ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ದುರ್ಗಾಬಾಯಿಯವರು ಆಂಧ್ರಪ್ರದೇಶದ ಪೂರ್ವ ಕರಾವಳಿಯ ರಾಜಮಂಡ್ರಿಯಲ್ಲಿ ಜುಲೈ 15 1909ರಲ್ಲಿ ಜನಿಸಿದರು. ಆ ಕಾಲದಲ್ಲಿ ಪ್ಲೇಗ್ ಮತ್ತು ಕಾಲರಾ ರೋಗಗಳು ಬಹಳವಾಗಿದ್ದವು.ಆಗ ಅವರ ತಂದೆ ಒಬ್ಬ ಸಾಮಾಜಿಕ ಕಾರ್ಯಕರ್ತರನ್ನು ನೇಮಿಸಿದರು. ಅವರು ಈ ಭಯಂಕರ ಕಾಯಿಲೆಗಳಿಗೆ ಹೆದರುತ್ತಿರಲಿಲ್ಲ. ದುರ್ಗಾಬಾಯಿಯವರು ತಾಯಿ ಹಾಗೂ ತಮ್ಮನಾದ ನಾರಾಯಣರೊಂದಿಗೆ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಕಾಕಿನಾಡದ ರಸ್ತೆಗಳನ್ನು ದಾಟಿ ಸ್ಮಶಾನಗಳು, ಉರಿಯುವ ಘಟ್ಟಗಳು ಮತ್ತು ಚರ್ಚಿನ ಸಮಾಧಿಗಳಿಗೆ ಭೇಟಿ ಇತ್ತು ಸಾಂಕ್ರಾಮಿಕ ರೋಗಗಳಿಂದ ಸತ್ತವರಿಗೆ ನಿಷೇಧವಿದ್ದರೂ ಗೌರವ ಪೂರ್ವಕ ವಿದಾಯ ಹೇಳುತ್ತಿದ್ದರು.
ಗಾಂಧಿಯವರು 1921 ರಲ್ಲಿ ಆಂಧ್ರಕ್ಕೆ ಭೇಟಿ ಇದ್ದಾಗ ದುರ್ಗಾದೇವಿಯವರಿಗೆ ಹನ್ನೆರಡು ವರ್ಷ ವಯಸ್ಸು. ಅವರಿಗೆ ಗಾಂಧಿಯವರನ್ನು ಭೇಟಿಯಾಗಿ ದೇವದಾಸಿಯರು ಪರದಾ ಹಾಕಿದ ಮಹಿಳೆಯರು ಮುಂತಾದವರಿಗೆ ಇರುವ ಕಡಿವಾಣಗಳು ಮತ್ತು ಸಂಕೋಲೆಗಳ ಬಗ್ಗೆ ಮಾತಾಡಬೇಕೆಂದು ಆಶಿಸಿದರು
ಆದರೆ ಒಂದಿಷ್ಟು ಜನರು ಇದರ ಸಲುವಾಗಿ ಹಣ ಸಂಗ್ರಹಿಸಬೇಕೆಂದು ಅವರಿಗೆ ಹೇಳಿದರು. ದುರ್ಗಾಬಾಯಿ ಯವರು ತಕ್ಷಣವೇ ಈ ವಿಷಯ ವಾಗಿ ಕಾರ್ಯರೂಪಕ್ಕೆ ಇಳಿದರು. ಇನ್ನೊಬ್ಬರಿಗೆ ಮನದಟ್ಟು ಮಾಡಿಸುವ ಇವರ ಗುಣ ಮತ್ತು ಗಾಂಧೀಜಿಯವರ ಉನ್ನತ ಆದರ್ಶದ ನೆರಳು, ಮೋದಿ ಮಾಡಿ ಜನರು ಉದಾರವಾಗಿ ದಾನ ಮಾಡಲಾರಂಭಿಸಿದರು. ನಂತರ ಗಾಂಧೀಜಿಯವರು ಬಂದಾಗ ಅವರ ಭಾಷಣವನ್ನು ಏರ್ಪಡಿಸಲು ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶಿವಯ್ಯ ಶಾಸ್ತ್ರಿಗಾರು ಅವರನ್ನು ಸಂಪರ್ಕಿಸಿ ಶಾಲೆಯ ಮೈದಾನವನ್ನು ಕೊಡುವಂತೆ ಕೇಳಿಕೊಂಡರು. ಗಾಂಧಿಯವರ ಆಗಮನದ ದಿವಸ ಒಂದು ಸಾವಿರ ಮಹಿಳೆಯರು ಗಾಂಧೀಜಿಯವರ ದರ್ಶನಕ್ಕೆ ಕಾದು ಕುಳಿತಿದ್ದರು.ಅವರು ಮಾತನಾಡುವುದಕ್ಕೆ ಮೊದಲೇ ಎಲ್ಲರೂ ಕಾಲು ಮುಟ್ಟಿ ನಮಸ್ಕರಿಸಲು ಮುನ್ನುಗ್ಗಿದರು. ಜೊತೆಗೆ ತಮ್ಮ ಬಳಿ ಇದ್ದ ಬೆಲೆ ಬಾಳುವ ವಸ್ತುಗಳು, ಬಳೆಗಳು ಮತ್ತು ಕಂಠಹಾರಗಳನ್ನು ದಾನ ಮಾಡಿದರು. ತದನಂತರದಲ್ಲಿ ದುರ್ಗಾ ಬಾಯಿಗೆ ತಿಳಿದುಬಂದಿದ್ದು ಏನೆಂದರೆ ತಾನು ಸಂಗ್ರಹಿಸಿದ್ದು ಐದು ಸಾವಿರ ರೂಪಾಯಿಗಳು ಸೇರಿ ಎಲ್ಲಾ ವಸ್ತುಗಳ ಮೌಲ್ಯ 25,000 ರೂ. ಗಾಂಧೀಜಿಯವರ ಭಾಷಣ ಅರ್ಥ ಗಂಟೆಗಿಂತ ಹೆಚ್ಚಾಗಿತ್ತು ನಂತರ ಗುಂಪಿನ ಜೊತೆಗೆ ಒಬ್ಬೊಬ್ಬರೊಂದಿಗೆ ಮಾತಿನ ವಿನಮಯ ಮಾಡಿದರು. ಮಹಿಳೆಯರ ಹಕ್ಕುಗಳಿಗೆ ಅಡ್ಡ ಬರುತ್ತಿದ್ದ ಹಳೆಯ ಕಂದಾಚಾರಗಳನ್ನು ಬಿಡಬೇಕೆಂದು ಹೇಳಿದರು. ದುರ್ಗಾದೇವಿಯವರು ಗಾಂಧಿಯವರ ಭಾಷಣವನ್ನು ತೆಲುಗಿಗೆ ಭಾಷಾಂತರಿಸಿದರು. ಗಾಂಧಿಯವರು ದುರ್ಗಾದೇವಿಯವರ ಸಾಮರ್ಥ್ಯ ಮತ್ತು ಭದ್ದತೆಗಳನ್ನು ಮೆಚ್ಚಿಕೊಂಡರು. ಅಲ್ಲಿಂದ ಆಚೆಗೆ ಆ ಪ್ರಾಂತ್ಯಕ್ಕೆ ಬಂದಾಗ ಸಹಜವಾಗಿ ಭಾಷಾಂತರಕಾರರಾದರು.
