ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿ.ಎಲ್.ಡಿ.ಇ. ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ, ಎಂ. ಬಿ. ಎ ವಿಭಾಗ ವತಿಯಿಂದ ಜುಲೈ 3 ರಂದು ಗುರುವಾರ ಸ್ನಾತಕ ಮತ್ತು ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗ ಮೇಳ(ಕ್ಯಾಂಪಸ್ ಸಂದರ್ಶನ)ವನ್ನು ಆಯೋಜಿಸಲಾಗಿದೆ.
ಗುರುವಾರ ಬೆಳಗ್ಗೆ 10 ಗಂಟೆಗೆ ಬಿ.ಎಲ್.ಡಿ.ಇ. ಹೊಸ ಆವರಣದ ಎಂ.ಬಿ.ಎ. ಆಡಿಟೋರಿಯಂನಲ್ಲಿ ಈ ಉದ್ಯೋಗ ಮೇಳ ನಡೆಯಲಿದ್ದು, ಅದರಲ್ಲಿ ಪೇ-ಟಿಎಂ, ಆರ್. ಎನ್. ಎಸ್. ಮೋಟರ್ಸ್, ಫೋನ್-ಪೇ, ಕನಿಷ್ಕ ಆಭರಣ, ಐಎಫ್.ಬಿ. ಮುತ್ತೂಟ್ ಫೈನಾನ್ಸ್, ನಿಪ್ಪೊನ್ ಪೇಂಟ್ಸ್, ಯಟಿಕಾರ್ಪ್, ಜಿಯೋ, ಮುಂತಾದ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ.
ಆಸಕ್ತರು ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿಭಾಗದ ನಿರ್ದೇಶಕ ಡಾ. ಚಿದಾನಂದ ಜಿ. ಬ್ಯಾಹಟ್ಟಿ ಮತ್ತು ಉದ್ಯೋಗ ನಿಯೋಜನೆ ಅಧಿಕಾರಿ ಡಾ. ಮಹಾಂತೇಶ ಪಿ. ಕನಮಡಿ ತಿಳಿಸಿದ್ದಾರೆ.
ಭಾಗವಹಿಸುವವರು ಕೆಳಗೆ ನಮೂದಿಸಿದ ಲಿಂಕ್ ನ್ನು ಉಪಯೋಗಿಸಿಕೊಂಡು ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Link: https://forms.gle/4i5yBLTqKDConT769
