ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಕ್ಕಳ ಸರ್ವಾಂಗೀಣ ಜ್ಞಾನವನ್ನು ಓರೆಗೆ ಹಚ್ಚುವಲ್ಲಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಆರ್. ಮೇತ್ರಿ ಹೇಳಿದರು.
ತಾಲ್ಲೂಕಿನ ಜಾಲವಾದ ಗ್ರಾಮದ ವಿದ್ಯಾಭಾರತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜರುಗಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸ್ಪರ್ಧಾತ್ಮಕತೆಯ ಜ್ಞಾನದ ಜೊತೆಗೆ ಮಕ್ಕಳಲ್ಲಿ ನೈತಿಕ ಮೌಲ್ಯಗಳ ಹೆಚ್ಚಿನ ತಿಳುವಳಿಕೆಯನ್ನು ಮೂಡಿಸಬೇಕಾಗಿದೆ ಎಂದರು.
ದೇವರಹಿಪ್ಪರಗಿ ಗದ್ದಿಗೆಮಠ ಹಾಗೂ ಜಾಲವಾದ ಆಶ್ರಮದ ಮನಿಪ್ರ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ ವಿದ್ಯಾಭಾರತಿ ಶಾಲೆಯ ಅಧ್ಯಕ್ಷ ಮಹಾಂತೇಶ ವಡಗೇರಿ ಹಾಗೂ ಜಾಲವಾದ ಸಿ.ಆರ್.ಪಿ. ಕೆ.ಎಸ್.ವಾಲೀಕಾರ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಡಿ.ಎ.ಇನಾಂದಾರ ಹಾಗೂ ಪರಶುರಾಮ ಲಮಾಣಿಯವರನ್ನು ಸನ್ಮಾನಿಸಲಾಯಿತು.
ನಂತರ ಜರುಗಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕೆಪಿಎಸ್ ಜಾಲವಾದ ಶಾಲೆಯ ಉಪಪ್ರಾಂಶುಪಾಲ ಎ.ಎಂ.ಹೊಸಗೌಡರ, ಸಂಸ್ಥೆಯ ಕಾರ್ಯದರ್ಶಿ ವಿ.ಜಿ.ಟಕ್ಕಳಕಿ, ನೌಕರರ ಸಂಘದ ಅಧ್ಯಕ್ಷ ಸಿ.ಬಿ.ಗಡಗಿ, ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಸಿ.ತಳಕೇರಿ, ಕಸಾಪ ಮಾಜಿಅಧ್ಯಕ್ಷ ಜಿ.ಪಿ.ಬಿರಾದಾರ, ಕಾರ್ಯದರ್ಶಿ ಬಸವರಾಜ ನಾಗರಾಳ, ಬಸವರಾಜ ಬಾಲಿ, ರವಿ ಕೊಟೀನ, ಅಣ್ಣು ಭಜಂತ್ರಿ,ನಾಗೇಶ ನಾಗೂರ, ಎ.ಎಚ್.ರಾಠೋಡ, ಎಸ್.ಬಿ.ಸಿಂದಗಿ, ಡಿ.ಎಸ್.ಪಾಟೀಲ, ಡಿ.ಎ.ಇನಾಂದಾರ, ಶಫೀಕ ಮುಲ್ಲಾ, ರಮೇಶ ಹತ್ತಿ, ರಾಜಶೇಖರ ಕಲಕೇರಿ, ಅಪ್ಪಾಸಾಹೇಬ ಕರಿಕಬ್ಬಿ ಸೇರಿದಂತೆ ಜಾಲವಾದ ಕ್ಲಸ್ಟರಿನ ಶಾಲಾ ಶಿಕ್ಷಕರು, ಮಕ್ಕಳು ಇದ್ದರು.