1921 ರಲ್ಲಿ ಗಾಂಧೀಜಿ ಅವರನ್ನು ಭೇಟಿಯಾದ ದುರ್ಗಾಬಾಯಿ ಅವರ ಕುಟುಂಬದ ಕೈಯಿಂದ ನೇಯ್ದ ಖಾದಿ ಉಡುಪನ್ನು ಮಾತ್ರ ಧರಿಸುವಂತಹ ನಿರ್ಣಯ ತೆಗೆದುಕೊಂಡರು. ಸ್ವದೇಶಿ ಚಳುವಳಿಯ ಅಂಗವಾಗಿ ಹಾಕಿದ್ದ ಬೆಂಕಿಯಲ್ಲಿ, ಆಮದು ಮಾಡಿದ ಗಿರಣಿಯಲ್ಲಿ ನೇಯ್ದ ಎಲ್ಲ ಬಟ್ಟೆಗಳನ್ನು ಸುಟ್ಟು ಹಾಕಿದರು. ನಂತರದ ವರ್ಷದಲ್ಲಿ ಬಾಲಿಕಾ ಹಿಂದಿ ಪಾಠಶಾಲಾ ಪ್ರಾರಂಭಿಸಿ ರಾಜಮಂಡ್ರಿಯಲ್ಲಿ ಬಾಲಕಿಯರಿಗೆ ಹಿಂದಿಯನ್ನು ಹೇಳಿಕೊಡುವ ಪ್ರಯತ್ನ ಮಾಡಿದರು.ಮೊದಲು ಶಾಲೆಯನ್ನು ಅವರ ಮನೆಯಲ್ಲಿಯೇ ಪ್ರಾರಂಬಿಸಿ 1923ರ ನಂತರ ಶಾಲೆಯನ್ನು ವಿಸ್ತರಿಸಲಾಯಿತು, ಕಾಂಗ್ರೆಸ್ ನ ಸದಸ್ಯರು ಮತ್ತು ಇತರರು ಶಾಲೆಗೆ ಭೇಟಿ ನೀಡುತ್ತಾ ಇದ್ದರು. ಪುಸ್ತಕಗಳು ಮತ್ತು ದೇಣಿಗೆಗಳಿಂದ ಒಳ್ಳೆಯ ಗ್ರಂಥಾಲಯವು ಸಿದ್ಧವಾಯಿತು ನಂತರದಲ್ಲಿ ಶಾಲೆಗೆ ಸುಮಾರು 400 ಮಕ್ಕಳು ಕಲಿಯಲು ಬಂದರು.ತರುವಾಯ ಅವರೆಲ್ಲ ಕಾಕಿನಾಡದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸ್ವಯಂಸೇವಕರಾಗಿ ಸೇರ್ಪಡೆಯಾದರು. ಬಾಲಿಕಾ ಹಿಂದೂ ಪಾಠಶಾಲೆಯನ್ನು ದುರ್ಗಾಬಾಯಿಯವರು ಬಹಳ ಸಣ್ಣ ವಯಸ್ಸಿನಲ್ಲಿಯೇ ಪ್ರಾರಂಭಿಸಿದರು. ಆನಂತರ ಮದ್ರಾಸ್,ಹೈದರಾಬಾದ್ ಮತ್ತು ದೆಹಲಿಗಳಲ್ಲಿ ಇಂತಹ ಸಂಸ್ಥೆಗಳನ್ನು ಕಟ್ಟಿದರು.
,ದುರ್ಗಾಬಾಯಿಯವರು 1930 ಮತ್ತು 1933ರ ಮಧ್ಯೆ ಮೂರು ಬಾರಿ ಕಾರಾಗೃಹದಲ್ಲಿದ್ದರು. 1930ರಲ್ಲಿ ಗಾಂಧಿಯವರು ಪ್ರಾರಂಭಿಸಿದ ನಾಗರಿಕ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡಿದ್ದಕ್ಕೆ ಪಡೆದ ಕಾಣಿಕೆ ಅಲ್ಲದೆ ದಂಡಿ ಉಪ್ಪಿನ ಸತ್ಯಾಗ್ರಹದ ಸಮಯದಲ್ಲೂ ಬಹುದೊಡ್ಡ ಗುಂಪನ್ನು ಅವರ ಜಿಲ್ಲೆಯಲ್ಲಿ ಮುನ್ನಡೆಸಿದರು. ಮಧುರೆಯ ಕಾರಾಗೃಹದಲ್ಲಿದ್ದಾಗ ಕೈದಿಗಳ ಉಪಚಾರದಲ್ಲಿ ಭೇದಭಾವ ಮಾಡುತ್ತಿದ್ದ ಅಧಿಕಾರಗಳ ವಿರುದ್ಧ ದಂಗೆಯೆದ್ದಿದ್ದರು. ದುರ್ಗಾಬಾಯಿ ಅವರ ಆರೋಗ್ಯ ಜೈಲಿನಲ್ಲಿ ಕ್ಷೀಣಿಸಿದ ನಂತರ 1930ರಲ್ಲಿ ಅವರನ್ನು ಬೇಗನೆ ಬಿಡುಗಡೆ ಮಾಡಲಾಯಿತು. ಜೈಲಿನಲ್ಲಿ ದ್ದವರನ್ನು ತಪ್ಪಾಗಿ ಅಪರಾಧಿಗಳೆಂದು ಪರಿಗಣಿಸಿ ಜೈಲು ಸೇರಿ ಮರಣ ದಂಡನೆಗೊಳಗಾದ ಎಲ್ಲಾ ಅಪರಾಧಿಗಳ ಯಾತನೆ, ಅಳು ಮುಂತಾದ ಅನುಭವಗಳು ಅವರನ್ನು ಬಹಳವಾಗಿ ಭಾದಿಸಿದ್ದವು.

