Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 05, 2026

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ

ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಲ್ಲಯ್ಯ ಕಂಬಿಗಳ ಅದ್ಧೂರಿ ಪುರಪ್ರವೇಶ
(ರಾಜ್ಯ ) ಜಿಲ್ಲೆ

ಮಲ್ಲಯ್ಯ ಕಂಬಿಗಳ ಅದ್ಧೂರಿ ಪುರಪ್ರವೇಶ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಬಸವನಬಾಗೇವಾಡಿ: ಸುಕ್ಷೇತ್ರ ಶ್ರೀಶೈಲ ಕ್ಷೇತ್ರಕ್ಕೆ ತೆರಳಿದ್ದ ಮಲ್ಲಯ್ಯನ ಕಂಬಿಗಳನ್ನು ಭಕ್ತರು ವಿವಿಧ ವಾಧ್ಯ ಮೇಳಗಳೊಂದಿಗೆ ಸಂಭ್ರಮ, ಸಡಗರದಿಂದ ಭಾನುವಾರ ಬರಮಾಡಿಕೊಂಡರು.
ಕಳೆದ ತಿಂಗಳು ಹೋಳಿಹುಣ್ಣಿಮೆ ಮರುದಿನ ಇಲ್ಲಿಂದ ಪಾದಯಾತ್ರಾ ಭಕ್ತರೊಂದಿಗೆ ಕಂಬಿಗಳು ಪಾದಯಾತ್ರೆ ಮೂಲಕ ಶ್ರೀಶೈಲ ಕ್ಷೇತ್ರಕ್ಕೆ ತೆರಳಿದ್ದವು. ದ್ವಾದಶ ಲಿಂಗಗಳಲ್ಲಿ ಒಂದಾದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಪ್ರತಿ ವರ್ಷ ಯುಗಾದಿ ಹಬ್ಬದಂದು ನಡೆಯುವ ರಥೋತ್ಸವದಲ್ಲಿ ಈ ಭಾಗದ ಜನರು ಭಾಗವಹಿಸಿ ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸುತ್ತಾರೆ. ತದ ನಂತರ ಹುಣ್ಣಿಮೆಗೆ ಆಯಾ ಆಯಾ ಗ್ರಾಮಗಳಿಗೆ ಅಂದು ತೆರಳಿದ್ದ ಮಲ್ಲಯ್ಯನ ಕಂಬಿಗಳು ಆಗಮಿಸುವದು ಸಾಮಾನ್ಯ.
ಪಟ್ಟಣದ ಮುದ್ದೇಬಿಹಾಳ ರಸ್ತೆಯಲ್ಲಿರುವ ಕಂಬಿ ಕಟ್ಟೆಗೆ ಶನಿವಾರ ರಾತ್ರಿ ಮಲ್ಲಯ್ಯನ ಕಂಬಿಗಳು ಬಂದಿದ್ದವು. ಇಂದು ಬೆಳಗ್ಗೆ ಇಲ್ಲಿನ ಭಕ್ತರು ಕುಂಬಾರರ ಮನೆಗೆ ತೆರಳಿ ಅಲ್ಲಿಂದ ಪೂಜಾ ಸಾಮಗ್ರಿಗಳೊಂದಿಗೆ ಬಸವೇಶ್ವರರ ವಂಶಸ್ಥರಾದ ಕುಲಕರ್ಣಿಯವರ ಮನೆಗೆ, ಗೌಡರ ಮನೆಗೆ ವಿವಿಧ ವಾಧ್ಯ ಮೇಳಗಳೊಂದಿಗೆ ತೆರಳಿ ಅವರನ್ನು ಕರೆದುಕೊಂಡು ಕಂಬಿ ಕಟ್ಟೆಗೆ ಆಗಮಿಸಿದರು. ನಂತರ ಕಂಬಿ ಕಟ್ಟೆಯಲ್ಲಿ ಮಲ್ಲಯ್ಯನ ಕಂಬಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ಸಲ್ಲಿಸಿ ವಾದ್ಯಮೇಳಗಳೊಂದಿಗೆ ಬಸವೇಶ್ವರ ದೇವಸ್ಥಾನಕ್ಕೆ ಭಕ್ತರು ಅವುಗಳನ್ನು ಬರಮಾಡಿಕೊಂಡರು. ಬಸವೇಶ್ವರ ದೇವಸ್ಥಾನದಲ್ಲಿ ಬಂದು ಕುಳಿತ ಮಲ್ಲಯ್ಯನ ಕಂಬಿಗಳಿಗೆ ಭಕ್ತರು ಬೆಲ್ಲವನ್ನು ಮಲ್ಲಯ್ಯನಿಗೆ ಅರ್ಪಿಸಿ ನೆರೆದ ಭಕ್ತ ಸಮೂಹಕ್ಕೆ ಹಂಚಿ ಧನ್ಯತಾ ಭವಾ ಅನುಭವಿಸಿದರು.
ವೇ.ಗುರುಸಂಗಯ್ಯ ಮಠಪತಿ, ಶ್ರೀಶೈಲ ಮಠಪತಿ, ಎ.ಐ.ಮಠಪತಿ ಅವರನ್ನು ಮಾತನಾಡಿಸಿದಾಗ, ಪ್ರತಿ ವರ್ಷವೂ ಮಲ್ಲಯ್ಯನ ಕಂಬಿಗಳು ಶ್ರೀಶೈಲಕ್ಕೆ ತೆರಳುತ್ತವೆ. ಅಲ್ಲಿ ಮಲ್ಲಯ್ಯನ ಜಾತ್ರೆ ಮುಗಿಸಿಕೊಂಡು ಹದಿನೈದು ದಿನಗಳ ನಂತರ ಕಂಬಿಗಳು ಆಗಮಿಸಿದ ನಂತರ ಶ್ರೀಶೈಲ ಮಲ್ಲಿಕಾರ್ಜುನ ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಬೋರಮ್ಮ ಎಂದು ಪೂಜೆಯನ್ನು ಮಾಡುವ ಮೂಲಕ ಶ್ರೀಶೈಲ ಕ್ಷೇತ್ರದ ಹರಕೆಯನ್ನು ತೀರಿಸುವ ಪದ್ದತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪ್ರತಿ ಗ್ರಾಮದಲ್ಲಿ ಮಲ್ಲಯ್ಯನ ಕಂಬಿಗಳು ಬಂದ ನಂತರವೇ ಈ ಪೂಜೆ ಎಲ್ಲರ ಮನೆಯಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ಎರಡು ತಿಂಗಳ ಕಾಲ ನಡೆಯುತ್ತದೆ. ಏ. 17 ರಂದು ಪಟ್ಟಣದಲ್ಲಿ ಐದೇಶಿ(ಬೋರಮ್ಮ) ಪೂಜೆಯನ್ನು ಭಕ್ತರು ಮಾಡುವರು ಎಂದರು.
ಕಂಬಿ ಮೆರವಣಿಗೆಯಲ್ಲಿ ಗುರುಸಂಗಯ್ಯ ಮಠಪತಿ, ವೀರಗಂಗಾಧರಯ್ಯ ಕಾಳಹಸ್ತೇಶ್ವರಮಠ, ಅಪ್ಪಯ್ಯ ಮಠಪತಿ, ಶ್ರೀಶೈಲ ಮಠಪತಿ, ಬಸವರಾಜ ಹಾರಿವಾಳ, ಚಂದ್ರಶೇಖರ ಮುರಾಳ, ಮಂಜು ಕುಂಬಾರ, ಈಶ್ವರ ಕುಂಬಾರ, ಅಶೋಕ ಕುಂಬಾರ, ಶ್ರೀಶೈಲ ಕುಂಬಾರ, ಕಿರಣ ಕುಲಕರ್ಣಿ, ಶ್ರೀಶೈಲ ಪತ್ತಾರ, ರಾಜು ನಾಲತವಾಡ, ಶ್ರೀಶೈಲ ಹೆಬ್ಬಾಳ
ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಸಾದ ವ್ಯವಸ್ಥೆ

