ಜಗತ್ತಿಗೆ ಸಮಾನತೆ, ಭಾತೃತ್ವ, ಏಕತೆ ಮತ್ತು ಶಾಂತಿಯನ್ನು ಸಾರಿದ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ಅವರ ಜನ್ಮದಿನದ ಸಂಕೇತವಾಗಿ ಈದ್ ಮಿಲಾದ ಆಚರಣೆ ಮಾಡಲಾಗುತ್ತದೆ. ಜಗತ್ತಿನಾದ್ಯಂತವಾಗಿ ಆಚರಿಸುವ ಒಂದು ವಿಶೇಷ ಹಬ್ಬ ಇದಾಗಿದೆ.
*• ಪ್ರವಾದಿ ಮುಹಮ್ಮದರ ಜನನ:* ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ಜನನ ಕ್ರಿಸ್ತಶಕ ೫೭೦, ಇಸ್ಲಾಮಿಕ್ ಹಿಜರಿ ಕ್ಯಾಲೆಂಡರಿನ ರಬೀವುಲ್ ಅವ್ವಲ್ ತಿಂಗಳ ಹನ್ನೆರಡನೇ ತಾರೀಕಿನಂದು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಖ್ಯಾತ ಅರಬ್ ಕುಟುಂಬದಲ್ಲಿ ಜನಿಸಿದರು. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲರ ತಂದೆ ಅಬ್ಬುಲ್ಲಾ ತಾಯಿ ಆಮೀನಾ ದಂಪತಿಯ ಪುತ್ರನಾಗಿ ಜನಿಸಿದರು.ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ತಾಯಿ ಆಮೀನಾ ಗರ್ಭವತಿಯಾಗಿದ್ದಾಗಲೇ ತಂದೆ ಅಬ್ಬುಲ್ಲಾ ಅವರು ಮರಣ ಹೊಂದಿದರು.ಅಜ್ಜ ಮುತ್ತಲಿಬ್ ಮತ್ತು ಚಿಕ್ಕಪ್ಪ ಅಬುತಾಲೀಬ್ ಅವರ ಪಾಲನೆಯಲಿ ಬೆಳೆದರು. ಹುಟ್ಟನಿಂದ ಮುಹಮ್ಮದರಿಗೆ ಅಜ್ಜ ಮುತ್ತಲಿಬ್ ಅಂದರೆ ಬಹಳ ಪ್ರೀತಿ ಅವರೇ ಮುಹಮ್ಮದ ಎಂದು ನಾಮಕರಣ ಮಾಡಿದರು. ಅವರೇ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಇಸ್ಲಾಮಿನ ಪ್ರವಾದಿಗಳಲ್ಲಿ ಕೊನೆಯವರಾಗಿದ್ದಾರೆ.
*• ಈದ್ ಮಿಲಾದ ಆಚರಣೆ ಮತ್ತು ಹಿನ್ನೆಲೆ:* ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದು.ಇಸ್ಲಾA ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ದಿನಾಚರಣೆಯನ್ನು ಪ್ರತೀವರ್ಷ ಈದ್ ಮಿಲಾದ್ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಮುಸ್ಲಿಂರು ಆಚರಿಸುತ್ತಾರೆ. ಇಸ್ಲಾಂ ಧರ್ಮದಲ್ಲಿ ಈದ್ ಮಿಲಾದ್ ಆಚರಣೆಗೆ ಅತ್ಯಂತ ದೊಡ್ಡ ಪ್ರಾಮುಖ್ಯತೆಯಿದೆ. ಈದ್ ಮಿಲಾದ್ ಆಚರಣೆಯನ್ನು ಜಗತ್ತಿನ ವಿವಿಧ ಕಡೆಗಳಲ್ಲಿ ವಿವಿಧ ರೀತಿಯಾಗಿ ಆಚರಿಸಲಾಗುತ್ತದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಹುಟ್ಟಿದ ರಬೀವು ಅವ್ವಲ್ ತಿಂಗಳ ಆರಂಭದಿಂದ ತಿಂಗಳ ಕೊನೆಯವರೆಗೂ ಒಂದು ತಿಂಗಳ ಕಾಲ ವಿಶ್ವದಾದ್ಯಂತ ಈದ್ ಮೀಲಾದ್ ಆಚರಣೆಗಳು ನಡೆಯುತ್ತವೆ. ಭಾರತದಲ್ಲಿ ಈದ್ ಮೀಲಾದ್ ಆಚರಣೆಯನ್ನು ಎಲ್ಲಾ ಪಂಗಡದ ಮುಸಲ್ಮಾನರು ಆಚರಿಸುತ್ತಾರೆ. ಈದ್ ಮಿಲಾದ್ ದಿನದಂದು ವಿವಿಧ ಸಾಂಸ್ಕೃತಿಕ, ಪ್ರತಿಭಾ ಕಾರ್ಯಕ್ರಮಗಳನ್ನು ನಡೆಸುವುದು. ಮೌಲೀದ್ ಪಾರಾಯಣ ಮಾಡುವುದು, ಅನ್ನಸಂತರ್ಪಣೆ ಮಾಡುವುದು,ಬಡವರಿಗೆ ದಾನ ಮಾಡುವುದು,ಮೆರವಣಿಗೆ ಮಾಡುವುದು ಈದ್ ಮಿಲಾದ್ ಆಚರಣೆಯ ಒಂದು ಭಾಗವಾಗಿದೆ. ಈ ಒಂದು ಪವಿತ್ರ ರಬೀವುಲ್ ಅವ್ವಲ್ ತಿಂಗಳಲ್ಲಿ ಮುಸ್ಲಿಂರು ಎಲ್ಲಾ ಧಾರ್ಮಿಕ ಕೇಂದ್ರಗಳು ಮತ್ತು ವಿದ್ಯಾ ಸಂಸ್ಥೆಗಳನ್ನು ಬಣ್ಣದ ದೀಪಗಳು, ಮತ್ತು ಕಾಗದಗಳಿಂದ ಅಲಂಕರಿಸಲಾಗುತ್ತದೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದು. ಮೌಲೀದ್ ಅಂದರೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲರ ಪ್ರಕೀರ್ತನೆಯಾಗಿದೆ. ಮೌಲೀದನ್ನು ಸಂಪೂರ್ಣವಾಗಿ ಪಠಿಸಲು ಸುಮಾರು ಒಂದು ಗಂಟೆಗಳಷ್ಟು ಸಮಯ ಬೇಕಾಗುತ್ತದೆ. ಮೌಲೀದ್ ಸಂಪೂರ್ಣವಾಗಿ ಅರೆಬಿಕ್ ಭಾಷೆಯಲ್ಲಿದೆ. ಮೌಲೀದ್ ಪಾರಾಯಣ ಕೇವಲ ಪಠಣವಲ್ಲ. ಮೌಲೀದನ್ನು ಪಾರಾಯಣ ಮಾಡಿದರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇಸ್ಲಾಮಿನಲ್ಲಿದೆ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಜನಿಸಿದ ರಬೀವುಲ್ ಅವ್ವಲ್ ತಿಂಗಳ ಆರಂಭದಿಂದ ಕೊನೆವರೆಗೆ ಮೌಲೀದ್ ಪಾರಾಯಣವನ್ನು ಹೆಚ್ಚಾಗಿ ಮಾಡಲಾಗುತ್ತದೆ. ಪ್ರತಿಭಾ ಕಾರ್ಯಕ್ರಮಗಳ ಆಯೋಜನೆ ಈದ್ ಮೀಲಾದ್ ಆಚರಣೆಯ ಪ್ರಮುಖ ಭಾಗವಾಗಿದೆ. ಆಯ ಊರಿನ ಮದ್ರಸಾದ ಮಕ್ಕಳಿಗೆ ಪ್ರಮುಖವಾಗಿ ಪ್ರತಿಭಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹಾಡು, ಭಾಷಣ, ಕ್ವಿಜ್, ಸಂಭಾಷಣೆ, ಕಥೆ ಹೇಳುವುದು ಹೀಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ. ಪ್ರತಿಭಾ ಕಾರ್ಯಕ್ರಮಗಳ ಆಯೋಜನೆಗಾಗಿ ಒಂದು ತಿಂಗಳ ಮುಂಚೆಯೇ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತದೆ. ಮದ್ರಸಾಗಳಲ್ಲದೆ ಇತರ ಕಡೆಗಳಲ್ಲೂ ಸಂಘ ಸಂಸ್ಥೆಗಳು ಪ್ರತಿಭಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತವೆ.ಅಧ್ಯಾತ್ಮಿಕ ಭೋಧನೆ ಮಂತ್ರ ಪಠಣ ಮಾಡಲಾಗುತ್ತದೆ.
