*ಉದಯರಶ್ಮಿ ದಿನಪತ್ರಿಕೆ*
ಆಲಮೇಲ: ಪಟ್ಟಣದ ನಿರ್ಮಲಾಲಯ ಆಂಗ್ಲ ಮಾದ್ಯಮ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ೮೧% ಫಲಿತಾಂಶ ಬಂದಿದೆ.
ತನುಶ್ರೀ ಮಾನಕರ ೬೧೦(೯೭.೬೦%) ಅಂಕ ಪಡೆದು ಪ್ರಥಮ ಸ್ಥಾನ, ಸಹನಾ ಕಡಗಂಚಿ ೬೦೮ (೯೭.೨೮%) ಅಂಕ ಪಡೆದು ದ್ವಿತೀಯ ಸ್ಥಾನ, ಎಂ.ಪಿ. ಚೇತನ ಮತ್ತು ಪೂರ್ಣಿಮಾ ಬಂಡಗಾರ ಇಬ್ಬರು ೫೮೪(೯೩.೪೪%) ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಒಟ್ಟು ೫೫ ವಿದ್ಯಾರ್ಥಿಗಳಲ್ಲಿ ೧೩ ವಿದ್ಯಾರ್ಥಿಗಳು ಡಿಸ್ಟಿಂಗಷನ ಪಾಸಾಗಿದ್ದರೆ, ೧೭ ವಿದ್ಯಾರ್ಥಿಗಳು ಪ್ರಥರ್ಮ ದರ್ಜೇಯಲ್ಲಿ ಪಾಸಾಗಿದ್ದಾರೆ, ೬ ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಮುಖ್ಯಸ್ಥರು ಹಾಗೂ ಸಿಬ್ಬಂದಿ ಹರ್ಷ ವೆಕ್ತಪಡಿಸಿದ್ದಾರೆ ಎಂದು ಮುಖ್ಯ ಶಿಕ್ಷಕಿ ಐರಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
