ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕು.ವಿವಿಧಾ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಇವಳಿಗೆ ಜಾರ್ಜೀಯಾ ದೇಶದ ರಾಜದಾನಿ ಟೀಬ್ಲೀಸಿ ಯ ಜಾರ್ಜೀಯನ್ ನ್ಯಾಶನಲ್ ವೈದ್ಯಕೀಯ ವಿಶ್ವವಿದ್ಯಾಲಯ ದಿಂದ ಎಂಬಿಬಿಎಸ್ ಪದವಿ ಯನ್ನು ವಿಶ್ವ ವಿದ್ಯಾಲಯದ ಘಟಕೋತ್ಸವದಲ್ಲಿ ಸರ್ಟಿಫಿಕೇಟ್ ಪ್ರದಾನ ಮಾಡಲಾಯಿತು.
ಯೂನಿರ್ವಸಿಟಿ ಫೌಂಡರ್ GIA KAVTELISHVILLI ಲೇಡಿ ಡೀನ್ SMT MAIA ADVADGE ಹಾಗೂ ರೆಕ್ಟರ್ MARTVILI CANYON ಉಪಸ್ಥಿತರಿದ್ದರು.
ಕಳೆದೆರಡು ವರ್ಷಗಳ ಹಿಂದೆ ಉಕ್ರೇನ್ ಯುದ್ದದಲ್ಲಿ ಸಿಲುಕಿ ತೊಂದರೆ ಅನುಭವಿಸಿದ ವಿವಿಧಾ ನಂತರ ಜಾರ್ಜೀಯಾ ದೇಶದಲ್ಲಿ ಶಿಕ್ಷಣ ಮುಂದು ವರೆಸಿದ್ದಳು. ಕನ್ನಡ ನಾಡಿನ ಜನರ ಹಾರೈಕೆಯಿಂದ ಮರು ಜನುಮ ಪಡೆದು ಇಂದು ಸಾರ್ಥಕ ಯಶಸ್ಸು ಪಡೆದದ್ದು ಸಾರ್ಥಕವೆನಿಸಿತು. ಅವಳೊಂದಿಗೆ ತಂದೆ ಅಲ್ಲಮಪ್ರಭು ತಾಯಿ ಭುವನೇಶ್ವರಿ ಪಾಲ್ಗೊಂಡಿದ್ದರು.