ಅವರು 10ನೇ ತರಗತಿಯ ಹೊರಗಿನ ವಿದ್ಯಾರ್ಥಿಯಾಗಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಪರೀಕ್ಷಾ ಬರೆದರು. ಅಲ್ಲಿ ಅತ್ಯುತ್ತಮ ಶೈಕ್ಷಣಿಕ ಕೇಂದ್ರದ ಸ್ಥಾಪಕರಾಗಿದ್ದ ಮದನ್ ಮೋಹನ್ ಮಾಳವೀಯ ಅವರ ಒಂದೇ ಧೃಢ ಮನಸ್ಸು ಮತ್ತು ಬದ್ಧತೆಗಳು ಇವರ ಮೇಲೆ ಪ್ರಭಾವ ಬೀರಿದವು. ನಂತರ ಆಂಧ್ರ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅನಂತರದಲ್ಲಿ ಅವರು ಕಾನೂನನ್ನು ಅಭ್ಯಾಸ ಮಾಡಬೇಕೆಂದಿದ್ದರು. ಆದರೆ ಮಹಿಳೆಯರಿಗೆ ವಸತಿ ಸೌಕರ್ಯವಿಲ್ಲ ಎಂಬ ಕಾರಣ ದಿಂದ ಅವರಿಗೆ ಪ್ರವೇಶ ಕೊಡಲಿಲ್ಲ. ಅನಂತರ ಇವರು ದಿನಪತ್ರಿಕೆಯಲ್ಲಿ ಜಾಹೀರಾತು ನೀಡಿ ಕಾನೂನು ಪದವಿ ಪಡೆಯಬೇಕೆಂದು ಅಭಿಲಾಷೆ ಇರುವ ಮಹಿಳೆಯರೆಲ್ಲ ಒಟ್ಟಿಗೆ ಸೇರಿ ತಮ್ಮದೇ ಆದ ವಸತಿ ಕೇಂದ್ರವನ್ನು ನಿರ್ಮಿಸಿಕೊಂಡು ಊಟದ ವ್ಯವಸ್ಥೆ ಮಾಡಿಕೊಂಡು 1942 ರಲ್ಲಿ ಕಾನೂನು ಪದವಿ ಗಳಿಸಿದರು. ನಂತರ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ನೋಂದಣಿಯಾದರು. ಆ ಸಮಯದಲ್ಲಿ ಮದ್ರಾಸಿನಲ್ಲಿ ಒಂದು ಆಂಧ್ರ ಮಹಿಳಾ ಸಭಾ ಎಂಬ ಧರ್ಮಾರ್ಥ ಸಂಸ್ಥೆಯನ್ನು ಸಹ ಕಟ್ಟಿದರು.
