ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಕರ್ನಾಟಕದಲ್ಲಿ ಹರಿಯುವ ಭೀಮಾ ನದಿಗೆ ೬೦೦೦ ಕ್ಯೂ ಸೆಕ್ಸ ನೀರು ನದಿ ಪಾತ್ರಕ್ಕೆ ಹರಿಯಬಿಡಲಾಗಿದೆ.
ನಾಗಠಾಣದ ಶಾಸಕ ವಿಠ್ಠಲ ಕಟಕದೊಂಡ ಮತ್ತು ವಿಜಯಪುರ ಜಿಲ್ಲಾಧಿಕಾರಿ ಗಳ ಮನವಿ ಮೇರೆಗೆ ಸೋಲಾಪುರ ಜಿಲ್ಲಾಧಿಕಾರಿಗಳು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಸೋಲಾಪುರ ಸಂಸದೆ ಪ್ರಣಿತಾ ಶಿಂಧೆ ಇವರಿಗೆ ಮಾಡಿಕೊಂಡ ಮನವಿ ಮೇರೆಗೆ ಭೀಮಾ ಪಾತ್ರಕ್ಕೆ ನೀರು ಬಿಡಲಾಗಿದೆ.
ಸಧ್ಯ ನೀರು ಇಂಡಿ ತಾಲೂಕಿನ ಬರಗುಡಿ ಗ್ರಾಮಕ್ಕೆ ಬಂದಿದ್ದು ಸಂಜೆ ಅಗರಖೇಡ ತಲುಪುವ ಸಾಧ್ಯತೆ ಇದೆ.
