Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಮೀಣ ಕ್ರೀಢೆಗಳನ್ನು ಉಳಿಸಿ ಬೆಳೆಸಬೇಕಿದೆ :ಶಾಸಕ ಸವದಿ

ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ

ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ;ಸುರೇಶ ಶೇಡಶ್ಯಾಳ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶಾಸಕರ ಭರವಸೆ: ರೈತರ ಅಮರಣ ಉಪವಾಸ ಅಂತ್ಯ
(ರಾಜ್ಯ ) ಜಿಲ್ಲೆ

ಶಾಸಕರ ಭರವಸೆ: ರೈತರ ಅಮರಣ ಉಪವಾಸ ಅಂತ್ಯ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ತಡವಲಗಾ ಗ್ರಾಮದಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ನಡೆಯುತ್ತಿರುವ ಅಮರಣ ಉಪವಾಸ ಸತ್ಯಾಗ್ರಹ

ಉದಯರಶ್ಮಿ ದಿನಪತ್ರಿಕೆ

ಇಂಡಿ: ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ಭಾರತೀಯ ಕಿಸಾನ್ ಸಂಘದ ವತಿಯಿಂದ ನಡೆಯುತ್ತಿರುವ ಅಮರಣ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ತಮ್ಮ ಎಲ್ಲ ಇಲಾಖೆಗಳ ಅಧಿಕಾರಿಗಳ ಜೊತೆ ಅಮರಣ ಉಪವಾಸ ಸ್ಥಳಕ್ಕೆ ಬಂದು ಉಪವಾಸ ಕುಳಿತ ಗುರುನಾಥ ಬಗಲಿ ಹಾಗೂ ಚಂದಪ್ಪ ಜೆಟೆಪ್ಪ ಮಿರಗಿ ಅವರಿಗೆ ಎಳೆ ನೀರು ಕುಡಿಸುವದರ ಮೂಲಕ ಹೋರಾಟವನ್ನು ಅಂತ್ಯ ಗೊಳಿಸಿದರು.
ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ, ನಾನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಯ ಕಮಿಟಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅವರೊಂದಿಗೆ ಮಾತುಕತೆ ಮಾಡಿ ಹಾಗೂ ಈಗ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ಬಸವರಾಜ ಅವರನ್ನು ಕರೆದುಕೊಂಡು ಬಂದಿದ್ದೇನೆ. ಕೇವಲ ಏಳು ದಿನಗಳ ಒಳಗಾಗಿ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಕೆರೆ ಸೇರಿದಂತೆ ಇಂಡಿ ಹಾಗೂ ಚಡಚಣ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲಾಗುವದು. ಒಂದು ವೇಳೆ ತುಂಬಿಸದಿದ್ದರೆ ನಾನೇ ಸ್ವತಃ ಬಂದು ನಿಮ್ಮ ಜೊತೆ ಹೋರಾಟ ಮಾಡುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ ಎಂದರು.
ತಡವಲಗಾದ ರಾಚೋಟೇಶ್ವರ ಶ್ರೀಗಳು ಮಾತನಾಡಿ, ಈ ಬಾರಿ ಭೀಕರ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. ಕೆರೆಗಳಿಗೆ ನೀರು ಹರಿಸದಿದ್ದರೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೊರುತ್ತದೆ ಎಂದರು.
ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಇಒ ಮಹಾದೇವಪ್ಪ ಏವೂರ, ಡಿವಾಯ್‌ಎಸ್‌ಪಿ ಸದಾಶಿವ ಕಟ್ಟಿಮನಿ ಹೋರ್ತಿ ಪಿಎಸ್‌ಐ ಅನಿತಾ ರಾಠೋಡ ಗ್ರಾಮದ ಮುಖಂಡರಾದ ಬಸವರಾಜ ಇಂಡಿ, ಬಾಬು ಸಾಹುಕಾರ ಮೇತ್ರಿ ಆನಂದಪ್ಪ ದೇಸಾಯಿ,ಸೋಮಶೇಖರ ಬ್ಯಾಳಿ, ತಮ್ಮಣ್ಣ ಪೂಜಾರಿ ಮಲ್ಲನಗೌಡ ಪಾಟೀಲ, ಈರಪ್ಪ ಗೊಟ್ಯಾಳ ಸೋಮಶೇಖರ ಬ್ಯಾಳಿ ನಾಗಪ್ಪ ಮಕಣಿ ಚನ್ನಪ್ಪ ಮಿರಗಿ ಅಂಬಣ್ಣ ಪಂತೋಜಿ ಮತ್ತಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಮೀಣ ಕ್ರೀಢೆಗಳನ್ನು ಉಳಿಸಿ ಬೆಳೆಸಬೇಕಿದೆ :ಶಾಸಕ ಸವದಿ

ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ

ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ;ಸುರೇಶ ಶೇಡಶ್ಯಾಳ

ಅ.೭ರಂದು ವಿಜಯಪುರಕ್ಕೆ ಎನ್‌ಪಿಎಸ್ ಸಂಚಯ ಯಾತ್ರೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಮೀಣ ಕ್ರೀಢೆಗಳನ್ನು ಉಳಿಸಿ ಬೆಳೆಸಬೇಕಿದೆ :ಶಾಸಕ ಸವದಿ
    In (ರಾಜ್ಯ ) ಜಿಲ್ಲೆ
  • ಮಿಣಜಗಿ ಗ್ರಾಮದೆಡೆಗೆ ಬಸ್ ಸಂಚಾರಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ;ಸುರೇಶ ಶೇಡಶ್ಯಾಳ
    In (ರಾಜ್ಯ ) ಜಿಲ್ಲೆ
  • ಶಾಸಕರ ಭರವಸೆ: ರೈತರ ಅಮರಣ ಉಪವಾಸ ಅಂತ್ಯ
    In (ರಾಜ್ಯ ) ಜಿಲ್ಲೆ
  • ಅ.೭ರಂದು ವಿಜಯಪುರಕ್ಕೆ ಎನ್‌ಪಿಎಸ್ ಸಂಚಯ ಯಾತ್ರೆ
    In (ರಾಜ್ಯ ) ಜಿಲ್ಲೆ
  • ಪೂರ್ವಭಾವಿ ಸಭೆ: ಕನ್ನಡಹಬ್ಬ ಅದ್ದೂರಿ ಆಚರಣೆಗೆ ನಿರ್ಧಾರ
    In (ರಾಜ್ಯ ) ಜಿಲ್ಲೆ
  • ಕಾಲುವೆಗಳಿಗೆ ನಿರಂತರ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ೩೭೧ಜೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ
    In (ರಾಜ್ಯ ) ಜಿಲ್ಲೆ
  • ಬಯಲಾಟವನ್ನು ನಾಡಕಲೆಯಾಗಿ ಘೋಷಿಸಿ :ಮೇತ್ರಿ
    In (ರಾಜ್ಯ ) ಜಿಲ್ಲೆ
  • ದೆಹಲಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆಗೆ ಕೆಯುಡಬ್ಲ್ಯೂಜೆ ಖಂಡನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.