ಮಹಿಳಾ ಸಭೆಯ ಮಹಿಳೆಯರು ಮತ್ತು ಮಕ್ಕಳಿಗೆ ಹಿಂದಿಯನ್ನು ಕಳಿಸುತ್ತಾ ಜೊತೆಗೆ ಕರಕುಶಲ ಹೊಲಿಯುವುದು ಮತ್ತು ಕಸೂತಿ ಕೆಲಸವನ್ನು ಹೇಳಿಕೊಡಲಾಗುತ್ತಿತ್ತು. ಮೂರು ವರ್ಷಗಳ ನಂತರ 1940 ರಲ್ಲಿ ಮುಚ್ಚುಳವನ್ನು ಪ್ರಾರಂಭಿಸಿದರು ಪ್ರಸಿದ್ಧಿ ಪಡೆದ ಕೆಲವು ಸಾಹಿತಿಗಳು ಅವರ ನಿಯತಕಾಲಿಕೆಯಲ್ಲಿ ಲೇಖನಗಳನ್ನು ಬರೆಯ ತೊಡಗಿದರು. ನಂತರದಲ್ಲಿ ಇಂಗ್ಲಿಷ್ ನ ಅವತರಿಣಿಕೆ ಪ್ರಾರಂಭವಾಯಿತು. ಈ ಸಂಸ್ಥೆಯ ಧ್ಯೇಯಗಳು ವೈವಿಧ್ಯಮವಾಗಿದ್ದವು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮೆಟ್ಟಿಕುಲೇಷನ್ ಮುಗಿಸಲು ಬಾಲಕಿಯರಿಗೆ ವಸತಿ ಸೌಲಭ್ಯ ಸಂಗೀತ ಮತ್ತು ನಟನೆ ಹಾಗೂ ಕರಕುಶಲದಲ್ಲಿ ತರಗತಿಗಳನ್ನು ನಡೆಸಲು ಪ್ರಾರಂಭ ಮಾಡಿತು. ಮದ್ರಾಸಿನಲ್ಲಿ ಈ ಸಭೆಯ ಮೊದಲ ಕಟ್ಟಡಕ್ಕೆ ಗಾಂಧೀಜಿಯವರು ಜನೇವರಿ 1946ರಲ್ಲಿ ಅಡಿಪಾಯ ಹಾಕಿದರು.ನಂತರದ ದಶಕಗಳಲ್ಲಿ ಮಹಿಳಾ ಸಭೆಯ ಶಾಲೆಗಳು ಜೀವನೋಪಾಯ ಕೇಂದ್ರಗಳು ಮತ್ತು ಆಸ್ಪತ್ರೆಗಳ ಜಾಲತಾಣವಾಗಿ ಬೆಳೆಯಿತು.
ದುರ್ಗಾಬಾಯಿ ಅವರನ್ನು 1946ರ ಅಂತ್ಯದಲ್ಲಿ ಸಂವಿಧಾನದ ವಿಧಾನಸಭೆಗೆ ನಾಮ ನಿರ್ದೇಶನ ಮಾಡಲಾಯಿತು.ಆಗ ಅವರು ಏಕೈಕ ಮಹಿಳಾ ಚೇರ್ಮನ್ ಆಗಿದ್ದು ಅನೇಕ ಚರ್ಚೆಗಳಲ್ಲಿ ಪಾಲ್ಗೊಂಡು ಸಂವಿಧಾನದ ರಚನೆಯಲ್ಲಿ ಪಾಲ್ಗೊಂಡರು ಹಾಗೂ ಅನೇಕ ಸುಧಾರಣೆಗಳನ್ನು ತಂದರು. ಅವರು ಅನೇಕ ಸಮಾಜ ಕಲ್ಯಾಣ ಕಾನೂನುಗಳನ್ನು ತಂದರು.
