ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಧರ್ಮ ಕೇಳಿ ಅಮಾನುಷ್ಯವಾಗಿ ಹತ್ಯೆ ಮಾಡಿರುವ ಉಗ್ರರ ಹೇಯ ಕೃತ್ಯವನ್ನು ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಪಂಜಿನ ಮೆರವಣಿಗೆ ಮೂಲಕ ಶ್ರದ್ದಾಂಜಲಿ ಅರ್ಪಿಸಿ, ಉಗ್ರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗುರುವಾರ ರಾತ್ರಿ ಮೇನ್ ಬಜಾರದ ದೇವಿ ಗುಡಿಯ ಬಳಿ ಹಿಂದೂ ಕಾರ್ಯರ್ತರು ಕಾಶ್ಮೀರದಲ್ಲಿ ನಡೆದ ಉಗ್ರರ ಹತ್ಯ ಖಂಡಿಸಿ ಮೇಣದ ಬತ್ತಿ ಹಚ್ಚಿ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಪಂಜು ಹಿಡಿದು ಮೌನ ಮೆರವಣಿಗೆ ಮಾಡುವ ಮೂಲಕ ಪ್ರತಿಭಟಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ದಾಂಜಲಿ ಅರ್ಪಿಸಿದರು.
ಅಳ್ಳೋಳ್ಳಿಮಠದ ಶ್ರೀಶೈಲಯ್ಯ ಸ್ವಾಮಿಜಿ, ಅರ್ಜುನಗಿ ಹಿರೇಮಠದ ಸಂಗನಬಸವ ಶಿವಾಚಾರ್ಯರು ಸಾನಿದ್ಯದಲ್ಲಿ ಶ್ರದ್ದಾಂಜಲಿ ಮತ್ತು ಪಂಜಿನ ಮೌನ ಮೆರವಣಿಗೆ ಮಾಡಲಾಯಿತು.
ಅಪ್ಪು ಶೆಟ್ಟಿ, ಕಮಲಕರ ಪತ್ತಾರ, ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ಹಣಮಂತ ರಜಪೂತ, ರಾಕೇಶ ರಾಂಪೂರಮಠ, ವಿಶ್ವನಾಥ ಅಮರಗೊಂಡ, ಶ್ರೀಶೈಲ ಕಲ್ಲೂರಮಠ, ಅಂಬಣ್ಣ ರಜಪೂತ, ಅಲೋಕ ಬಡದಾಳ, ರಾಹುಲ ರಜಪೂತ, ಸಾಗರ ಪಾಟೀಲ, ಬಸವರಾಜ ಬಡಿಗೇರ, ಅಭಿ ಸಿಂದೆ, ರಮೇಶ ಕತ್ರಾಬಾದಿ, ಆಕಾಶ ಗಂದಗೆ, ಸುನಿಲ ತೆಲ್ಲೂರ, ಶ್ರೀಕಾಂತ ರಜಪೂತ, ಸಾಗರ ತಾಮಟೆ, ಶಾಮ ರಾಯಚೂರ, ಗಂಗಾದರ ಕೊಡ್ಲಂಗಿ, ಸಾಗರ ಅಲೋಣಿ, ಮಲ್ಲು ಕತ್ರಾಬಾದಿ ಮುಂತಾದವರು ಇದ್ದರು.

