ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿಎಸ್ ಆಯುರ್ವೇದ ಮಹಾವಿದ್ಯಾಲಯ ಕಾಯಚಿಕಿತ್ಸೆ ವಿಭಾಗದ ವತಿಯಿಂದ ಏಪ್ರಿಲ್ 26 ರಂದು ಶನಿವಾರ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ(BMD Camp) ನಡೆಯಲಿದೆ.
ಈ ಶಿಬಿರದಲ್ಲಿ ಕೀಲುಗಳಲ್ಲಿ ನೋವು, ಕೈ-ಕಾಲು ನೋವು, ಬೆನ್ನು ನೋವು, ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ(ಆಸ್ಟಿಯೊಪೊರೊಸಿಸ್) ಲಕ್ಷಣಗಳು ಇರುವವರಿಗೆ ಮೂಳೆಗಳ ಸಾಂದ್ರತೆ ಮಾಪನ ಯಂತ್ರದಿಂದ(BMD Test) ಉಚಿತ ತಪಾಸಣೆ ಮಾಡಲಾಗುವುದು.
35 ರಿಂದ 65 ವರ್ಷದೊಳಗಿನ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7975160825 ಮತ್ತು 9513397413 ಸಂಪರ್ಕಿಸುವಂತೆ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
