ಉದಯರಶ್ಮಿ ದಿನಪತ್ರಿಕೆ
ಚಡಚಣ: ಮೊಟ್ಟ ಮೊದಲ ಬಾರಿಗೆ ಹವ್ಯಾಸಿ ಹಾಡುಗಾರರಿಗೋಸ್ಕರ ‘ಸ್ನೇಹಸಂಗಮ ಮೆಲೊಡೀಸ್ ಹಾಗೂ ಸ್ನೇಹಸಂಗಮ ಕರೋಕೆ ಸ್ಟುಡಿಯೋ ಚಡಚಣ’ ಇವರ ನೇತೃತ್ವದಲ್ಲಿ ಈಗಾಗಲೇ ವೇದಿಕೆ ಮೇಲೆ ಕಾರ್ಯಕ್ರಮ ಕೊಡುತ್ತಿರುವ ಪ್ರೊಫೆಷನಲ್ ಗಾಯಕರನ್ನು ಹೊರತುಪಡಿಸಿ ‘ನಾವೇನು ಬಾತ್ರೂಮ್ ಸಿಂಗರ್’ ಅಂತ ಹೇಳ್ತೀವಿ ಅಂತಹ ಸಂಗೀತ ಆಸಕ್ತರನ್ನ ಒಗ್ಗೂಡಿಸಿ, ಅವರಲ್ಲಿನ ಸಿಂಗಿಂಗ್ ಟ್ಯಾಲೆಂಟ್ ಅನ್ನು ಗುರುತಿಸಿ, ಸಂಗೀತ ತಜ್ಞರ ಹಾಗೂ ಗಾಯಕರ ಮಾರ್ಗದರ್ಶನ ಕೊಡಿಸಿ, ಸಮಾಜಕ್ಕೆ ಪರಿಚಯಿಸಲು “ಕ್ರೇಜಿ ಸಿಂಗರ್ ಅವಾರ್ಡ್- 2025 ಇವೆಂಟ್” ಎಂಬ ಉತ್ತಮ ವೇದಿಕೆಯೊಂದು ಸಿದ್ಧಗೊಂಡಿದೆ.
ಚಡಚಣ ಪಟ್ಟಣದಲ್ಲಿ ಇದೇ ಜುಲೈ. 27 ರ ಭಾನುವಾರದಂದು ಬೆಳಿಗ್ಗೆ 09-00 ಗಂಟೆಗೆ ಚಡಚಣ ಪಟ್ಟಣದಲ್ಲಿರುವ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದು, ಆಸಕ್ತರು ಭಾಗವಹಿಸಲು ತಮ್ಮ ಹೆಸರು ಹಾಗೂ ಸ್ವವಿವರದೊಂದಿಗೆ ಸ್ನೇಹಸಂಗಮ ಕರೋಕೆ ಸಿಂಗಿಂಗ್ ಸ್ಟುಡಿಯೋ, ಕೃಷ್ಣಾ ಕಾಂಪ್ಲೆಕ್ಸ್, ಬಸ್ ನಿಲ್ದಾಣ ಚಡಚಣ ಅಥವಾ ಹೆಚ್ಚಿನ ಮಾಹಿತಿಗಾಗಿ ಆಯೋಜಕರಾದ ಗಜಾನಂದ ಸುತಾರ ಮೋ. 9964624624 ಇಲ್ಲಿಗೆ ಸಂಪರ್ಕಿಸಿ, ಜುಲೈ. 26 ರ ಒಳಗಾಗಿ ಯಾವುದೇ ನೋಂದಣಿ ಶುಲ್ಕವಿಲ್ಲದೇ ಹೆಸರು ನೋಂದಾಯಿಸಬಹುದು. ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಪ್ರಶಸ್ತಿ/ಪಾರಿತೋಷಕ ವಿತರಿಸಲಾಗುವುದು ಎಂದು ಆಯೋಜಕರಾದ ಗಜಾನಂದ ಸುತಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
