Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ವಚನ ಚಿಂತನೆ
ವಿಶೇಷ ಲೇಖನ

ವಚನ ಚಿಂತನೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಚಿಂತನೆ
– ರೇಣುಕಾ ಬಾಗಲಕೋಟಿ
ಸೋಲಾಪುರ

ಉದಯರಶ್ಮಿ ದಿನಪತ್ರಿಕೆ

ಶರಣ ಹಡಪದ ಅಪ್ಪಣ್ಣನವರ ವಿವರಣೆ 12ನೇ ಶತಮಾನದಲ್ಲಿ ಅಪ್ಪ ಬಸವಣ್ಣನವರ ಜೊತೆ ಒಡನಾಡಿಯಾಗಿದ್ದರು ಆಪ್ತ ಕಾರ್ಯದರ್ಶಿಗಳಾಗಿದ್ದರು.
ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸವಿನಾಳ ಗ್ರಾಮದ ಚೆನ್ನವೀರಪ್ಪ ದೇವಕ್ಕಮ್ಮನವರ ಮಗ ಇವರು
ಇವರ ಪತ್ನಿ ಲಿಂಗಮ್ಮ ಇವರ ಅಂಕಿತನಾಮ ಬಸವ ಪ್ರೀಯ ಕೂಡಲ ಚನ್ನ ಬಸವಣ್ಣ, ಇವರು 250 ಹೆಚ್ಚು ವಚನಗಳನ್ನು ರಚಿಸಿದ್ದಾರೆ.
ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ ಎಂಬ ಅಂಕಿತನಾಮದಲ್ಲಿ ಇವರ ಧರ್ಮಪತ್ನಿ ಶರಣೆ ಲಿಂಗಮ್ಮನವರು 114 ವಚನಗಳನ್ನು ರಚಿಸಿದ್ದಾರೆ.
ಸಮರಸದ ಸಂಸಾರ ನಡೆಸಿದವರು ಶರಣ ದಂಪತಿಗಳು.
ವಚನ ವಿಶ್ಲೇಷಣೆ
ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ
ನಾನಾಡಿಯಿಟ್ಟು ನಡೆವುತಿರ್ದೆ ನಯ್ಯಾ
ಮುಂದೆ ಬರೆ ಬರೆ ಮಹಾ ಸರೋವರವ ಕಂಡೆ
ಸರೋವರದೊಳಗೊಂದು ಹಿರಿಯ ಮೃಗವ ಕಂಡೆ
ಆ ಮೃಗಕ್ಕೆ ಕೊಂಬುಂಟು ತಲೆ ಯಿಲ್ಲ
ಬಾಯುoಟು ಕಣ್ಣಿಲ್ಲ ಕೈಯುಂಟು ಹಸ್ತವಿಲ್ಲ
ಕಾಲುಂಟು ಹೆಜ್ಜೆಯಿಲ್ಲ ಒಡ ಲುoಟು ಪ್ರಾಣವಿಲ್ಲ
ಇದ ಕಂಡು ನಾ ಹೆದರಿ ಹವ್ವನೆ ಹಾರಿ ಬೆದರಿ ಬಿದ್ದೆನಯ್ಯಾ
ಆಗೆನ್ನ ಹೆತ್ತ ತಾಯಿ ಬಂದು ಎತ್ತಿ ಕುಳ್ಳಿರಿಸಿ
ಚಿತ್ತ ಮೂಲಾಗ್ನಿಯ ಒತ್ತಿ ಉರುಹಿದರೆ
ಇವೆಲ್ಲವು ಸುಟ್ಟು ಬಟ್ಟ ಬಯಲಾದವು
ಆ ಬಟ್ಟ ಬಯಲೊಳಗೆ ಅಡಿ ಯಿಟ್ಟು ನಡೆವಾಗ
ಮುಂದೆ ಇಟ್ಟಡಿಯ ಬಾಗಿಲೊಳಗೆ ಮತ್ತೊಂದು ಮೃಗವ ಕಂಡೆ
ಆ ಮೃಗಕ್ಕೆ ತಲೆ ಉಂಟು ಕೊಂಬಿಲ್ಲ
ಕಣ್ಣುoಟು ಬಾಯಿಲ್ಲ
ಹಸ್ತವುoಟು ಕೈಯಿಲ್ಲ ಹೆಜ್ಜೆಯುಂಟು ಕಾಲಿಲ್ಲ
ಪ್ರಾಣವುಂಟು ಒಡಲಿಲ್ಲ
ಇದ ಕಂಡು ನಾ ಅಪ್ಪಿಕೊಳ್ಳ ಹೋದಡೆ
ಮುಟ್ಟದ ಮುನ್ನವೆ ಎನ್ನನೆ ನುಂಗಿತ್ತು
ನುಂಗಿದ ಮೃಗ ಮಹಾಲಿಂಗದಲ್ಲಿಯೇ ಅಡಗಿತ್ತು
ಬಸವಲಿಂಗಪ್ರಿಯ ಕೂಡಲ ಚನ್ನಬಸವಣ್ಣ

