ವಿಜಯಪುರ: ಯುವಕರು ವಿವಿಧ ಕಾರಣಗಳಿಂದ ಮಾದಕ ದ್ರವ್ಯದ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ದ್ರವ್ಯಗಳ ಪಿಡುಗು ಸಮಾಜದಲ್ಲಿ ಆಳವಾಗಿ ಬೇರೂರಿದೆ. ಇಂದರಿಂದಾಗಿ ಯುವಪೀಳಿಗೆಯು ವಿನಾಶದತ್ತ ಸಾಗುತ್ತಿದ್ದು, ಈ ಮಾದಕ ದ್ರವ್ಯದಿಂದ ಸಮಾಜ ಮುಕ್ತವಾಗಬೇಕಾಗಿದೆ ಎಂದು ನ್ಯಾಯವಾದಿ ಎಂ.ಬಿ.ನಾಯಕ ಹೇಳಿದರು.
ಮಂಗಳವಾರದಂದು ಬಿಜಾಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ‘ಮಾದಕ ದ್ರವ್ಯ ನಿರ್ಮೂಲನೆ’ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನದಲ್ಲಿ ಅನೇಕ ಯುವಕ ಮತ್ತು ಯುವತಿಯರು ಮಾದಕ ದ್ರವ್ಯದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಹದಿಹರೆಯದವರಲ್ಲಿ ಮಾದಕ ವ್ಯಸನದ ಚಟ ಹೆಚ್ಚುತ್ತಿದ್ದು, ಸಮಾಜದ ನಿರ್ಲಕ್ಷ್ಯ ದಿಂದಾಗಿ ಇಂದು ಯುವ ಜನತೆ ಹೆಚ್ಚೆಚ್ಚು ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಎಸ್‌ಎಸ್ ಆಸ್ಪತ್ರೆಯ ವೈದ್ಯ ಡಾ. ಅಕ್ಷಯ ವಾಘಮೋರೆ ಮಾತನಾಡಿ ಸರಿಸುಮಾರು ಜನರು ಕೊಕೈನ್, ಕ್ಯಾನಬೀಸ್, ಹಾಲೂಸಿನೋಜೆನ್ಸ್ ಮತ್ತು ನಿದ್ರಾಜನಕದಂತಹ ಮಾದಕ ದ್ರವ್ಯಗಳ ಸೇವನೆಗೆ ಒಳಗಾಗಿದ್ದು, ಮಾದಕ ದ್ರವ್ಯಗಳ ದೀರ್ಘಾವಧಿ ಬಳಕೆ ಆರೋಗ್ಯ, ಮಾನಸಿಕ ಅಸ್ವಸ್ಥತೆ, ಸಾವಿಗೆ ಕಾರಣವಾಗುತ್ತದೆ. ಮಾತ್ರವಲ್ಗ, ದೈಹಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಹಾಳು ಮಾಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ವಹಿಸಿದ್ದರು.
ಎಸ್.ವ್ಹಿ.ದೇಶಪಾಂಡೆ, ಜೆ.ಕೆ.ರಾಠೋಡ, ಎಸ್.ಬಿ.ಒಡೆಯರ, ಎಸ್.ಡಿ.ಚವ್ಹಾಣ್, ಆರ್.ಎಸ್.ಹಿರೇಮಠ, ಪಿ.ಎಂ.ಕೌಲಗಿ, ಎಸ್.ಎಂ.ಮಾಳಿ, ಆರ್.ಎನ್.ಬಕಾಟೆ, ರೇಖಾ ರಜಪೂತ, ಎಸ್.ಪಿ.ದಢೇಕರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಸ್.ಕೆ.ಶಿಂಧೆ ಸ್ವಾಗತಿಸಿದರು. ಆರ್.ವ್ಹಿ.ಭುಜಂಗನವರ ನಿರೂಪಿಸಿ, ವಂದಿಸಿದರು.
Related Posts
Add A Comment