ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಾಲೆ ಆರಂಭವಾಯಿತೆಂದರೆ ಪ್ರತೀ ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆಗೆ ತಯಾರಿ ನಡೆಯುತ್ತದೆ. ಆಯಾ ವರ್ಷದ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಚುನಾವಣೆಯ ಮೂಲಕ ಸಾಗುತ್ತದೆ ಎಂದು ಶ್ರೀ ಪದ್ಮರಾಜ ಪಬ್ಲಿಕ್ ಶಾಲೆಯ ಪ್ರಾಚಾರ್ಯ ದಾನಯ್ಯ ನಂದಿಕೋಲ ಹೇಳಿದರು.
ಸಿಂದಗಿ ಪಟ್ಟಣದ ಶ್ರೀ ಪದ್ಮರಾಜ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿಗಾಗಿ ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿ ಮಾತನಾಡಿದ ಅವರು, ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಪ್ರಯುಕ್ತ ಶಾಲಾ ಸಂಸತ್ ಚುನಾವಣೆ ಚುನಾವಣಾ ಆಯೋಗ ನಡೆಸುವ ನೈಜ ಚುನಾವಣಾ ಮಾದರಿಯಲ್ಲಿ ನಡೆಸಬೇಕು. ಇದರಿಂದ ಮಕ್ಕಳಲ್ಲಿ ಚುನಾವಣೆಯ ಪರಿಕಲ್ಪನೆ ಮತ್ತು ಮತದಾನದ ಅರಿವು ಮೂಡುತ್ತದೆ ಎಂದರು.
ಈ ವೇಳೆ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಚುನಾವಣಾ ಪ್ರಕ್ರಿಯೆಯಲ್ಲಿ ಮತ ಚಲಾಯಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಆಸಿಫ್ ಕೊಂಕಣಿ, ಶಿವಪುತ್ರ ಭಾಸಗಿ, ಶ್ರೀಧರ ಮಲ್ಲೇದ, ಅಭಿಷೇಕ ಬಿರಾದಾರ, ಸುರೇಶ ಸುಣಗಾರ, ರಾಣಿ ಜೋಗೂರ, ಅರುಣ ಕವಲಗಿ, ಅಕ್ಷತಾ ಕಿಣಗಿ, ಕಲಾವತಿ ಹಿರೇಮಠ, ಭಾರತಿ ಹಿರೇಮಠ, ಎಸ್.ಎಸ್.ಪೋದ್ದಾರ, ಕೆ.ಎಸ್.ಲಾತೂರ್, ಎಸ್.ಆರ್.ಹಾಲಕೇರಿ, ಶಶಿಕಲಾ ಹೂಗಾರ, ಸಂತೃಪ್ತಿ ಕಲಬುರ್ಗಿ ಸೇರಿದಂತೆ ಇತರರು ಇದ್ದರು.

