Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಶರಣ ಅಂಬಿಗರ ಚೌಡಯ್ಯ
ವಿಶೇಷ ಲೇಖನ

ಶರಣ ಅಂಬಿಗರ ಚೌಡಯ್ಯ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಚಿಂತನೆ
– ಶರಣಮ್ಮ ಗೊರೆಬಾಳ
ಪ್ರಾಚಾರ್ಯರು
ವಿದ್ಯಾರಣ್ಯ ಪಪೂ ಮಹಾವಿದ್ಯಾಲಯ
ಧಾರವಾಡ

ಉದಯರಶ್ಮಿ ದಿನಪತ್ರಿಕೆ

ಬಸವಯುಗದ ಶ್ರೇಷ್ಠ ಶಿವಶರಣ, ಕಾಯಕಯೋಗಿ, ಕಟುವಾದರೂ ದಿಟವನ್ನೇ ನುಡಿಯುವ ಕೆಚ್ಚೆದೆಯ ವಚನಕಾರ ಅಂಬಿಗರ ಚೌಡಯ್ಯ.
ಕಾಲ: 12ನೇ ಶತಮಾನ
ಊರು: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡದಾನಪುರ
ವೃತ್ತಿ: ದೋಣಿ ನಡೆಸುವುದು
ದೊರಕಿದ ವಚನಗಳು: 278
ವಿಶೇಷತೆ: ತನ್ನ ಹೆಸರನ್ನೇ ಅಂಕಿತನಾಮವನ್ನಾಗಿ ಇಟ್ಟುಕೊಂಡು ವಚನ ರಚಿಸಿದ್ದು,
ಆಳವಾದ ಅನುಭವ, ಕಾಯಕನಿಷ್ಠೆಯನ್ನು ಹೊಂದಿದ ಚೌಡಯ್ಯನವರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ ಎದ್ದು ಕಾಣುತ್ತದೆ. ತನ್ನ ವಚನಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿದವನು, ಮನುಷ್ಯ ದೇವರನ್ನು ಹುಡುಕಿಕೊಂಡು ಎಲ್ಲಿಗೂ ಹೋಗಬೇಕಿಲ್ಲ ತನ್ನಲ್ಲಿಯೇ ದೇವರನ್ನು ಕಂಡುಕೊಳ್ಳಬಹುದು ಎಂಬ ವಿಶಿಷ್ಟ ತತ್ವವನ್ನು ಸಾರಿದವನು. ತನ್ನ ಅರಿವೇ ತನಗೆ ಗುರು ಎಂಬ ಅಂಶ ಅವರ ಸಾಕಷ್ಟು ವಚನಗಳಲ್ಲಿ ಕಂಡು ಬರುತ್ತದೆ, ಅಂಬಿಗರ ಚೌಡಯ್ಯ ದೋಣಿಯನ್ನು ನಡೆಸುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದನು, ದೋಣಿಯಲ್ಲಿ ಜನರನ್ನು ಕೂರಿಸಿಕೊಂಡು ನದಿ ದಾಟಿಸುವ ಕಾಯಕ ಮಾಡುತ್ತಿದ್ದನು, ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುವ ಮಾರ್ಗಗಳನ್ನು ತೋರಿಸುವ ಅಂಬಿಗ ಆಗಿದ್ದನು, ಚೌಡಯ್ಯನವರಿಗೆ ತಮ್ಮ ವೃತ್ತಿಯಿಂದ ಹಣ ಮಾಡುವ ಆಸೆ ಇರಲಿಲ್ಲ , ಆದರೆ ಜನರಿಗೆ ಅದರಿಂದ ಉಪಯೋಗವಾದರೆ ಸಾಕು ಎಂಬ ನಿಷ್ಠೆ ಅವರಲ್ಲಿತ್ತು. ದೋಣಿ ನಡೆಸುವವನೇ ಎಂದು ಜನ ಹೀನಾಯವಾಗಿ ಕಾಣುವುದು ಅವನಿಗೆ ಬೇಸರ ತರುತ್ತಿತ್ತು, ವೃತ್ತಿ ಯಾವುದಾದರೂ ಏನು ಅದನ್ನು ನಿಷ್ಠೆಯಿಂದ ಮಾಡುವುದು ಮುಖ್ಯ, ಕಾಯಕವೇ ಕೈಲಾಸ ಎಂದು ನಂಬಿದ ಚೌಡಯ್ಯ,

ವಚನ ಓದು

“ಅಂಬಿಗ ಅಂಬಿಗ ಎಂದು ಕುಂದನುಡಿಯದಿರು
ನಂಬಿದರೆ ಒಂದೇ ಹುಟ್ಟಲಿ
ಕಡೆಯ ಹಾಯಿಸುವ ನಂಬಿಗರ ಚೌಡಯ್ಯ”

