ಮುದ್ದೇಬಿಹಾಳ: ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿಯರ ಹಿತರಕ್ಷಣೆಗೆ ಮುಂದಾಗಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ನ ತಾಲೂಕು ಘಟಕದ ವತಿಯಿಂದ ಪಿಎಸ್ ಮನ್ನಾಬಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇಲ್ಲಿ ಉಢಾಫೆ ಹುಡುಗರ ಹಾವಳಿ ಹೆಚ್ಚಾಗಿದ್ದು, ಅವರು ಪ್ರತಿದಿನ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅವರ ಹಿತರಕ್ಷಣೆಗೆ ಧಕ್ಕೆ ಉಂಟಾಗುತ್ತಿದ್ದು ಇದನ್ನು ತಡೆಗಟ್ಟುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ಅಧ್ಯಕ್ಷ ಮುತ್ತು ಚಲವಾದಿ, ರಾಜಅಹ್ಮದ ನಾಯ್ಕೋಡಿ, ಕಯುಮ ಚೌದರಿ, ಪರಶುರಾಮ ಚಲವಾದಿ, ಮಹೆಬೂಬ ಬಾಗವಾನ(ಆರ್.ಕೆ), ಸಮೀಪ ದ್ರಾಕ್ಷಿ, ಮಲ್ಲಪ್ಪ ಹುಡೇದ, ಅಬ್ದುಲ ಸಲಾಂ ಮುಲ್ಲಾ ಸೇರಿದಂತೆ ಮತ್ತೀತರರು ಇದ್ದರು.
Related Posts
Add A Comment