ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಪ್ರಸಕ್ತ ೨೦೨೪-೨೫ ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ೧ ರಲ್ಲಿ ಸ್ಥಳೀಯ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಮಂಜಪ್ಪ ಹರ್ಡೇಕರ (ಎಂ.ಎಚ್.ಎಂ) ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿ ಪ್ರಜ್ವಲ್ ಶ್ರೀಕಾಂತ್ ಬಿರಾದರ್ ೬೨೫ ಕ್ಕೆ ೫೭೩ (ಶೇ, ೯೧.೬೮) ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. ಪ್ರತಿಭಾನ್ವಿತೆ ಅಶ್ವಿನಿ ಅ ಚೌಹಾಣ್ (ಶೇ, ೮೬.೪೦%) ದ್ವೀತಿಯ, ಸಾನಿಯಾ ಬೇಗಂ ನದಾಫ್ (ಶೇ,೮೨%) ತೃತೀಯ ಸ್ಥಾನ ಪಡೆದಿದ್ದಾರೆ.
ಫೈರೋಜಾ ಬಾಗಲಕೋಟ ೫೨೯, ಅಕ್ಷತಾ ಅಮೀನಪ್ಪಗೋಳ ೫೦೦, ಪ್ರಜ್ವಲ್ ವಾಲಿಕಾರ ೪೯೦, ಸಾನಿಯಾ ಬೈಲ್ಕುರ್ ೪೮೫, ಚಂದ್ರಿಕಾ ಹಿರೇಮಠ ೪೮೦, ನಿಶ್ಮಿತಾ ಕೋಪನ್ನವರ್ ೪೮೦, ಐಶ್ವರ್ಯ ಮಂಗುಳ್ಳಿ ೪೭೦ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಪರೀಕ್ಷೆಯಲ್ಲಿ ಗುಣಾತ್ಮಕ ಸಾಧನೆಯೊಂದಿಗೆ ತೇರ್ಗಡೆಯಾಗಿ ಶಾಲೆಗೆ,ಸಂಸ್ಥೆಗೆ ಕೀರ್ತಿ ತಂದಿರುವ ಸಾಧಕ ಮಕ್ಕಳಿಗೆ ಸಂಸ್ಥೆಯ ಅಧ್ಯಕ್ಷರಾದ ಗದುಗಿನ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳವರು, ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿಗಳಾದ ಪ್ರೊ,ಶಿವಾನಂದ ಪಟ್ಟಣಶೆಟ್ಟರ ಅವರು, ಶಾಲೆಯ ಮುಖ್ಯ ಶಿಕ್ಷಕ ಎಸ್. ಆಯ್. ಗಿಡ್ಡಪ್ಪಗೋಳ ಸೇರಿದಂತೆ ಬೋಧಕ ವೃಂದ ಹಾಗೂ ಬೋಧಕೇತರ ವೃಂದವು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