ವಚನ ವಿಶ್ಲೇಷಣೆ

ಈ ವಚನದಲ್ಲಿ ತನ್ನ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.
ಅರಿವೇ ಗುರು , ಮೊದಲು ತನ್ನನ್ನು ತಾನು ಅರಿಯಬೇಕು ಎಂಬುದರ ಕುರಿತು ಹಲವಾರು ವಚನಗಳನ್ನು ರಚಿಸಿದ್ದಾರೆ ಅದರಲ್ಲಿ ಮುಖ್ಯವಾದ ಒಂದು ವಚನ
ವಚನ ಓದು

“ಅರಿವಿನ ಪಥವನರಿಯದಿರ್ದಡೆ
ಮುಂದೆ ಹೆರರಿಗೆ ದೀಕ್ಷೆ ಮಾಡಲೇಕೆ?
ತೊರೆಯಲದ್ದವನ ಸೀಲರಿಯದವ
ತೆಗೆಯ ಹೋದಂತಾಯಿತ್ತೆಂದ
ಅಂಬಿಗರ ಚೌಡಯ್ಯ”

ವಚನ ವಿಶ್ಲೇಷಣೆ

ನಾವು ಯಾರಿಗಾದರೂ ಒಳ್ಳೆಯ ದಾರಿ ತೋರಿಸಬೇಕಾದರೆ, ಅರಿವಿನ ಮಾರ್ಗ ತಿಳಿಸ ಬೇಕಾದರೆ ಮೊದಲು ನಾವು ಅರಿವಿನ ದಾರಿ ತಿಳಿದಿರಬೇಕು, ನಮಗೆ ಸರಿಯಾದ ತಿಳುವಳಿಕೆ ಇಲ್ಲದಿದ್ದರೆ ಬೇರೆಯವರಿಗೆ ಹೇಳಲು ಸಾಧ್ಯವಿಲ್ಲ, ಅರಿವು ಎಂದರೆ ತಿಳುವಳಿಕೆ, ಜ್ಞಾನ ತನ್ನನ್ನು ತಾನು ಅರಿತುಕೊಳ್ಳುವುದು, ಯಾವುದೇ ಜ್ಞಾನವಾಗಲಿ ತಿಳುವಳಿಕೆಯನ್ನಾಗಿ ಇನ್ನೊಬ್ಬರಿಗೆ ಹೇಳಬೇಕಾದರೆ ಅದು ಮೊದಲು ನಮಗೆ ತಿಳಿದಿರಬೇಕು, ಅರಿವಿನ ಮಾರ್ಗ ಎಂದರೆ ಬದುಕಿನ ದಾರಿ , ಆಧ್ಯಾತ್ಮಿಕ ಶಿಖರವನ್ನು ಏರುವ ಭಕ್ತಿ ಮಾರ್ಗ, ನುಡಿದಂತೆ ನಡೆಯುವ, ನಡೆದಂತೆ ನುಡಿಯುವ, ಬದುಕಿನ ಮಾರ್ಗ, ಅರಿಷದ್ವರ್ಗಗಳನ್ನು ಮೆಟ್ಟಿ ನಿಲ್ಲುವ ಗೆಲುವಿನ ಮಾರ್ಗ, ಹೀಗೆ ಒಳ್ಳೆಯ ಮಾರ್ಗದಲ್ಲಿ ನಾವು ನಡೆಯಬೇಕಾದರೆ, ನಮ್ಮ ಜೀವನದಲ್ಲಿ ಮೊದಲು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಆದರ್ಶ ಬದುಕನ್ನು ನಿರ್ಮಾಣ ಮಾಡಿಕೊಳ್ಳಬೇಕು. ಇನ್ನೊಬ್ಬರಿಗೆ ಹೇಳುವ ನೈತಿಕತೆಯನ್ನು ನಾವು ಹೊಂದಿರಬೇಕು, ಸುಸಜ್ಜಿತ, ಸುವ್ಯವಸ್ಥಿತ , ಸುರಕ್ಷಿತ ಮಾರ್ಗವನ್ನು ನಾವು ನಿರ್ಮಾಣ ಮಾಡಿಕೊಳ್ಳಬೇಕು ಅಂದಾಗ ಮಾತ್ರ ನಾವು ಆ ದಾರಿಯಲ್ಲಿ ನಡೆಯಬಹುದು, ಇತರರನ್ನು ಕರೆದುಕೊಂಡು ಹೋಗಬಹುದು, ಆದರೆ ನಮಗೆ ಅರಿವಿನ ಪಥ ಗೊತ್ತಿರದಿದ್ದರೆ ಇನ್ನೊಬ್ಬರಿಗೆ ತೋರಿಸಲು ಹೇಗೆ ಸಾಧ್ಯ , ಆದ್ದರಿಂದ ಅರಿವಿನ ಪಥವನ್ನು ಅರಿಯದಿದ್ದರೆ ಹೆರವರಿಗೆ ದೀಕ್ಷೆ ಮಾಡಬೇಕೇ ಎಂಬ ಪ್ರಶ್ನೆ ಅಂಬಿಗರ ಚೌಡಯ್ಯನವರದು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.