ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಉಪ-ವಿಭಾಗ ಲೋಕೋಪಯೋಗಿ ಇಲಾಖೆ ವತಿಯಿಂದ ೨೦೨೪-೨೫ನೆಯ ಸಾಲಿನ ಅಪೆಂಡಿಕ್ಸ್-ಇ ಯೋಜನೆ ಅಡಿಯಲ್ಲಿ ಸಿಂದಗಿ ತಾಲೂಕಿನ ಮನ್ನಾಪುರ-ಹಂಚಿನಾಳ ರಸ್ತೆ ವ್ಹಾಯಾ ರಾಷ್ಟ್ರೀಯ ಹೆದ್ದಾರಿ-೨೧೮ಕ್ಕೆ ಕೂಡುವ ರಸ್ತೆ ಜಿಲ್ಲಾ ಮುಖ್ಯ ರಸ್ತೆಯ ೫.೭ಕಿಮೀ-೬.೨೦ಕಿಮೀ ವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ (ಬ್ಯಾಲಿಹಾಳ ಗ್ರಾಮ ಪರಿಮಿತಿ) ರೂ.೫೦ಲಕ್ಷ ಮೊತ್ತದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ ನೆರವೇರಿಸಿದರು.

