ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ವಿದ್ಯಾನಗರ ಶ್ರೀಚನ್ನವೀರ ಸ್ವಾಮೀಜಿ ಉದ್ಯಾನವನದ ಹತ್ತಿರವಿರುವ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಅವರ ಮನೆಯ ಮೇಲೆ ಬಿಜೆಪಿ ಸಂಸ್ಥಾಪನ ದಿನವನ್ನು ಬಿಜೆಪಿ ಧ್ವಜ ಹಾರಿಸುವುದರ ಮೂಲಕ ಆಚರಣೆ ಮಾಡಲಾಯಿತು.
ಈ ವೇಳೆ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಸಿಂದಗಿ ನಗರದ ಘಟಕದ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಪಡಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಸಿದ್ದರಾಮ ಆನಗೊಂಡ ಇದ್ದರು.

