ಇಂಡಿ: ಭಾರತೀಯ ಅಂಚೆ ಸೇವೆ ವಿಶ್ವದಲ್ಲಿ ಅತಿ ದೊಡ್ಡದಾದ ಸಂಪರ್ಕ ಜಾಲ ಹೊಂದಿದೆ. ಭಾರತ ದೇಶದ ಯಾವದೇ ಊರಿಗೆ ಹೋದರೂ ನಿಮಗೆ ಅಂಚೆ ಕಚೇರಿ ಕಾಣಸಿಗುವದರಿಂದ ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶದೊಂದಿಗೆ ಸಂಪರ್ಕದಲ್ಲಿರಲು ಸಾದ್ಯವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಿರ್ಮಿತ ನೂತನ ಅಂಚೆ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಪೂಜ್ಯ ಶ್ರೀ ವೃಷಭಲಿಂಗೇಶ್ವರ ಶ್ರೀಗಳು ಮಾತನಾಡಿ ಅಂಚೆ ಕಚೇರಿಯಿಂದ ಸಾರ್ವಜನಿಕರಿಗೆ ಸಾಕಷ್ಟು ಉಪಯೋಗವಿದೆ.ಅಂಚೆ ವ್ಯವಹಾರ, ನೊಂದಾಯಿತ ಪತ್ರ ವ್ಯವಹಾರ, ಶೀಘ್ರ ಅಂಚೆ, ಪಾರ್ಸಲ್ ಸೇವೆ, ಇ ಅಂಚೆ, ವಿಶೇಷ ಕೋರಿಯರ್ ಸೇವೆ, ಮ್ಯುಚುವಲ್ ಫಂಡ್,ರಾಷ್ಟ್ರೀಯ ಉಳಿತಾಯ ಪತ್ರ ವ್ಯವಹಾರ, ಕಿಸಾನ ವಿಕಾಸ ಪತ್ರ, ನಿಶ್ಚಿತ ಠೇವಣಿ, ಆವರ್ತಕ ಠೇವಣಿ ಸೇರಿದಂತೆ ಅನೇಕ ಉಪಯೋಗ ಸಾರ್ವಜನಿಕರಿಗೆ ನೀಡುತ್ತಿದ್ದು ಅಂಚೆ ಸೇವೆ ದೇಶಕ್ಕೆ ಮಾದರಿ ಸೇವೆಯಾಗಿದೆ ಎಂದರು.
ಧಾರವಾಡ ವಲಯದ ಪೋಸ್ಟ ಮಾಸ್ಟರ್ ಚೀಫ್ ರಾಜೇಂದ್ರಕುಮಾರ, ಪೋಸ್ಟ ಮಾಸ್ಟರ ಜನರಲ್ ಕರ್ನಲ್ ಸುನೀಲಕುಮಾರ, ಸುಪರಿಟೆಂಡೆಂಟ್ ಆಫ್ ಪೋಸ್ಟ ಜಿ.ವಿ.ನಾಯಕ, ಗ್ರಾ.ಪಂ ಅಧ್ಯಕ್ಷೆ ಕಲಾವತಿ ಹಣಮಂತ ಬಿರಾದಾರ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿದರು.
ತಾಪಂ ಮಾಜಿ ಸದಸ್ಯ ಜಗನ್ನಾಥ ಕೋಟೆ, ಗ್ರಾಮ ಪಂಚಾಯಿತಿ ಸದಸ್ಯ ಅಶೋಕಗೌಡ ಪಾಟೀಲ, ಯಶವಂತರ ಬಿರಾದಾರ, ಭೀಮರಾಯಗೌಡ ಪಾಟೀಲ, ಮಲ್ಲೇಶಿ ಮುಜಗೊಂಡ ಮತ್ತಿತರಿದ್ದರು.
Related Posts
Add A Comment