್ತಿ ಪಡೆದವರನ್ನು ನೋಡಿ ಯುವಜನರಿಗೂ ಸ್ಫೂರ್ತಿ ಬರುತ್ತದೆ. ಇದು ಶ್ಲಾಘನೀಯ ಕೆಲಸ ಎಂದು ಬಣ್ಣಿಸಿದರು.
ಹಿರಿಯ ವರದಿಗಾರ ಮನೋಜಕುಮಾರ ಕಟಗೇರಿ ಮಾತನಾಡಿ, ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕಾದರೆ ನಿರಂತರವಾದ ಪ್ರಯತ್ನ ಬಹಳ ಮುಖ್ಯ ಆ ನಿರಂತರ ಪ್ರಯತ್ನದ ಫಲವೇ ಇವತ್ತಿನ ಸಾಧಕರು. ಚಡಚಣ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪತ್ತೆ ಹಚ್ಚಿ ಸನ್ಮಾನ ಮಾಡುವ ಕಾರ್ಯಕ್ರಮ ನಿಜವಾಗಿಯೂ ಅನನ್ಯವಾದುದು ಮತ್ತು ಅರ್ಥ ಪೂರ್ಣವಾದುದು. ಯಾಕೆಂದರೆ ಈ ಸಾಧಕರನ್ನು ನಾನು ಸಮಾಜಕ್ಕೆ ಪರಿಚಯ ಮಾಡುವ ಮೂಲಕ ಸಾಧಕರಿಗೆ ನಾವು ಪ್ರೇರಣೆ ಕೊಡುತ್ತಿದ್ದೇವೆ ಪ್ರೋತ್ಸಾಹ ಕೊಡುತ್ತಿದ್ದೇವೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಟ್ಟಣ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಾಬಾಸಾಹೇಬ ತಾವಸೆ, ಸಮಾಜವನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯ. ಪತ್ರಕರ್ತರು ಸಮಾಜದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾರೆ ಮತ್ತು ಸತ್ಯವನ್ನು ಜನರ ಮುಂದಿಡುತ್ತಾರೆ. ಸಮಾಜದಲ್ಲಿ ಜಾಗೃತಿ ಉಂಟಾಗುತ್ತದೆ ಎಂದರು.
ಪಟ್ಟಣದಲ್ಲಿ ಪತ್ರಕರ್ತರ ಸಂಘದ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವುದಾಗಿ ಅಧಿಕಾರಿ ತಾವಸೆ ಭರವಸೆ ನೀಡಿದರು.
ಜಿಲ್ಲಾ ಮಟ್ಟದ ಕಾನಿಪ ವಾರ್ಷಿಕ ಪ್ರಶಸ್ತಿ ಪಡೆದ ಪತ್ರಕರ್ತ ಶಿವಯ್ಯ ಮಠಪತಿ, ಬಸವ ಚೇತನ ಪ್ರಶಸ್ತಿ ಪಡೆದ ಪತ್ರಕರ್ತೆ ವಿದ್ಯಾ ಕಲ್ಯಾಣಶೆಟ್ಟಿ, ತಾಲೂಕು ನೌಕರರ ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ಮಲ್ಲಾಡಿ, ಚಡಚಣ ತಾಲೂಕಿಗೆ ಪ್ರಥಮ ಸ್ಥಾನ ೬೧೯ ಅಂಕಗಳು ೯೯.೦೪% ಪಡೆದ ಕುಮಾರಿ. ಲಕ್ಮಿ. ಮನೋಜಕುಮಾರ. ಕಟಗೇರಿ, ದ್ವಿತೀಯ ಸ್ಥಾನ ೬೧೮ ಅಂಕಗಳು ೯೮.೮೮% ಪಡೆದ ಕುಮಾರಿ ಸ್ಫೂರ್ತಿ ಶಂಕರ ಹಾವಿನಾಳ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಬಿರಾದಾರ ವಹಿಸಿದ್ದರು. ಮುಖ್ಯ ಅತಿಥಿ ಸ್ಥಾನವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶಂಕರ ಹಾವಿನಾಳ, ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಡೊಣಜಮಠ, ಕಾರ್ಯದರ್ಶಿ ಶ್ರೀಕಾಂತ ಬಗಲಿ, ಖಜಾಂಚಿ ವಿನಯ ಜೀರಂಕಲಗಿ ಸೇರಿದಂತೆ ತಾಲೂಕಿನ ಪತ್ರಕರ್ತರು ಉಪಸ್ಥಿತರಿದ್ದರು.
ರಮೇಶ ಮಲ್ಲಾಡಿ ಕಾರ್ಯಕ್ರಮ ನಿರೂಪಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಭಗತ್ ಸಿಂಗ್ ರ ರಾಷ್ಟ್ರಪ್ರೇಮ ಯುವಕರಲ್ಲಿ ಮೊಳಗಲಿ :ಜುನಗೊಂಡ

