ದೇವರಹಿಪ್ಪರಗಿ: ದೇಶದ ಭವಿಷ್ಯವಾಗಿರುವ ಯುವಶಕ್ತಿ ಸನ್ಮಾರ್ಗದತ್ತ ಸಾಗಲು ಶಿಕ್ಷಣ, ಸಂಸ್ಕಾರ ಹಾಗೂ ಮಾರ್ಗದರ್ಶನ ಅತ್ಯಗತ್ಯವಾಗಿವೆ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಸ್. ಎಸ್.ಪೂಜಾರಿ ಹೇಳಿದರು.
ತಾಲ್ಲೂಕಿನ ಜಾಲವಾದ ಗ್ರಾಮದ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಇತ್ತೀಚಿಗೆ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ ಇವರ ಅಧ್ಯಕ್ಷತೆಯಲ್ಲಿ ಸದಸ್ಯ ಕಾರ್ಯದರ್ಶಿಗಳು ಹಮ್ಮಿಕೊಂಡಿದ್ದ ಮಾದಕ ದ್ರವ್ಯ ನಿರ್ಮೂಲನಾ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ತಿಳುವಳಿಕೆ ಹಾಗೂ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳು ಚನ್ನಾಗಿ ಅಭ್ಯಾಸ ಮಾಡಿ, ಆರೋಗ್ಯಯುತ ಜೀವನ ನಡೆಸಿ ಸಮೃದ್ಧ ನಾಡನ್ನು ನಿರ್ಮಿಸುವಲ್ಲಿ ಮುನ್ನಡಿ ಇಡಬೇಕು. ಇತ್ತೀಚಿನ ದಿನಗಳಲ್ಲಿ ದೇಶದ ಯುವಜನಾಂಗ ದುಶ್ಚಟಗಳ ದಾಸರಾಗಿ, ಆಸ್ತಿ-ಅಂತಸ್ತನ್ನು ಹಾಳು ಮಾಡಿಕೊಳ್ಳುವದರ ಜೊತೆಗೆ ತಮ್ಮ ಅತ್ಯಮೂಲ್ಯವಾದ ಬದುಕನ್ನೇ ಬರಡಾಗಿಸಿಕೊಳ್ಳುತ್ತಿರುವದು ಖೇದನೀಯ ಸಂಗತಿಯಾಗಿದೆ ಅದಕ್ಕಾಗಿ ಸುಂದರ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ವಕೀಲ ಪ್ರವೀಣ ಜನಗೊಂಡ ಉಪಪ್ರಾಂಶುಪಾಲ ಎಮ್.ಕೆ.ಕುಡಚಿ, ಶಿಕ್ಷಕ ಎಸ್.ಜೆ.ನಾಟೀಕಾರ, ಎಮ್.ಡಿ.ಹಳ್ಳಿ, ಬಸವರಾಜ ಜನಗೊಂಡ ಸೇರಿದಂತೆ ಪ್ರೌಢಶಾಲೆಯ ಶಿಕ್ಷಕಸಿಬ್ಬಂದಿ, ಮಕ್ಕಳು ಇದ್ದರು.
Related Posts
Add A Comment