ಪಟ್ಟಣದ ಬಸವೇಶ್ವರ ದೇವಸ್ಥಾನದ ಜೀರ್ಣೋದ್ದಾರಕರ ದಿ. ಮಲ್ಲಪ್ಪ ಸಿಂಹಾಸನ ಪ್ರತಿಮೆ ಆವರಣದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಸೇವಾ ಸಮಿತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 05, 2026

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ

ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ

ಜು.೭ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 05, 2026
    In ದಿನಪತ್ರಿಕೆ
  • ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರ್ಲಕ್ಷ್ಯ ಬೇಡ
    In (ರಾಜ್ಯ ) ಜಿಲ್ಲೆ
  • ಉಚಿತ ಬಸ್ ಪಾಸ್ ಶುಲ್ಕ ಮರುಪಾವತಿಗೆ ನೋಂದಣಿಗೆ ಅವಕಾಶ
    In (ರಾಜ್ಯ ) ಜಿಲ್ಲೆ
  • ಜು.೭ರಂದು ಉದ್ಯಮಶೀಲತಾ ಅರಿವು ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಯುಪಿಎಸ್‌ಸಿ ಪರೀಕ್ಷೆಯ ತರಬೇತಿಗಾಗಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಿವೃತ್ತ ಸೈನಿಕ ಕಾಶೀರಾಯ ಸನ್ಮಾನ ಇಂದು
    In (ರಾಜ್ಯ ) ಜಿಲ್ಲೆ
  • ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗುವವರೇ ಶಿಕ್ಷಕರು
    In (ರಾಜ್ಯ ) ಜಿಲ್ಲೆ
  • ಯಾಳವಾರ: ಪ್ರೌಢಶಾಲೆ ಸುವರ್ಣ ಮಹೋತ್ಸವ ಇಂದು
    In (ರಾಜ್ಯ ) ಜಿಲ್ಲೆ
  • ದಸರಾದಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ದಂತ ಮುರಿತ!
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆ ಪುರಸಭೆಯಿಂದ ಭೀಮನಭಾವಿ ಸ್ವಚ್ಚತೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.