ಸಮಗ್ರ ವಚನ ಸಂಪುಟ -9
ವಚನದ ಸಂಖ್ಯೆ -849

ಅಯ್ಯಾ ಯಾರು ಇಲ್ಲದ ಅರಣ್ಯದಲ್ಲಿ ಈ ಶರೀರವು ಒಂದು ಅರಣ್ಯ. ಅಂತರಂಗದ ಅರಣ್ಯ, ಅಂತರಂಗದಲ್ಲಿ ಧ್ಯಾನದಲ್ಲಿ ಕಣ್ಣು ಮುಚ್ಚಿ ಕುಳಿತಾಗ ಎನಗೆ ಬರಿ ಕತ್ತಲೆ ಕಾಣಿಸಿತು.
ನೇರ ನೋಟದ ಶರಣುಸ್ಥಲದಲ್ಲಿ ನಾನು ಅಡಿ ಇಟ್ಟು ನಡೆಯುತ್ತಿರುವಾಗ ದೃಷ್ಟ ಭಾವದಿಂದ ಮುಂದೆ ನೋಡುತ್ತಾ ಕುಳಿತಾಗ ಅಲ್ಲಿ ಮಹಾ ಸರೋವರ ಉಂಟೆಂದು ಅರಿವಾಯಿತು.
ಅದರಲ್ಲಿ ಅರಿ ಷಡ್ವರ್ಗಗಳು ಕಾಮ ಕ್ರೋಧ ,ಲೋಭ, ಮೋಹ ,ಮದ ಮತ್ಸರ, ಇವೆಲ್ಲದರಲ್ಲಿ ಹಿರಿಯ ಮೃಗವು ಕಂಡೆ.
ಇದು ಅಹಂಕಾರ ಮದ ಎನ್ನುವ ಈ ಮೃಗಕ್ಕೆ ತಲೆ ಇಲ್ಲ, ಕೋಡೆಂದರೆ ಅಹಂಕಾರ. ಮಾತನಾಡುವ ಬಾಯಿ ಉಂಟು ಇದು ಮನಸ್ಸು, ಇದಕ್ಕೆ ಕಣ್ಣಿಲ್ಲ ಕೈ ಉಂಟು ಎಂದರೆ ಇದು ಚಿತ್ತ ಚಿತ್ತದಿಂದ ಏನೆಲ್ಲಾ ಮುಟ್ಟಬಹುದು .ಆದರೆ ಹಸ್ತದಿಂದಲ್ಲ ,ಕಾಲು ಉಂಟು ಇದು ಚೈತನ್ಯ.
ಇದು ಶರೀರವೆಲ್ಲ ತಿರುಗಾಡುತ್ತದೆ ಆದರೆ ತಿರುಗಾಡಿದ ಹಾದಿಯ ಹೆಜ್ಜೆಯ ಗುರುತು ಕಾಣುವುದಿಲ್ಲ ಒಡಲಲ್ಲಿ ಅಂತರಂಗದಲ್ಲಿ ಶರೀರವೆಲ್ಲ ಈ ಚೈತನ್ಯ ತಿರಗಾಡುತ್ತದೆ.
ಆದರೆ ಇದು ಪ್ರಾಣವಲ್ಲ ಇದೆಲ್ಲವೂ ಅರಿತ ಮೇಲೆ ಕಂಡ ಮೇಲೆ ಹೆದರಿದೆನು ಬೆಚ್ಚನೆ ಬೆದರಿ ಕುಳಿತುಬಿಟ್ಟೆ. ವಿಚಾರದ ಸರಣಿಯಿಂದ ಕೆಳಕ್ಕೆ ಬಿದ್ದೇನಯ್ಯ, ಆಗ ನನ್ನ ಹೆತ್ತ ತಾಯಿ ಮೂಲಾಧಾರದಲ್ಲಿ ಇದ್ದ ಚೈತನ್ಯವೂ, ನನ್ನನ್ನು ಎತ್ತಿ ಕುಳ್ಳರಿಸಿ ಕುಂಡಲಿನಿ, ಎಂಬ ಅಗ್ನಿ, ಚಿತ್ತದಿಂದ ಎಡಗಾಲಿನಿಂದ ಒತ್ತಿ ಹಿಡಿದು ಊರ್ದ್ವಕ್ಕೆ ಕುಂಡಲಿನಿ ಶಕ್ತಿ ಮೇಲೇರಿದಾಗ ಒಂದೊಂದು ಸ್ಥಳಗಳನ್ನು, ಚಕ್ರಗಳನ್ನು, ಪಾರು ಮಾಡುತ್ತಾ ಮೇಲಿನ ಅರೆ ಷಡ್ವರ್ಗಗಳು ಸುಟ್ಟು ಹೋಗುತ್ತವೆ ಇವೆಲ್ಲವೂ ಸುಟ್ಟು ಚೈತನ್ಯ ಬಟ ಬಯಲಲ್ಲಿ ನಿಂದಾಗ ಮತ್ತೊಂದು ಮೃಗವ ಕಂಡೆ, ಅಮೃಗಕ್ಕೆ ಶಿವ ಶಕ್ತಿ ಒಂದಾದ ಚೈತನ್ಯವದು ಶರಣಸ್ಥಳದಲ್ಲಿ ನಿಂತ ಆ ಚೈತನ್ಯಕ್ಕೆ ಅಹಂಕಾರವಿಲ್ಲ. ಏಕೆಂದರೆ ಎಲ್ಲಾ ಅರಿ ಷಡ್ವರ್ಗಗಳು ಸುಟ್ಟು ಹೋಗಿವೆ.
ಇಲ್ಲಿ ತಲುಪಿ ದೃಷ್ಟಭಾವಧಿ ನೋಡುವ ಸಾಧಕನು ಧ್ಯಾನದಲ್ಲಿ ಕಂಡದ್ದನ್ನು ಹೇಳಲು ಆಗುವುದಿಲ್ಲ.
ಅದನ್ನು ಮುಟ್ಟಬೇಕೆನ್ನುವ ಆಸೆ ಸಾಧಕನಿಗೆ ಧ್ಯಾನದಲ್ಲಿ ಬರೀ ಅನುಭವ ಮಾಡಲು ಸಾಧ್ಯ ಇಲ್ಲಿ ಮುಟ್ಟಲು ಹಸ್ತವಿಲ್ಲ.
ಈ ಚೈತನ್ಯವು ಸಹಸ್ರಾರದಲ್ಲಿ ತಿರುಗಾಡುವ ಅನುಭವ ಆದರೆ ಅದಕ್ಕೆ ಕಾಲಿಲ್ಲ.
ಪ್ರಾಣವು ಒಡಲಲ್ಲಿ ಉಂಟೆಂದು ಅರಿತ ಸಾಧಕ ಇದನ್ನು ಅರಿತು ತಿಳಿದು ಅಪ್ಪಿಕೊಳ್ಳಲು ಹೋದರೆ ಅದು ಕೈಗೆ ಸಿಗುವುದಿಲ್ಲ ,ಅದರಲ್ಲಿ ಸಾಮರಸ್ಯವಾಗಿ ನನ್ನನ್ನು ತನ್ನಲ್ಲಿ ನುಂಗಿ ಒಂದೇ ಆಗಿ ನಿಂತಿತು.
ಅಲ್ಲಿ ನಾನು ಇಲ್ಲ ಅವನು ಇಲ್ಲ ಒಂದಾಯ್ತು. ದ್ವೈತ ಹೋಗಿ ಅದ್ವೈತವಾಗಿ ನಿಂತಿತು. ನುಂಗಿ ನಿಂತ ಮಹಾಘನ ಮಹಾಲಿಂಗದಲ್ಲಿ ಅಡಗಿತ್ತು.
ಬಸವ ಪ್ರಿಯ ಕೂಡಲ ಚನ್ನಬಸವಣ್ಣ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.