ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಡಾ ಬಾಬು ಜಗಜೀವನರಾಮ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಜಗಜೀವನರಾಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಸ್ವಾತಂತ್ರ‍್ಯ ಹೋರಾಟಗಾರ, ಧೀಮಂತ ನಾಯಕ, ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್ ರಾಮ್ ಅವರ ಸ್ಮರಣೆ ಮಾಡಲಾಯಿತು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ರಾಜ್ಯ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ್, ಈರಣ್ಣ ರಾವೂರ, ಸಾಬು ಮಾಶಾಳ, ಉಮೇಶ್ ಕೊಳಕೂರ, ಮಹೇಂದ್ರ ನಾಯಕ್, ಚಿದಾನಂದ ಚಲವಾದಿ, ಮಲ್ಲಿಕಾರ್ಜುನ್ ಜೋಗೂರ, ರವಿ ವಗ್ಗೆ, ಸಪ್ನ ಕಣ್ಮುಚ್ಚಿನಾಳ, ಶಿಲ್ಪ ಕುದ್ರುಗೊಂಡ, ಸಂಜೆಯ ಪಾಟೀಲ್ ಕನ್ಮಡಿ, ವಿಜಯ ಜೋಶಿ, ಕೃಷ್ಣ ಗೋನಾಳಕರ್, ಬಸವರಾಜ್ ಬೈಚಬಾಳ, ಬಸ್ಸು ಹೂಗಾರ್ ಭರತ್ ಕೋಳಿ, ರಾಜೇಶ್ ತೌಸೆ ವರಿಸ್ ಕುಲಕರ್ಣಿ, ಗುರು ತಳವಾರ ಸೇರಿದಂತೆ ಹಲವರು ಇದ್ದರು.

