ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತುಂಗಳ ಗ್ರಾಮದ ಶಾಲೆಗೆ ಸ್ಥಳೀಯ ಕೆನರಾ ಬ್ಯಾಂಕಿನ 2025-26 ನೇ ಸಾಲಿನ ಸಿ ಎಸ್ ಆರ್ ಆಕ್ಟಿವಿಟೀಸ್ ಅನುದಾನದ ಅಡಿಯಲ್ಲಿ 65000 ಬೆಲೆ ಬಾಳುವ 1 ರಿಂದ 3 ತರಗತಿ ಮಕ್ಕಳಿಗೆ ಟೇಬಲ್ ಮತ್ತು ಚೇರ್ ಅನ್ನು ವಿತರಣೆ ಮಾಡಿದರು.
ಈ ವೇಳೆ ಕೆನರಾ ಬ್ಯಾಂಕಿನ ಮ್ಯಾನೇಜರ್ ಮಹಾಂತೇಶ ಮಾಯನ್ನವರ ಮಾತನಾಡಿ, ಶಾಲೆಗಳಲ್ಲಿನ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಅವಶ್ಯಕತೆ ಇರುವ ಪರಿಕರಗಳನ್ನು ಕೆನರಾ ಬ್ಯಾಂಕ್ ವತಿಯಿಂದ ನೀಡಲಾಗಿದೆ ಶಾಲೆಯ ಶಿಕ್ಷಕರು ಮತ್ತು ಪಾಲಕರು ಮಕ್ಕಳೊಂದಿಗೆ ಒಡನಾಟವನ್ನು ಹೊಂದಿ ಬ್ಯಾಂಕಿನ ಬಗ್ಗೆ ಮಾಹಿತಿ ನೀಡಲು ಸಹಕವಾಗುತ್ತದೆ ಅಲ್ಲದೆ ಇದು ಒಂದು ಉತ್ತಮ ಕಾರ್ಯವಾಗಿದೆ ಎಂದರು.
ಮುಖ್ಯ ಗುರು ಪಿ.ಎಲ್. ಕನ್ನೋಳ್ಳಿ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರವು ಕ್ಷೇತ್ರದೊಂದಿಗೆ ಸಂಬಂಧ ಬೆಳೆಸುವ ಮೂಲಕ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಪ್ರಶಂಸನೀಯವಾದದ್ದು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ಎಸ್. ಎ. ಬಿರಾದಾರ, ಶ್ರೀಮತಿ ಬಿ. ವಾಯ್, ಔರಸಂಗ, ಶ್ರೀಮತಿ ಜಿ. ಆರ್. ರೂಡಗಿ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ಶಿವಾನಂದ ನಾಕಮಾನ , ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಬ್ಯಾಂಕಿನ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ಸಹ ಶಿಕ್ಷಕ ಅನೀಲ ಗುಣದಾಳ ನಿರೂಪಿಸಿದರು. ಸಹ ಶಿಕ್ಷಕ ಸಂಗಮೇಶ ಅವಟಿ ಅವರು ವಂದಿಸಿದರು.

