ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಸಸ್ಯ ಕ್ರಿಯಾಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ಒಂದು ಹುದ್ದೆಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಜುಲೈ ೧೭ರಂದು ಬೆಳಗ್ಗೆ ೧೧ಗಂಟೆಗೆ ಕೃಷಿ ಮಹಾವಿದ್ಯಾಲಯದ ಸಂದರ್ಶನ ಕೊಠಡಿಯಲ್ಲಿ ಸಂದರ್ಶನ ನಡೆಯಲಿದೆ.
ಶೈಕ್ಷಣಿಕ ಅರ್ಹತೆಯುಳ್ಳ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಅಗತ್ಯ ಮೂಲ ದಾಖಲೆಗಳನ್ನು ಹಾಗೂ ಆ ದಾಖಲೆಗಳ ಎರಡು ಝರಾಕ್ಸ್ ಪ್ರತಿಗಳನ್ನು ಭಾವಚಿತ್ರದೊಂದಿಗೆ ಅರ್ಜಿ ನಮೂನೆಗೆ ಲಗತ್ತಿಸಿ, ಸಂದರ್ಶನ ಸಂದರ್ಭ ತರುವಂತೆಯೂ,ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೫೨-೨೯೫೪೧೧ ಮೊ:೯೮೮೦೬೪೦೨೮೭ ಸಂಪರ್ಕಿಸಬಹುದಾಗಿದೆ ಎಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ಡೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
