ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಾಧನೆ ಮಾಡಬೇಕೆಂದಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ ಆದರೆ ನಾವು ಅವುಗಳನ್ನು ಮೀರಿ ಬೆಳೆದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಇಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವಿ ಅರಳಿ ಹೇಳಿದರು.
ಚಡಚಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗ, ಎನ್‌ಎಸ್‌ಎಸ್,ರೋವರ ಮತ್ತು ರೇಂಜರ, ರೆಡ್ ಕ್ರಾಸ್ ಘಟಕಗಳ ಉಧ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಬರುತ್ತವೆ. ಸಾಧನೆ ಮಾಡುವವನಿಗೆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಸ್.ಎಸ್.ಚೋರಗಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷ ಸಂಗಮೇಶ ಅವಜಿ, ಗೌರವ ಕಾರ್ಯದರ್ಶಿ ವಿ.ಎಸ್.ಗಿಡವೀರ, ಅಶೋಕ ಕುಲಕರ್ಣಿ ಆಗಮಿಸಿದ್ದರು.
ಪ್ರಾಚಾರ್ಯ ಮನೋಜ ಕಟಗೇರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಶಶಿಧರ ಕುಸೂರ, ಎನ್.ಎಸ್.ಎಸ್. ಘಟಕದ ಮುಖ್ಯಸ್ಥ ಶ್ರೀಶೈಲ ಕಾಮಗೊಂಡ, ರೆಡ್ ಕ್ರಾಸ್ ಮುಖ್ಯಸ್ಥ ಕೆ.ಮಹೇಶ, ರೇಂಜರ ಮತ್ತು ರೋವರ ಅಧಿಕಾರಿ ಶಿವಾನಂದ ಜಿಗಜೇವಣಿ, ಆರ್.ಪಿ.ಬಗಲಿ, ಕೆ.ಎಸ್.ಕದರಕರ, ದೇವಪ್ಪ ಪಾಟೀಲ, ವಿ.ಸಿ.ಬಾಡನ್ ಸೇರಿದಂತೆ ಪಿಯು ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು,೨೪-೨೫ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು.