ಉದಯರಶ್ಮಿ ದಿನಪತ್ರಿಕೆ
ಇಂಡಿ: ಶಿಕ್ಷಕಿ, ಸಾಹಿತಿ ಪಾರ್ವತಿ ಬಸವರಾಜ ಸೊನ್ನದ (ತಳವಾರ)- ಅವರನ್ನು “ರಾಜ್ಯ ಮಟ್ಟದ ಬಸವ ಚೇತನ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ ನಗರದ ಕಂದಗಲ್ ಹನುಮಮಂತರಾಯ ರಂಗಮಂದಿರದಲ್ಲಿ ಅಮ್ಮ ಫೌಂಡೇಶನ್ ವತಿಯಿಂದ ಜುಲೈ 06 ರಂದು ಜರುಗಲಿರುವ ರಾಜ್ಯಮಟ್ಟದ ಬಸವ ಸಂಸ್ಕೃತಿ ಉತ್ಸವದಲ್ಲಿ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.