ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಈ ವರ್ಷ ಮಳೆ, ಬೆಳೆ ಚೆನ್ನಾಗಿರುತ್ತದೆ ಎಂದು ಹಾಸನ ಜಿಲ್ಲೆಯ ಹಾರನಳ್ಳಿ ಕೊಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ಅವರು ಆಲಮೇಲ ತಾಲ್ಲೂಕಿನ ಕಡಣಿ ಗ್ರಾಮದ ಶರಣ ಭೋಗೇಶ್ವರ ಜಾತ್ರಾ ಮಹೋತ್ಸವದ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಸ್ವಾರ್ಥ ತುಂಬಿದ ವಾತಾವರಣ ಕಲ್ಮಶವಾಗಿರುವ ಇಂದಿನ ದಿನಗಳಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಗಳು ಶ್ಲಾಘನೀಯ, ಜ್ಞಾನ ತಿಳುವಳಿಕೆಗಳು ಬರಬೇಕಾದರೆ ಅರಿಷಡ್ ಗುಣಗಳು ಮೊದಲು ಹೋಗಲಾಡಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ” ಸಾಮೂಹಿಕ ವಿವಾಹಗಳು ಬಡವರಿಗೆ ಅನುಕೂಲವಾಗಿವೆ ಮತ್ತು ದುಂಡುವೆಚ್ಚಕ್ಕೆ ಕಡಿವಾಣ ಹಾಕಿದಂತಾಗಿದೆ ಎಂದು ಹೇಳಿ ನೀರು ಕೊಡುವ ಮತ್ತು ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಜಲಸಂಪನ್ಮೂಲ ಸಚಿವನಾಗಿ ನಿಭಾಯಿಸಿದ್ದೇನೆ, ಈಗ ಕೈಗಾರಿಕಾ ಮಂತ್ರಿಯಾಗಿ ಜಿಲ್ಲೆಯ ಹತ್ತು ಸಾವಿರ ಜನರಿಗೆ ಉದ್ಯೋಗ ಕೊಡುವಲ್ಲಿ ಪ್ರಮಾಣಿಕವಾಗಿ ನಡೆದುಕೊಳ್ಳುವೆ,ಇದು ಬದಲಾವಣೆಯ ಪರ್ವಕಾಲ, ಮನುಷ್ಯನ ಜಾಗದಲ್ಲಿ ಮಶೀನರಿಗಳು (ಎಐ) ಎಲ್ಲವೂ ಮಾಡಲಿವೆ, ಇಂತಹ ಶುಷ್ಕಸಮಯದಲ್ಲಿ ಉದ್ಯೋಗ ಸೃಷ್ಟಿಸುವುದು ಸವಾಲಿನ ಕೆಲಸವಾಗಿದೆ ಎಂದರು.
ಆಳಂದ ಶಾಸಕ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಮಾತನಾಡಿ ಭಾರತೀಯ ಸಂಸ್ಕೃತಿ ಏಕತೆ, ಭಾವ್ಯಕ್ಯತೆಯಿಂದ ಕೂಡಿದೆ, ಒಂದಾಗಿ ಬಾಳುವದನ್ನು ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳ ನಿರಂತರ ನಡೆಯಬೇಕು ಎಂದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆ ವಹಿಸಿ ನಮ್ಮ ತಂದೆಯವರ ಆಶಯದಂತೆ ಆಲಮೇಲಕ್ಕೆ ತೋಟಗಾರಿಕೆ ಕಾಲೆಜು ಮತ್ತು ಕಡಣಿ ಬ್ರೀಜ್ ಅನ್ನು ಎರಡು ಅನುಮೋದನೆಗೊಂಡಿದದ್ದು ಕೇಲವೆ ದಿನಗಳಲ್ಲಿ ಕೆಲಸ ಕಾರ್ಯಪ್ರಾಂಬಿಸಲಿವೆ ಎಂದರು ಮಾತನಾಡಿದರು.
ಸಾಮೂಹಿಕ ವಿವಾಹಮಹೋತ್ಸವದಲ್ಲಿ೧೩ ನವ ಜೋಡಿಗಳು ವಿವಾಹ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಧಾರ್ಮಿಕ ಸಭೆಯಲ್ಲಿ ಸೊನ್ನ ಶಿವಾನಂದ ಶ್ರೀಗಳು, ಆಲಮೇಲ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಗೋಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು, ಡಾ.ಸಂದೀಪ ಜೆ.ಪಾಟೀಲ ಮೊದಲಾದವರು ಸಾನಿಧ್ಯವಹಿಸಿದ್ದರು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕಗೌಡ ಕೊಳಾರಿ, ವೀರಶೈವ ಮಹಾಸಭಾದ ಬಸವರಾಜ ಕುಮಸಗಿ ಮೊದಲಾದವರು ವೇದಿಕೆಯಲ್ಲಿದ್ದರು.

