ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ದೇವರಹಿಪ್ಪರಗಿ ಹಾಗೂ ಕಲಕೇರಿ ವಲಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನುಕೂಲ ಮಾಡಿಕೊಡುವ ದೃಷ್ಠಿಯಿಂದ ಅಗಷ್ಟ ೨ ರಂದು ಗುರುಸ್ಪಂದನ ಕಾರ್ಯಕ್ರಮ ಆಯೋಜಿಸಿದ್ದು ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ.ಯಡ್ರಾಮಿ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಗಂಡುಮಕ್ಕಳ ಶಾಲೆಯಲ್ಲಿ ಸೋಮವಾರ ಜರುಗಿದ ಗುರುಸ್ಪಂದನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದÀರು, ಶಿಕ್ಷಕರು ತಮ್ಮ ಸೇವಾಪುಸ್ತಕಗಳನ್ನು ಅವಲೋಕಿಸುವ ಮೂಲಕ ಏನಾದರು ಸಮಸ್ಯೆಗಳಿದ್ದರೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರಸಂಘದ ಜಿಲ್ಲಾ ಗೌರವಾಧ್ಯಕ್ಷ ಜಿ.ಎಸ್.ಬೇವನೂರ ಮಾತನಾಡಿ, ತಾಲ್ಲೂಕಿನ ಶಿಕ್ಷಕರ ಸಂಘದಿಂದ ನಮ್ಮ ಅವಧಿಯಲ್ಲಿ ಎರಡನೇಯ ಬಾರಿಗೆ ಗುರುಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿಕ್ಷಕರು ತಮ್ಮೇಲ್ಲ ಕುಂದುಕೊರತೆಗಳನ್ನು ನೀಗಿಸಿಕೊಳ್ಳುವ ಸದಾವಕಾಶ ಕಲ್ಪಿಸಿಲಾಗಿದೆ ಎಂದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರಸಂಘದ ಅಧ್ಯಕ್ಷ ಎ.ಎಚ್.ವಾಲಿಕಾರ ಮಾತನಾಡಿ, ಶಿಕ್ಷಕರ ವಾರ್ಷಿಕ ಬಡ್ತಿ ಹಾಗೂ ಶೈಕ್ಷಣಿಕ ವಿದ್ಯಾರ್ಹತೆಯನ್ನು ನಮೂದಿಸಲಾಗುವುದು. ಒಟ್ಟಾರೆಯಾಗಿ ಕಚೇರಿಗಳಿಗೆ ಶಿಕ್ಷಕರ ಅಲೆದಾಟವನ್ನು ತಪ್ಪಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಶಿಕ್ಷಕರೆಲ್ಲರೂ ತಪ್ಪದೇ ಆಗಮಿಸಲು ತಿಳಿಸಿದರು.
ಶಿಕ್ಷಕರಾದ ಶಿವಾನಂದ ಕೋಟಿನ್, ಜಿ.ಪಿ.ಬಿರಾದಾರ, ಎನ್.ಎಸ್.ಹಿರೇಮಠ, ಪಿ.ಸಿ.ತಳಕೇರಿ, ರವಿ ಕೋಟಿನ್, ಸಂಗನಬಸು ನಂದ್ಯಾಳ, ದಾನು ರಾಠೋಡ, ಪಾರ್ವತಿ ಪೂಜಾರಿ, ಜಯಶ್ರೀ ನಾಯಕ, ಆಶಾ ರಾಠೋಡ, ಜಾಕೀರಹುಸೇನ ಬಗಲಿ, ವಿ.ಎನ್.ಮದ್ದರಕಿ, ರವಿ ಜನಗೊಂಡ, ಅಣ್ಣು ಬಜಂತ್ರಿ, ಇದ್ದರು.

