ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಆರ್ಥಿಕ ಸಮಸ್ಯೆಯಿಂದಾಗಿ ಸಂಕಷ್ಟದಲ್ಲಿದ್ದ ಮೂರು ಜನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಹಣಕಾಸು ನೆರವು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ರವಿವಾರ ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಮೂರು ವಿದ್ಯಾರ್ಥಿಗಳಾದ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ದಾನಮ್ಮ ಹಣಮಂತ ಮಾಳಿ, ಮಕಣಾಪುರ ಎಲ್. ಟಿ.- 1 ರ ಸುಪ್ರೀತ ಕಾಸು ಲಮಾಣಿ ಹಾಗೂ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ಪ್ರಿಯಾಂಕಾ ಸುರೇಶ ಕುಂಬಾರ ಅವರಿಗೆ ಎಂ.ಬಿ.ಬಿ.ಎಸ್ ಕೋರ್ಸಿನ ಬೋಧನಾ ಶುಲ್ಕ, ಊಟ ಮತ್ತು ವಸತಿ(ಹಾಸ್ಟೇಲ್ ಮತ್ತು ಮೆಸ್)ಕ್ಕೆ ಅಗತ್ಯವಾಗಿರುವ ಹಣದ ಚೆಕ್ ನ್ನು ಸಚಿವರು ವಿತರಿಸಿದರು.
ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ವಿದ್ಯಾರ್ಥಿ, ನೀಟ್ ಪರೀಕ್ಷೆಯಲ್ಲಿ 514 ಅಂಕಗಳೊಂದಿಗೆ 72,996ನೇ ರ್ಯಾಂಕ್ ಪಡೆದು ಚಿಕ್ಕಬಳ್ಳಾಪುರದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ಇವರಿಗೆ ಮೊದಲ ಕಂತು ₹1,72,000 ನೆರವಿನ ಚೆಕ್ ನ್ನು ಸಚಿವರು ವಿತರಿಸಿದರು. ತಿಕೋಟಾ ತಾಲೂಕಿನ ಮಕಣಾಪುರ ಗ್ರಾಮದ ಸುಪ್ರೀತ ಕಾಸು ಲಮಾಣಿ ಅವರು ನೀಟ್ ಪರೀಕ್ಷೆಯಲ್ಲಿ 65,729ನೇ ರ್ಯಾಂಕ್ ಪಡೆದು ಬೆಳಗಾವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಎಂ. ಬಿ. ಬಿ. ಎಸ್. ಸೀಟು ಪಡೆದಿದ್ದು, ಅವರಿಗೆ ಮೊದಲ ಕಂತು ₹1,39,530 ನೆರವಿನ ಚೆಕ್ ಸಚಿವರು ವಿತರಿಸಿದರು. ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ಪ್ರಿಯಾಂಕ ಸುರೇಶ ಕುಂಬಾರ ಅವರು ನೀಟ್ ಪರೀಕ್ಷೆಯಲ್ಲಿ 40,153ನೇ ರ್ಯಾಂಕ್ ಪಡೆದು ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದು, ಅವರಿಗೆ ಮೊದಲ ಕಂತು ₹1,60,160 ಆರ್ಥಿಕ ನೆರವಿನ ಚೆಕ್ ನ್ನು ಸಚಿವ ಎಂ. ಬಿ. ಪಾಟೀಲ ಅವರು ವಿತರಿಸಿದರು ಈ ಮೂವರು ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಕಾಲೇಜು, ಹಾಸ್ಟೆಲ್, ಮೆಸ್ ಹಾಗೂ ಇತರ ಶೈಕ್ಷಣಿಕ ವೆಚ್ಚಗಳ ಮೊದಲ ಕಂತಿನ ಒಟ್ಟು ₹4,71,690 ಮೊತ್ತವನ್ನು ಬಿ.ಎಲ್.ಡಿ.ಇ ಸಂಸ್ಥೆಯ ವತಿಯಿಂದ ಸಚಿವರು ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ತ್ತು ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್. ಎಸ್. ಪಾಟೀಲ ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಕೇವಲ ಆರ್ಥಿಕ ನೆರವಿನ ಸದುಪಯೋಗ ಪಡೆದುಕೊಳ್ಳುವುದಷ್ಟೇ ಅಲ್ಲದೆ, ಶ್ರದ್ಧೆ ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕು. ಭವಿಷ್ಯದಲ್ಲಿ ಜವಾಬ್ದಾರಿಯುತ, ಆದರ್ಶ ವೈದ್ಯರಾಗಿ ರೂಪುಗೊಂಡು ಸಮಾಜದ ಬಡವರು, ದುರ್ಬಲರು ಹಾಗೂ ಅಗತ್ಯವಿರುವವರಿಗೆ ಮಾನವೀಯತೆಯಿಂದ ವೈದ್ಯಕೀಯ ಸೇವೆ ಸಲ್ಲಿಸುವಂತಾಗಬೇಕು ಎಂದು ಸಲಹೆ ನೀಡಿ ಶುಭ ಕೋರಿದರು.