ಮಾ.೨೫ರಂದು ಒಳ ಮಿಸಲಾತಿ ಹಕ್ಕೋತ್ತಾಯ ವಿರೋಧಿಸಿ ಬೆಂಗಳೂರ ಚಲೋ

ಅಣಬೆ ಬೆಳೆದು ಹಣ ಗಳಿಸಲು ಅರಣ್ಯ ಇಲಾಖೆಯಿಂದ ಕಾರ್ಯಗಾರ

ಡಾ. ಬಾಬು ಜಗಜೀವನ್ ರಾಮ್ ಭವನ ಕಟ್ಟಡ ವೀಕ್ಷಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಭಗತ್ ಸಿಂಗ್ ರ ರಾಷ್ಟ್ರಪ್ರೇಮ ಯುವಕರಲ್ಲಿ ಮೊಳಗಲಿ :ಜುನಗೊಂಡ
    In (ರಾಜ್ಯ ) ಜಿಲ್ಲೆ
  • ಮಾ.೨೫ರಂದು ಒಳ ಮಿಸಲಾತಿ ಹಕ್ಕೋತ್ತಾಯ ವಿರೋಧಿಸಿ ಬೆಂಗಳೂರ ಚಲೋ
    In (ರಾಜ್ಯ ) ಜಿಲ್ಲೆ
  • ಅಣಬೆ ಬೆಳೆದು ಹಣ ಗಳಿಸಲು ಅರಣ್ಯ ಇಲಾಖೆಯಿಂದ ಕಾರ್ಯಗಾರ
    In (ರಾಜ್ಯ ) ಜಿಲ್ಲೆ
  • ಡಾ. ಬಾಬು ಜಗಜೀವನ್ ರಾಮ್ ಭವನ ಕಟ್ಟಡ ವೀಕ್ಷಣೆ
    In (ರಾಜ್ಯ ) ಜಿಲ್ಲೆ
  • ಹೊಸ ಜಾಹೀರಾತು ನೀತಿ ತಡೆಗೆ ಸಿಎಂ ಗೆ ಸಂಪಾದಕರ ಸಂಘ ಆಗ್ರಹ
    In (ರಾಜ್ಯ ) ಜಿಲ್ಲೆ
  • ಅವಿಭಕ್ತ ಕುಟುಂಬಗಳು ನೈತಿಕ ಮೌಲ್ಯ ಕಾಪಾಡಿದ್ದವು :ವಾಲಿಕಾರ
    In (ರಾಜ್ಯ ) ಜಿಲ್ಲೆ
  • ಗ್ರಾಮೀಣ ಜನರಿಗೆ ಸಮರ್ಪಕ ಕುಡಿಯುವ ನೀರು ಪೂರೈಸಿ
    In (ರಾಜ್ಯ ) ಜಿಲ್ಲೆ
  • ಕೆಪಿಎಸ್ಸಿ ಮೂಲಕ ಪ್ರತಿ ವರ್ಷ ಗ್ರೂಪ್ ಎ-ಬಿ ಅಧಿಕಾರಿಗಳ ನೇಮಕ
    In (ರಾಜ್ಯ ) ಜಿಲ್ಲೆ
  • ಸಾಮರಸ್ಯ ರಸಗಾನದ ಭಾವೈಕ್ಯತೆ ಜೀವ ತೋಂಟದ ಸಿದ್ದಲಿಂಗ ಶ್ರೀ
    In ವಿಶೇಷ ಲೇಖನ
  • ಮನುಷ್ಯನಲ್ಲಿ ಸಮಾನತೆ, ತಾಳ್ಮೆ ಇದ್ದಾಗ ಮಾತ್ರ ಸಾಧನೆ ಸಾಧ್ಯ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.