ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸ್ಥಳೀಯ ಮಾತೋಶ್ರೀ ಗಂಗಾ ಶಿಕ್ಷಣ ಸಂಸ್ಥೆ ಹಾಗೂ ಮಾಸ್ಟರ್ಸ್ ಅಕಾಡೆಮಿ ಸಹಯೋಗದಲ್ಲಿನ ಜ್ಞಾನ ಗಂಗೋತ್ರಿ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಪರೀಕ್ಷೆಯಲ್ಲಿ ಸಾಧನೆಗೈದಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ನಿರಂಜನ ಬೆನಕನವರ ಶೇ.94.60 ಪೂಜಾ ದಾನಗೌಡ ಶೇ.91.17 ಪ್ರವೀಣ ಇಟ್ನಾಳ ಶೇ.88.58 ಹಾಗೂ ರವಿ ವಾಲಿ 88.58 ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಪನಾಳಕರ, ಪ್ರಾಚಾರ್ಯ ಚಂದ್ರಶೇಖರ ಆಶಿ, ಮಾಸ್ಟರ್ಸ್ ಅಕಾಡೆಮಿ ನಿರ್ದೇಶಕರಾದ ಪ್ರದೀಪ ದೇಶಪಾಂಡೆ, ಶೀತಲ್ ಆಸ್ಕಿ, ಯಾಸಿನ್ ಮುಲ್ಲಾ, ರಂಗನಾಯಕ ನಾಯಕ, ಗುರು ಚುಳಚಿಗ್ಯಾರ, ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

