ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸನಾತನ ಹಿಂದೂ ಧರ್ಮದ ತತ್ವ ಸಿದ್ದಾಂತವನ್ನು ಇಡೀ ವಿಶ್ವಕ್ಕೆ ಪಸರಿಸಿದ ಕೀರ್ತಿ ಶ್ರೀರಾಮಚಂದ್ರರಿಗೆ ಸಲ್ಲುತ್ತದೆ ಎಂದು ಸಂಘ ಪರಿವಾರದ ಸದಸ್ಯ ಶೇಖರಗೌಡ ಪಾಟೀಲ ಹೇಳಿದರು.
ಸಿಂದಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಘ-ಪರಿವಾರ ನೇತೃತ್ವದಲ್ಲಿ ಸಿಂದಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ಪ್ರಪ್ರಥಮ ಬಾರಿಗೆ ಶ್ರೀರಾಮ ನವಮಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮ ಶಾಶ್ವತ. ಅಧರ್ಮ ಅಶಾಶ್ವತವೆಂದು ತಮ್ಮ ರಾಜ್ಯಾಢಳಿತದಲ್ಲಿ ಇಡೀ ಜಗತ್ತಿಗೆ ತೋರಿಸಿ ಕೊಟ್ಟವರು ಯಾರಾದರೂ ಇದ್ದರೇ ಅದು ಶ್ರೀರಾಮ ಎಂದರು.
ಈ ವೇಳೆ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾತನಾಡಿ, ತಂತ್ರಜ್ಞಾನದ ಪ್ರಗತಿಯೊಂದಿಗೆ ಜನರು ಧರ್ಮ ಮತ್ತು ಅಧರ್ಮದ ನಡುವಿನ ವ್ಯತ್ಯಾಸ ಅರಿತುಕೊಂಡು ಕರ್ಮದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಬೇಕು. ಎಲ್ಲರೂ ಧರ್ಮದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಸದಾ ಧರ್ಮದ ಹಾದಿಯಲ್ಲಿ ನ್ಯಾಯ, ನೀತಿ, ಧಾನ, ಧರ್ಮ ಮತ್ತು ಸತ್ಯದಿಂದ ನಡೆದ ಪ್ರಭು ಶ್ರೀರಾಮರ ಜೀವನ ಶೈಲಿ ಅಳವಡಿಸಿಕೊಂಡು ಎಲ್ಲರೂ ಸನಾತನ ಧರ್ಮದ ರಕ್ಷಣೆಯಲ್ಲಿ ಜೀವನ ಸಾಗಿಸುವಂತಾಗಬೇಕು ಎಂದು ಹೇಳಿದರು.
ಈ ವೇಳೆ ಸಿಂದಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ಪ್ರಪ್ರಥಮ ಬಾರಿಗೆ ಪಟ್ಟಣದ ಸಾರ್ವಜನಿಕರಿಗೆ ತಂಪಾದ ಪಾನಕ, ಮಜ್ಜಿಗೆ ಮತ್ತು ರೈಸ್‌ಬಾತ್ ಪ್ರಸಾದ ಸೇವೆ ಮಾಡಲಾಯಿತು. ಉತ್ಸವದಲ್ಲಿ ಸಿಂದಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯ ಸದಸ್ಯ ಬಸವರಾಜ ಸ್ಥಾವರಮಠ, ಬಸನಗೌಡ ಪಾಟೀಲ, ಅಶೋಕ ಕುಂಬಾರ, ಬಸವರಾಜ ಬಡಿಗೇರ, ಬಸವರಾಜ ಉಪ್ಪಾರ, ವಿಠ್ಠಲ ಶಿರಶ್ಯಾಡ, ಗುರು ಬಿರಾದಾರ, ಮುತ್ತು ಯಲಗಟ್ಟಿ, ಎಂ.ಎಸ್.ಗಂಗನಳ್ಳಿ, ಸುರೇಶ ಪಾಟೀಲ, ಹಣಮಂತ ಹಡಪದ, ರಾಜು ಬಿರಾದಾರ, ಬಸವರಾಜ ಸಿಂಧೆ, ವಿನೋಧ ಬಡಿಗೇರ, ಯಲ್ಲಾಲಿಂಗ ಪೂಜಾರಿ ಸೇರಿದಂತೆ ಸಂಘ ಪರಿವಾರ ಸದಸ್ಯರು ಹಾಗೂ ಶ್ರೀರಾಮನ ಭಕ್ತರು ಇದ್ದರು.

