ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೧೧೦/೩೩/೧೧ ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಸಿಂದಗಿ ಪಟ್ಟಣ, ಯರಗಲ್ ಐಪಿ, ಸುಂಗಠಾಣ ಐಪಿ ಮತ್ತು ಯಂಕಂಚಿ ಐಪಿ ೧೧ ಕೆವ್ಹಿ ಮಾರ್ಗಗಳಲ್ಲಿ ಮೇ.೦೮ರಂದು ಬೆಳಿಗ್ಗೆ ೮ಗಂಟೆಯಿಂದ ಸಾಯಂಕಾಲ ೬ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪ-ವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.