ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಕೋಶದ ವತಿಯಿಂದ ವಿಜಯಪುರ ಜಿಲ್ಲೆಯ ೫ ಗ್ರಾಮಗಳನ್ನು ದತ್ತು ಪಡೆಯಲು ಜಿಲ್ಲಾ ಪಂಚಾಯತ್ ಮಂಜೂರಾತಿ ನೀಡಿದೆ.
ಈ ಗ್ರಾಮಗಳನ್ನು ಗುರುತಿಸಿ, ದತ್ತು ಪಡೆದ ಹಳ್ಳಿಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆ, ಕೃಷಿ, ಯೋಗ, ಆರೋಗ್ಯ, ಕಲೆ, ಸಾಹಿತ್ಯ, ಕ್ರೀಡೆ ಮತ್ತು ಇನ್ನಿತರ ಚಟುವಟಿಕೆಗಳನ್ನು ಜಾರಿಗೆ ತರಲು ಜಿಲ್ಲಾ ಪಂಚಾಯತ್ ಸೂಚಿಸಿದೆ.
ಮಹಿಳಾ ವಿವಿಯ ಎನ್‌ಎಸ್‌ಎಸ್ ಘಟಕ ಬಬಲೇಶ್ವರ ತಾಲೂಕಿನ ಕಣ್ಮುಚ್ಚಿನಾಳ, ಧನ್ಯಾಳ, ತಿಕೋಟಾ ತಾಲೂಕಿನ ಲೋಹಗಾವ್, ತೊರವಿ ಮತ್ತು ವಿಜಯಪುರ ತಾಲೂಕಿನ ಹಿಟ್ನಳ್ಳಿ ಗ್ರಾಮಗಳನ್ನು ದತ್ತು ಪಡೆಯಲಿದ್ದು ನಿರಂತರ ಕಾರ್ಯಕ್ರಮಗಳನ್ನು ಸಂಘಟಿಸಲಿದೆ ಎಂದು ಮಹಿಳಾ ವಿವಿಯ ಎನ್‌ಎಸ್‌ಎಸ್ ಕೋಶದ ಸಂಯೋಜಕರಾದ ಅಶೋಕಕುಮಾರ ಸುರಪುರ ಮತ್ತು ವಿಜಯಪುರ ಜಿಲ್ಲಾ ಮಹಿಳಾ ಮಹಾವಿದ್ಯಾಲುಯಗಳ ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಪ್ರೊ. ವಿಷ್ಣು ಶಿಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

