ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ :ಬಾಗಲಕೋಟೆ ಜಿಲ್ಲೆಯ ಬನಹಟ್ಟಿ-ರಬಕವಿ ತಾಲೂಕಿನ ಯಲ್ಲಟ್ಟಿ ಕೊಣ್ಣೂರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಚಂದ್ರಕಾಂತ ರಾಮಪ್ಪ ಹೊಸೂರ ಅವರಿಗೆ ಡಾಕ್ಟರೇಟ್ ಪಿಎಚ್.ಡಿ ಪದವಿ ಲಭಿಸಿದೆ.
ಹೊಸೂರ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ “ಕೃಷ್ಣಾತೀರ ಕನ್ನಡ ಕಥನ ಸಾಹಿತ್ಯದಲ್ಲಿ ಸಾಂಸ್ಕೃತಿಕ ವಿನ್ಯಾಸಗಳು” (ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಮುಳುಗಡೆ ಪ್ರದೇಶದ ಪರಿಸರವನ್ನು ಅನುಲಕ್ಷಿಸು ) ಎಂಬ ಪ್ರಬಂಧವನ್ನು ಮಂಡಿಸಿದ್ದರು. ಕೆಎಲ್ಇ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ.ಬಿ.ಎಮ್.ಪಾಟೀಲ ಇವರ ಮಾರ್ಗದರ್ಶನದಲ್ಲಿ ಹೊಸೂರ ಅವರು ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪಿಎಚ್.ಡಿ ಪದವಿ ದೊರೆತಿದೆ.
ಈಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ೩೩ ನೇ ನುಡಿಹಬ್ಬದಲ್ಲಿ ರಾಜ್ಯಪಾಲರು ಸೇರಿದಂತೆ ಉನ್ನತ ಶಿಕ್ಷಣ ಸಚಿವರಾದ ಡಾ.ಎಮ್.ಸಿ.ಸುಧಾಕರ್ ಅವರು ಹಾಗೂ ಕುಲಪತಿಗಳಿಂದ ಚಂದ್ರಕಾಂತ ಹೊಸೂರ ಪಿಎಚ್.ಡಿ (ಡಾಕ್ಟರೇಟ್) ಪದವಿ ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದಾರೆ.
ಡಾಕ್ಟರೇಟ್ ಪಿಎಚ್.ಡಿ ಪದವಿ ಪಡೆದಿರುವ ಚಂದ್ರಕಾಂತ ಹೊಸೂರ ಅವರಿಗೆ ಕೊಣ್ಣೂರ ಕಾಲೇಜಿನ ಪ್ರಾಂಶುಪಾಲರಾದ ಪ್ರೊ,ಬಸವರಾಜ ಕೊಣ್ಣೂರ, ಆಡಳಿತಾಧಿಕಾರಿಗಳಾದ ಶೀತಲ ಕೊಣ್ಣೂರ, ಉಪ ಪ್ರಾಚಾರ್ಯರಾದ ಶಿವಾನಂದ ಕಂದಗಲ್ಲ, ಹಿರಿಯ ಸಾಹಿತಿಗಳಾದ ಶಿವಾನಂದ ದಾಶ್ಯಾಳ ಪ್ರಮುಖರು ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಎಲ್ಲ ಉಪನ್ಯಾಸಕರು,ಬೋಧಕೇತರ ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿ ಶುಭಕೋರಿದ್ದಾರೆ.

