ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ದಸ್ತು ಬರಹಗಾರರ (ಬಾಂಡ್ ರೈಟರ‍್ಸ್) ಸಂಘಕ್ಕೆ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಹಾಗೂ ದಸ್ತುಬರಹಗಾರ ಎಚ್.ಆರ್.ಬಾಗವಾನ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪಟ್ಟಣದ ದಸ್ತು ಬರಹಗಾರರ ಮಳಿಗೆಗಳ ಆವರಣದಲ್ಲಿ ನಡೆದ ಆಯ್ಕೆ ಪ್ರಕ್ರೀಯೆಯಲ್ಲಿ ಬಾಗವಾನ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಉಪಾಧ್ಯಕ್ಷರನ್ನಾಗಿ ರಾಜೇಂದ್ರಕುಮಾರ ಪಾವಲೆ, ಪ್ರಧಾನ ಕಾರ್ಯದರ್ಶಿಯನ್ನಾಗಿ ಡಿ.ಎಚ್.ತೊಗರಿ, ಖಜಾಂಚಿಯಾಗಿ ಎಂ.ಎಂ.ಕಟಗಿ, ಜಿಲ್ಲಾ ಪ್ರತಿನಿಧಿಯಾಗಿ ಎಚ್.ಎಸ್.ನಾಯ್ಕೋಡಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಸಂಘದ ರಾಜ್ಯ ಸಮಿತಿ ಸದಸ್ಯ ಜಿ.ಎಸ್.ಜೋಳದ, ಸದಸ್ಯರಾದ ಎಸ್.ಬಿ.ಕಡಿ, ಡಿ.ಎಸ್.ಹಿರೇಮಠ, ಆರ್.ಎ.ನಾಡಗೌಡ, ಎಸ್.ಎಸ್.ಹಳ್ಳೂರ, ಎಂ.ಎ.ಮುಲ್ಲಾ ಇದ್ದರು.
ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