ಪ್ರಮುಖ ನಗರದ,ಗ್ರಾಮಗಳ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಅಯೋಜಿಸಲಾಗುತ್ತದೆ.ವಿವಿಧ ಇಸ್ಲಾಮಿಕ್ ಕಲಾ ತಂಡಗಳು ಭಾಗವಹಿಸುತ್ತವೆ. ವಾಹನ ಮೆರವಣಿಗೆ, ಕಾಲ್ನಡಿಗೆ ಜಾಥ ಇವುಗಳಲ್ಲಿ ಪ್ರಮುಖವಾದವು. ಈದ್ ಮೀಲಾದ್ ಮೆರವಣಿಗೆಯ ದಾರಿಯುದ್ದಕ್ಕೂ ಸಿಹಿ ತಿಂಡಿಗಳನ್ನು ವಿತರಿಸಿವುದು ಮೆರವಣಿಗೆಯ(ಜುಲೂಸ್) ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈದ್ ಮಿಲಾದ್ ಮೆರವಣಿಗೆಯಲ್ಲಿ (ಜುಲೂಸ್) ಕೇವಲ ಮುಸ್ಲಿಂರಲ್ಲದೆ ಇತರ ಧರ್ಮೀಯರು ಪಾಲ್ಗೊಳ್ಳುತ್ತಾರೆ.ಊರಿನ ಪರವೂರಿನ ಜನರಿಗೆ ಅನ್ನ ಸಂತರ್ಪಣೆ ಮಾಡುವುದು ಈದ್ ಮೀಲಾದ್ ಆಚರಣೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು. ಪ್ರವಾದಿಯವರ ಜನ್ಮ ದಿನದ ಹೆಸರಿನಲ್ಲಿ ಅನ್ನಸಂತರ್ಪಣೆ ಮಾಡಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆ ಮುಸ್ಲಿಂರಲ್ಲಿದೆ. ಈದ್ ಮೀಲಾದ್ ದಿನದ ಅಂಗವಾಗಿ ಧಾರ್ಮಿಕ ಕೇಂದ್ರಗಳು ಮತ್ತು ಮನೆಗಳಲ್ಲಿ ಅನ್ನಸಂತರ್ಪನೆ ಮಾಡಲಾಗುತ್ತದೆ. ಶ್ರೀಮಂತ ವ್ಯಕ್ತಿಗಳು ತಮ್ಮ ತಮ್ಮ ಮನೆಗಳಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಹೀಗೆ ಈ ಒಂದು ಈದ್ ಮಿಲಾದ್ ಹಬ್ಬ ಸಮಾನತೆಯ,ಶಾಂತಿಯ ಸಂಕೇತವಾಗಿ ಹೊರಹೊಮ್ಮಿದೆ.
• *ಮುಹಮ್ಮದರ ಬೋಧನೆಗಳು*:ಇಸ್ಲಾಂ ಎಂದರೆ ದೇವರಾದ ಅಲ್ಹಾಗೆ ಶರಣಾಗು ಎಂದರ್ಥ ಇಸ್ಲಾಂ ಪದದ ಅರ್ಥ ಸತ್ಯವಂತನಾಗು ನಂಬಿಕೆಗೆ ಅರ್ಹನಾಗಿರುವುದು ಸದ್ಗುಣಿಯಾಗಿರು ಎಂಬರ್ಥ,ಶಾಂತಿ,ಸಮಾನತೆನ್ನು, ಸೌಹಾರ್ದತೆ ಸಾರಿದವರು.ಇತರರನ್ನು ಒಳ್ಳೆಯದನ್ನು ಬಯಸುವುದು,ಮನುಷ್ಯ ಜನ್ಮದಲ್ಲಿ ಸದಾ ಒಳಿತನ್ನು ಮಾಡುತ್ತ ಸದಾ ಅಲ್ಹಾನ ಸ್ಮರಿಸುವುದು ಅವರ ಪ್ರಮುಖ ಸಂದೇಶವಾಗಿದೆ.
Related Posts
Add A Comment