ಸ್ವಾವಲಂಬಿ ಮತ್ತು ನವೀನ ಭಾರತವನ್ನು ಕಟ್ಟಲು ಸರ್ಕಾರವು ದುರ್ಗಾಬಾಯಿ ಅವರನ್ನು 1952 ರಲ್ಲಿ ಯೋಜನಾ ಆಯೋಗಕ್ಕೆ ನಾಮ ನಿರ್ದೇಶನ ಮಾಡಿತು. 1953ರಲ್ಲಿ ಕೇಂದ್ರೀಯ ಸಮಾಜ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಬೇಕಾದ ಹಣವನ್ನು ಸಂಪಾದನೆ ಮಾಡಲು ಅನುಕೂಲಗಳನ್ನು ಒದಗಿಸಿಕೊಂಡಿತು. ಅದೇ ವರ್ಷ ದುರ್ಗಾಬಾಯಿಯವರು ನೆಹರುರವರ ಮಂತ್ರಿಮಂಡಲದಲ್ಲಿ ಆರ್ಥಿಕ ಮಂತ್ರಿ ಆಗಿದ್ದ ಚಿಂತಾಮಣಿ ದೇಶಮುಖರವರನ್ನು ಮದುವೆಯಾದರು. ದುರ್ಗಾಬಾಯಿಯವರು ಸಮಾಜ ಕಲ್ಯಾಣ ಸಂಸ್ಥೆಗಳನ್ನು ಕಟ್ಟಿ ಭಾರತದ ಅತ್ಯಂತ ವಂಚಿತ ವ್ಯಕ್ತಿಗಳನ್ನು ಸ್ವಾವಲಂಬಿಗಳಾಗಿ ಮಾಡಲು ಕಾರಣರಾದರು. ಸಮಾಜ ಕಲ್ಯಾಣ ಮಂಡಳಿಯು ಗ್ರಾಮೀಣ ಪ್ರದೇಶಗಳಲ್ಲಿ 3000 ಸಮಾಜ ಕಲ್ಯಾಣ ಕೇಂದ್ರಗಳನ್ನು ತೆರೆದು ಗ್ರಾಮ ಸೇವಕಿಯರನ್ನು ತಯಾರು ಮಾಡಿ ದಾದಿ ಮತ್ತು ಕರಕುಶಲ ಉಪಾಧ್ಯಾಯರುಗಳಿಗೆ ಬೆಂಬಲ ಕೊಡುವಂತೆ ಮಾಡಿದರು. ಅವರ ಸ್ವರಾಜ್ ಸಹಚರರಾಗಿದ್ದ ಮುತ್ತುಲಕ್ಷ್ಮಿ ರೆಡ್ಡಿ ಅವರ ಕನಸಿನ ಯೋಜನೆಯಾಗಿದ್ದ ಕ್ಯಾನ್ಸರ್ ಸಂಸ್ಥೆಗೆ ಅನುದಾನ ಒದಗಿಸಿ ಕೊಟ್ಟರು. ಅವರು 1960 -62 ರಲ್ಲಿ ಬಾಲಕಿಯರ ರಾಷ್ಟ್ರೀಯ ಸಮಿತಿ ಮತ್ತು ಮಹಿಳೆಯರ ಶಿಕ್ಷಣ ಸಂಸ್ಥೆ ಹಾಗೂ “ಕುರುಡು ಮಹಿಳೆಯರ ಪರಿಹಾರ ಮತ್ತು ಶಿಕ್ಷಣ ಸಂಘ”ದ ಅಧ್ಯಕ್ಷರಾಗಿ ಅನೇಕ ವಿದ್ಯಾರ್ಥಿ ನಿಲಯಗಳು ಮತ್ತು ಕಾರ್ಯಾಗಾರಗಳನ್ನು ಹೊಂದಿಸಿಕೊಟ್ಟರು. ಎರಡನೆಯ” ಕಾಮನ್ವೆಲ್ತ್ ಶಿಕ್ಷಣ ಸಮ್ಮೇಳನ” “ವಿಶ್ವ ಆಹಾರ ಕಾಂಗ್ರೆಸ್, “ಯುನೈಟೆಡ್ ನೇಷನ್ಸ್ ಎಕನಾಮಿಕ್ ಮತ್ತು ಸೋಶಿಯಲ್ ಕೌನ್ಸಿಲ್” ನಲ್ಲಿ ಭಾಗವಹಿಸಿದ್ದರು.ಭಾರತ ಸರ್ಕಾರವು ಭಾರತದ ಅತ್ಯುನ್ನತ “ಪದ್ಮವಿಭೂಷಣ” ಪ್ರಶಸ್ತಿಯನ್ನು ಕೊಟ್ಟು ಅವರ ಸಾರ್ವಜನಿಕ ಸೇವೆಯನ್ನು ಗೌರವಿಸಿದೆ.


