ಉದಯರಶ್ಮಿ ದಿನಪತ್ರಿಕೆ
ವಿಜಯಪುರ: 2025-26 ನೇ ಶೈಕ್ಷಣಿಕ ಸಾಲಿಗೆ ಆದರ್ಶ ವಿದ್ಯಾಲಯ ಕಗ್ಗೊಡ ಶಾಲೆಯಲ್ಲಿ 7, 8 ಮತ್ತು 9 ನೇ ತರಗತಿಗೆ ಖಾಲಿ ಇರುವ ಸೀಟುಗಳಿಗೆ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗುವದು.
ದಿನಾಂಕ: 03-07-2025 ರಿಂದ 10-07-2025 ರವರೆಗೆ ಕಗ್ಗೊಡ ಶಾಲೆಯಲ್ಲಿ ಅರ್ಜಿ ಪಡೆದು ಸೂಕ್ತ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸುವದು. ದಿನಾಂಕ: 25-07-2025 ರಂದು ಪ್ರವೇಶ ಪರೀಕ್ಷೆ ನಡೆಸಲಾಗುವದು.
ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಲು ತಾಲೂಕಿನ ಪಾಲಕರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಎಸ್. ಬಳೋಲಮಟ್ಟಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಾಲೆಯ ನೋಡಲ್ ಸುರೇಶ ಕುಶಾಲಕರ (9902716236) ತಾಲೂಕ ನೋಡಲ್ ಪ್ರಭು ಬಿರಾದಾರ(9880832448)ಇವರನ್ನು ಸಂಪರ್ಕಿಸಲು ತಿಳಿಸಿದೆ.