ಬಾಕ್ಸ್
ವಿದ್ಯಾರ್ಥಿಗಳ ಹಿನ್ನೆಲೆ ಮತ್ತು ಸಂತಸ
ಘೋಣಸಗಿ ಗ್ರಾಮದ ದಾನಮ್ಮ ಹಣಮಂತ ಮಾಳಿ ನೀಟ್ ನಲ್ಲಿ 72996 ರ್ಯಾಂಕ್ ಪಡೆದಿದ್ದು, ಚಿಕ್ಕಬಳ್ಳಾಪುರದ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯಿನ್ಸ್ ನಲ್ಲಿ ಸೀಟು ಪಡೆದಿದ್ದಾರೆ. ರೈತ ಕುಟುಂಬದ ಹಣಮಂತ ಮತ್ತು ಶ್ರೀದೇವಿ ಮಾಳಿ ದಂಪತಿಗೆ ನಾಲ್ಕು ಜನ ಮಕ್ಕಳಲ್ಲಿ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ. ಮೊದಲನೇ ಪುತ್ರ ರಾಕೇಶ ಪದವಿಧರರಾಗಿದ್ದರೆ, ಎರಡನೇ ಪುತ್ರಿ ಪೂಜಾ ಬಿ.ಎಸ್ಸಿ ಓದುತ್ತಿದ್ದಾರೆ. ಕೊನೆಯ ಪುತ್ರ ಪೃಥ್ವಿರಾಜ ಬಿಜ್ದರಗಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ಮೂರನೇ ಪುತ್ರಿ ದಾನಮ್ಮ ಪ್ರಾಥಮಿಕ ಶಿಕ್ಷಣವನ್ನು ಬಿಜ್ಜರಗಿಯಲ್ಲಿ ನಂತರ ದ್ವಿತೀಯ ಪಿಯುಸಿವರೆಗೆ ಆಲಮಟ್ಟಿ ನವೋದಯದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಬರದ ಈ ಸಂದರ್ಭದಲ್ಲಿ ಮಗಳು ನೀಟ್ ಪಾಸಾಗಿದ್ದರೂ ಆರ್ಥಿಕ ಸಮಸ್ಯೆ ನಮಗೆ ಚಿಂತೆಗೀಡು ಮಾಡಿತ್ತು. ಮಗಳು ವೈದ್ಯರಾಗುವ ಕನಸು ನನಸಾಗಲು ಎಂ. ಬಿ. ಪಾಟೀಲ ಅವರು ದೇವರ ರೂಪದಲ್ಲಿ ಬಂದು ನೆರವಾಗಿದ್ದಾರೆ. ಅವರು ಸಹಾಯ ಮಾಡಿರುವುದು ಸಂತಸ ತಂದಿದೆ. ಅವರ ಈ ಸಹಾಯಕ್ಕೆ ಚಿರಋಣಿಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ದಾನಮ್ಮ ಮಾತನಾಡಿ, ಸಚಿವರ ನೆರವಿನಿಂದಾಗಿ ನಮ್ಮ ಬಡ ಕುಟುಂಬಕ್ಕೆ ಅನುಕೂಲವಾಗಿದ್ದು, ಅವರು ನಾನು ವೈದ್ಯಳಾಗುವ ಕನಸು ನನಸಾಗಲು ಕಾರಣರಾಗಿದ್ದಾರೆ ಎಂದು ಸಂತರ ವ್ಯಕ್ತಪಡಿಸಿದ್ದಾರೆ.
ಮಕಣಾಪುರ ಎಲ್. ಟಿ- 01 ರ ಮಕಣಾಪುರ ಎಲ್. ಟಿ. 1ರ ಸುಪ್ರೀತ ಕಾಸು ಲಮಾಣಿ ನೀಟ್ ಪರೀಕ್ಷೆಯಲ್ಲಿ 65729ನೇ ರ್ಯಾಂಕ್ ಪಡೆದಿದ್ದು, ಬೆಳಗಾವಿ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯಿನ್ಸ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿದ್ದಾರೆ. ಕಾಸು ಮತ್ತು ಸೀನಾಬಾಯಿ ಲಮಾಣಿ ದಂಪತಿಯ ಹಿರಿಯ ಪುತ್ರ ಸುಪ್ರೀತ 10ನೇ ತರಗತಿಯವರೆಗೆ ಹೊರ್ತಿ ಮುರಾರ್ಜಿ ಶಾಲೆಯಲ್ಲಿ ಓದಿದ್ದು, ವಿಜಯಪುರ ನಗರದ ಖಾಸಗಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದಾರೆ. ಇವರ ಎರಡನೇ ಪುತ್ರಿ ಭೂಮಿಕಾ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರೆ, ಮೂರನೇ ಮಗ ಸತೀಶ ನಾಗಠಾಣ ಮುರಾರ್ಜಿ ವಸತಿ ಶಾಲೆಯಲ್ಲಿ ಹೈಸ್ಕೂಲು ಓದುತ್ತಿದ್ದಾನೆ. ಸಚಿವರ ನೆರವಿಗೆ ಸಂತಸ ವ್ಯಕ್ತಪಡಿಸಿರುವ ವಿದ್ಯಾರ್ಥಿ ಸುಪ್ರೀತ, ಎಂ. ಬಿ. ಬಿ. ಎಸ್ ನಂತರ ಎಂ. ಡಿ ಮಾಡುವ ಕನಸು ಇದೆ. ಸಚಿವರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿಯ ತಂದೆ ಕಾಸು ಲಮಾಣಿ ಮಾತನಾಡಿ, ನಾವು ಬಡ ಕುಟುಂಬಕ್ಕೆ ಸೇರಿದ್ದು, ಎಂ. ಬಿ. ಪಾಟೀಲರು ನಮಗೆ ದೇವರ ರೂಪದಲ್ಲಿ ಬಂದು ನೆರವಾಗಿದ್ದಾರೆ. ಮಗನನ್ನು ಡಾಕ್ಟರ್ ಮಾಡುವ ಕನಸು ಈಡೇರಿಸಲು ಕಾರಣರಾಗಿದ್ದಾರೆ. ಅವರಿಗೆ ಸದಾ ಋಣಿ ಯಾಗಿರುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಅದೇ ರೀತಿ, ಬಳೂತಿ ಗ್ರಾಮದ ಪ್ರಿಯಾಂಕ ಸುರೇಶ ಕುಂಬಾರ ಅವರಿಗೆ ನೀಚ್ ಪರೀಕ್ಷೆಯಲ್ಲಿ 40153 ಬಂದಿದ್ದು, ಬಳ್ಳಾರಿ ಮೆಡಿಕಲ್ ಕಾಲೇಜು ಆ್ಯಂಡ್ ರಿಸರ್ಚ್ ಸೆಂಟರ್ ನಲ್ಲಿ ಸೀಟು ಲಭಿಸಿದೆ. ರೈತ ಕುಟುಂಬದ ಸುರೇಶ ಮತ್ತು ಈರಮ್ಮ ದಂಪತಿಯ ಪುತ್ರಿ ಪ್ರಿಯಾಂಕಾ ಪ್ರಾಥಮಿಕ ಶಿಕ್ಷಣವನ್ನು ಬಳೂತಿಯ ಸರಕಾರಿ ಶಾಲೆಯಲ್ಲಿ, ಹೈಸ್ಕೂಲು ಶಿಕ್ಷಣವನ್ನು ಕಾರದೋಳ ಮುರಾರ್ಜಿ ವಸತಿ ಶಾಲೆಯಲ್ಲಿ ಹೈಸ್ಕೂಲಿನಲ್ಲಿ ಹೈಸ್ಕೂಲ್ ಹಾಗೂ ಪಿಯುಸಿಯನ್ನು ಬೀಳಗಿಯ ಖಾಸಗಿ ಪಿಯು ಕಾಲೇಜಿನಲ್ಲಿ ತರಗತಿ ಪೂರ್ಣಗೊಳಿಸಿದ್ದಾರೆ. ಸಚಿವರ ನೆರವಿಗೆ ಕೃತತ್ರತೆ ಸಲ್ಲಿಸಿರುವ ವಿದ್ಯಾರ್ಥಿನಿ ತಂದೆ ಸುರೇಶ ನಮಗೆ ನಾಲ್ಕು ಜನ ಮಕ್ಕಳಿದ್ದಾರೆ. ಮೊದಲ ಮಗಳು ಭುವನೇಶ್ವರಿ ಮಹಿಳಾ ವಿವಿಯಲ್ಲಿ ಎಂ. ಎಸ್ಸಿ ಓದುತ್ತಿದ್ದಾರೆ. 3ನೇ ಪುತ್ರಿ ಪ್ರೀತಿ ನೀಟ್ ಓದುತ್ತಿದ್ದಾರೆ. ನಾಲ್ಕನೇ ಮಗಳು ಹೈಸ್ಕೂಲು ಓದುತ್ತಿದ್ದಾರೆ. ಎರಡನೇ ಮಗಳು ಈಗ ನೀಟ್ ಪಾಸಾಗಿದ್ದು, ಅವಳ ವೈದ್ಯಕೀಯ ಶಿಕ್ಷಣಕ್ಕೆ ಸಚಿವ ಎಂ. ಬಿ. ಪಾಟೀಲ ಸಾಹೇಬರು ಸಹಾಯ ಮಾಡಿದ್ದು ನಮಗೆ ತುಂಬಾ ಸಂತೋಷವಾಗಿದೆ. ಅವರು ನೆವರವನ್ನು ಸಹಾಯವ ವರದಾನವಾಗಿದೆ. ಮಗಳು ಎಂ. ಡಿ. ಮಾಡುವ ಕನಸು ಹೊಂದಿದ್ದಾಳೆ ಎಂದು ಸುರೇಶ ಕುಂಬಾರ ಸಂತಸ ವ್ಯಕ್ತಪಡಿಸಿದ್ದಾರೆ.

