ವಿಜಯಪುರ: ನೈರುತ್ಯ ರೈಲ್ವೇ ಇಲಾಖೆಯ ವಿಜಯಪುರ ಅಲಿಯಾಬಾದ್ ಗೂಡ್ಸ್ಶೆಡ್ ಉದ್ಘಾಟಣಾ ಕಾರ್ಯಕ್ರಮವನ್ನು ವಿಜಯಪುರ ಅಲಿಯಾಬಾದ್ ಗೂಡ್ಸ್ ಶೆಡ್‌ನಲ್ಲಿ ಅಕ್ಟೋಬರ್ ೧ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ೧೧ ಗಂಟೆಗೆ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಮೂಲ ಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಸಂಸದ ರಮೇಶ ಜಿಗಜಿಗಣಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನವದೆಹಲಿಯ ವಿಶೇಷ ಪ್ರತಿನಿಧಿ ವಿಧಾನ ಪರಿಷತ್ತಿನ ಸದಸ್ಯರಾದ ಪ್ರಕಾಶ ಹುಕ್ಕೇರಿ, ಶಾಸಕರುಗಳಾದ ವಿಠ್ಠಲ ಕಟಕದೊಂಡ, ಶಾಸಕರಾದ ಹನಮಂತ ಆರ್ ನಿರಾಣಿ, ಪ್ರಕಾಶ ಆರ್ ರಾಠೋಡ, ಸುನೀಲಗೌಡ ಬಿ. ಪಾಟೀಲ, ಪಿ.ಹೆಚ್ ಪೂಜಾರ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ಹುಬ್ಬಳ್ಳಿ ವಿಬಾಗೀಯ ರೈಲ್ವೇ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment