ವಿಜಯಪುರ: ದೈಹಿಕವಾಗಿ, ಮಾನಸಿಕವಾಗಿ ಸದೃಡಗೊಳ್ಳಲು ಕ್ರೀಡೆ ಅವಶ್ಯಕವಾಗಿದೆ. ಅದರಂತೆ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದು ವಾಲಿಬಾಲ್ ತಂಡದ ಮುಖ್ಯಸ್ಥ ಗುರುಶಾಂತ್ ಶ್ರೀಶೈಲ ಗಡ್ಡದ ಹೇಳಿದರು.
ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಗಂಗನಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಬಸವೇಶ್ವರ ಜಾತ್ರಾ ನಿಮಿತ್ತವಾಗಿ ಹಮ್ಮಿಕೊಂಡಿರುವ ವಾಲಿಬಾಲ್ ಪಂದ್ಯಾವಳಿಯ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಕರು ಕ್ರೀಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸುವ ಮನೋಭಾವ ಕ್ರೀಡಾ ಪಟುಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸತತ ನಾಲ್ಕು ದಿನಗಳ ಕಾಲ ನಡೆದಿರುವ ಪಂದ್ಯಾವಳಿಯಲ್ಲಿ ಗುರು ಅಣ್ಣಾ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ಸ್ ಪಟ್ಟ ಗಿಟ್ಟಸಿಕೊಂಡಿತು. ಸತತ ಪರಿಶ್ರಮದೊಂದಿಗೆ ಗುರು ಅಣ್ಣಾ ತಂಡ ಜೊತೆಗೆ ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡ ಇಸ್ರೋ ತಂಡವನ್ನು ರೋಚಕವಾಗಿ ಸೋಲಿಸಿ ಬಿಸಿ ಮುಟ್ಟಿಸಿದರು. ಗುರು ಅಣ್ಣಾ ತಂಡದ ಆಟಗಾರರಾಗಿರುವ ತಂಡದ ನಾಯಕ ಶಿವಾನಂದ ಅಲ್ದಿ, ಸಿದ್ದು ಕರ್ಜಗಿ ಉಪ ನಾಯಕ. ಸಂಜೀವ ನಾಯ್ಕೋಡಿ. ತಿಪ್ಪನ ಗೊಂಗಿ. ಯಲ್ಲಾಲಿಂಗ ಅಥಣಿ. ಜೆಟ್ಟಿಂಗ್ ಶಿರಕನಳ್ಳಿ. ಸುನಿಲ್ ವಾಡೆದ. ಆನಂದ್ ಗಂಗನಳ್ಳಿ ಮತ್ತು ಗುರು ಅಣ್ಣಾ ತಂಡದ ಸಪೋರ್ಟರ್ ಜಗದೀಶ ವಿ.ಟಿ ಇದ್ದರು.
Related Posts
Add A Comment