ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ “ನ್ಯಾಯ ಕ್ರಾಂತಿ” ಸಂಘವು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಆಗ್ರಹಿಸಿದರು. ಶುಕ್ರವಾರ ಪಟ್ಟಣದ ಉಪ ತಹಸಿಲ್ದಾರರ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಬಂದೇನವಾಜ್. ಕೆ. ನಾಶಿ, ಕೇಂದ್ರ ಬಿಜೆಪಿ ಸರ್ಕಾರವು ವಕ್ಸ್ ತಿದ್ದುಪಡೆ ಕಾಯ್ದೆ ಯನ್ನು ಲೋಕಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ಪಾಸ್ ಮಾಡಿ ಸಂವಿಧಾನಕ್ಕೆ ದ್ರೋಹ ಬಗೆದು ಐತಿಹಾಸಿಕ ಅನ್ಯಾಯವನ್ನು ಮಾಡಿದೆ, ಭಾರತ ದೇಶ ಸ್ವತಂತ್ರ ದಿಂದ ಇಲ್ಲಿಯ ವರೆಗೆ ಇಂತಹ ಕರಾಳ ದಿನವನ್ನು ಕಂಡಿರಲಿಲ್ಲ ಸಂವಿಧಾನದ ಅನುಚ್ಛೇಧ 25 ರಿಂದ 28 ರನ್ವಯ ಧಾರ್ಮಿಕ ಸ್ವಾತಂತ್ರವನ್ನು ಕೊಟ್ಟಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಸ್ಪಷ್ಟವಾಗಿರುವ ಸಂವಿಧಾನವನ್ನು ಉಲ್ಲಂಘಿಸಿ ಮುಸಲ್ಮಾನರನ್ನು ಹತ್ತಿಕ್ಕುವ ಏಕೈಕ ದುರುದ್ದೇಶದಿಂದ ಈ ಕಾನೂನನ್ನು ಪಾಸು ಮಾಡುವ ಮೂಲಕ ಮುಸಲ್ಮಾನರ ಧಾರ್ಮಿಕ ಆಸ್ತಿಗಳನ್ನು ಕೊಳ್ಳೆ ಹೊಡೆಯುವ ದುಷ್ಟ ಸಂಚು ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು. ಇದು ಸಂಪೂರ್ಣ ಸಂವಿಧಾನ ವಿರೋಧಿ ಯಾಗಿದ್ದು ಇದನ್ನು ಈ ಕೂಡಲೆ ಹಿಂಪಡೆಯಬೇಕು ಇಲ್ಲದಿದ್ದರೆ ದೇಶದಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಯಾವುದೆ ಕಾರಣಕ್ಕೂ ನಮ್ಮ ಸಂವಿಧಾನಿಕ ಹಕ್ಕನ್ನು ಕಸಿದು ಕೊಳ್ಳಲು ಸಾಧ್ಯವಿಲ್ಲ, ಕೇಂದ್ರದ ಬಿಜೆಪಿ ಸರ್ಕಾರದ ಪಕ್ಷಪಾತ ಧೋರಣೆಯನ್ನು ಸಂವಿಧಾನ ಸಹಿಸುವುದಿಲ್ಲಾ. ಈ ಕೂಡಲೆ ಈ ಸಂವಿಧಾನ ವಿರೋಧಿ ಕಾನೂನನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಅಮೀರಖಾನ್ ಇನಾಮದಾರ್, ಫಯಾಜ್, ಇಸ್ಮಾಯಿಲ್ ಸಾಸನೂರ್, ಬಂದೇನವಾಜ್ ಜಂಡೆವಾಲೆ, ಸೈಫುಲಾಲ್ ನಾಶಿ, ಎಂ.ಡಿ ಮೇಸ್ತ್ರಿ, ಹಾಗೂ ಇತರರು ಇದ್ದರು.

